ಪ್ರಧಾನಿ ನರೇಂದ್ರ ಗೃಹಪಯೋಗಿ ವಸ್ತುಗಳ ಮೇಲೆ GST ಹೇರಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಲೇ ಈ ತೆರಿಗೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.
GSTಯನ್ನು ಗೃಹಸ್ಥಿ ಸರ್ವನಾಶಿ ಟ್ಯಾಕ್ಸ್ ಎಂದು ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಈಗಾಗಲೇ ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಗಬ್ಬರ್ ಪಾಕವಿಧಾನವನ್ನ ತೋರಿಸಲಾಗುತ್ತಿದೆ. ಕಡಿಮೆ ಅಡುಗೆ ಮಾಡಿ , ಕಡಿಮೆ ತಿನ್ನಿ ಸುಳ್ಳುಗಳ ಸರಮಾಲೆಯಿಂದ ಹಸಿವನ್ನು ನೀಗಿಸಿಕೊಳ್ಳಿ.
ತಮ್ಮ ಆಪ್ತಮಿತ್ರರ ಮಾತುಗಳಿಗೆ ಕಿವಿಗೊಟ್ಟಿರುವ ಪ್ರಧಾನಿಯವರೇ ಸಾರ್ವಜನಿಕರ ಮಾತನ್ನು ಸಹ ಆಲಿಸಿ ಕೂಡಲೇ ಈ GSTಯನ್ನು ಹಿಂಪಡೆಯಿರಿ ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.