• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಮುರುಘಾ ಶ್ರೀಗಳಿಗೆ ಜೈಲು ಶಿಕ್ಷೆ ಖಾಯಂ ಆಗುತ್ತಾ..? ಚಾರ್ಜ್​’ಶೀಟ್’​ನಲ್ಲಿ ಏನಿದೆ..?

ಕೃಷ್ಣ ಮಣಿ by ಕೃಷ್ಣ ಮಣಿ
February 14, 2023
in ಅಂಕಣ
0
ಮುರುಘಾ ಶ್ರೀಗಳಿಗೆ ಜೈಲು ಶಿಕ್ಷೆ ಖಾಯಂ ಆಗುತ್ತಾ..? ಚಾರ್ಜ್​’ಶೀಟ್’​ನಲ್ಲಿ ಏನಿದೆ..?
Share on WhatsAppShare on FacebookShare on Telegram

ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾ ಸ್ವಾಮಿ ವಿರುದ್ಧ 2ನೇ ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಗ್ರಾಮಾಂತರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ADVERTISEMENT

ಪಿಐ ಬಾಲಚಂದ್ರ ನಾಯ್ಕ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಮುರುಘಾ ಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರೋದು ಸತ್ಯ ಎಂದು ಚಾರ್ಜ್​ಶೀಟ್’​ನಲ್ಲಿ ಪೊಲೀಸ್ರು ಉಲ್ಲೇಖಿಸಿದ್ದಾರೆ. ಜನವರಿ 10 ರಂದು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, ನಿನ್ನೆ ಚಾರ್ಜ್ ಶೀಟ್​’ಗೆ ನಂಬರ್ ನೀಡಿದೆ ಕೋರ್ಟ್. ಮುರುಘಾ ಸ್ವಾಮಿ ಪರ ವಕೀಲರು ಚಾರ್ಜ್ ಶೀಟ್ ಪ್ರತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ 13ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಮುರುಘಾ ಸ್ವಾಮಿ ಸೇರಿ 7 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಪೊಲೀಸ್ರು ಮಧ್ಯಂತರ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದೆ.

ಮೈಸೂರು ಕೇಸ್​, ಚಿತ್ರದುರ್ಗದಲ್ಲಿ ತನಿಖೆ, ಈಗ FIR..!

ಎ1 ಮುರುಘಾಮಠದ ಮುರುಘಾ ಸ್ವಾಮಿ, ಎ2 ವಾರ್ಡನ್ ರಶ್ಮಿ, ಎ3 ಮಠದ ಉತ್ತರಾಧಿಕಾರಿ ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ,  ಎ5 ವಕೀಲ‌ ಗಂಗಾಧರ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕೇಸ್ ದಾಖಲಾಗಿತ್ತು. ಮಠದ ಅಡುಗೆ ಸಹಾಯಕಿ  ಮೈಸೂರಿನಲ್ಲಿ ದೂರು ದಾಖಲು ಮಾಡಿದ್ದರು. ಮೈಸೂರಿನಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ವರ್ಗಾವಣೆ ಆದ ಬಳಿಕ ಪೊಲೀಸ್ರು ವಿಚಾರಣೆ ನಡೆಸಿದ್ದರು. ಮಠದ ಹಾಸ್ಟೆಲ್​ನಲ್ಲಿದ್ದ ತನ್ನ ಇಬ್ಬರು ಮಕ್ಕಳು, ಮತ್ತಿಬ್ಬರು ಮಕ್ಕಳು ಸೇರಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ದೂರು ದಾಖಲಿಸಿದ್ದರು. ಇದೀಗ 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದು, ಮೊದಲ ಭಾಗದ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದು, ಅಂತಿಮ ಚಾರ್ಜ್​’ಶೀಟ್​ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ.

ಬಾಲಕಿಯರಿಗೆ ಹಾಸ್ಟೆಲ್​ ವಾರ್ಡನ್​ನಿಂದ ಟೈಂ ಟೇಬಲ್​..!

ಸಂತ್ರಸ್ತರು ಸಿಆರ್​’ಪಿಸಿ ಸೆಕ್ಷನ್​ 161 ಹಾಗು 164 ಹೇಳಿಕೆ ಆಧಾರದ ಮೇಲೆ ಪೊಲೀಸ್ರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಎ1 ಮುರುಘಾ ಸ್ವಾಮಿ, ಎ2 ವಾರ್ಡನ್ ರಶ್ಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಿಆರ್​ಪಿಸಿ ಸೆಕ್ಷನ್​​ 173 (8) ಅಡಿಯಲ್ಲಿ ತನಿಖೆ ಮುಂದುವರೆದಿದೆ ಎಂದು ಚಾರ್ಜ್​ಶೀಟ್​ನಲ್ಲಿ ಸೇರಿಸಲಾಗಿದೆ. ದೂರಿನಲ್ಲಿ ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಮಾಡಲಾಗಿತ್ತು. ಆದರೆ ಆ ನಾಲ್ವರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ದೃಢಪಟ್ಟಿಲ್ಲ. ಇನ್ನಿಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಲಾಗಿದೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ. ವಾರ್ಡನ್ ರಶ್ಮಿ ಮುರುಘಾ ಸ್ವಾಮಿ ಬಳಿ  ಹೋಗಲು ಟೈಂ ಟೇಬಲ್ ಹಾಕಿದ್ದರು, ಪ್ರತಿದಿನ ಹಾಸ್ಟೆಲ್‌’ನ ಇಬ್ಬರು ಮಕ್ಕಳು ಮುರುಘಾ ಸ್ವಾಮಿ ಬಳಿ ಹೋಗಬೇಕಿತ್ತು. ದತ್ತು ಕೇಂದ್ರದ ಮಕ್ಕಳನ್ನೂ ಕರೆದುಕೊಂಡು ಹೋಗಬೇಕಿತ್ತು. ಲಾಕ್ ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುವುದು ಮುರುಘಾ ಸ್ವಾಮಿಗೆ ರೂಢಿ ಆಗಿತ್ತು ಎನ್ನುವ ಹೇಳಿಕೆ ಚಾರ್ಜ್’​ಶೀಟ್​’ನಲ್ಲಿದೆ. ಇನ್ನು ಮೊದಲ ಭಾನುವಾರ ಮುರುಘಾ ಸ್ವಾಮಿ ಬಳಿಗೆ ಹೋದಾಗ ಚಾಕೋಲೇಟ್ ನೀಡಿದ್ದರು. ಮಧ್ಯಾಹ್ನದವರೆಗೆ ಮುರುಘಾ ಸ್ವಾಮಿ ರೂಮ್​’ನಲ್ಲಿದ್ದು ಬಂದಿದ್ದೆ. ಪ್ರತಿ ಭಾನುವಾರ‌ ನಾನು ಮುರುಘಾ ಸ್ವಾಮಿಗೆ ರೂಮ್‌’ಗೆ ಹೋಗಬೇಕಿತ್ತು. ಸ್ವಾಮೀಜಿ ಕೊಟ್ಟ ಚಾಕೋಲೇಟ್​ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆ, ಎಚ್ಚರವಾದಾಗ ಸುಸ್ತು, ಕಾಲು ತೊಡೆ ಭಾಗದಲ್ಲಿ ನೋವಿತ್ತು. ಮತ್ತೊಂದು ಭಾನುವಾರ ಹೋದಾಗ ಮತ್ತೆ ಚಾಕೊಲೇಟ್​ ನೀಡಿದ್ದು, ನಿದ್ರೆಯಿಂದ ಎಚ್ಚರವಾದಾಗ ಮುರುಘಾ ಸ್ವಾಮಿ ಏನೋ ಮಾಡಿದ್ದಾರೆ ಎಂದು ತಿಳಿಯಿತು.

ಮುರುಘಾ ಸ್ವಾಮಿ ಬಳಿಗೆ ಹೋಗದಿದ್ರೆ ವಾರ್ಡನ್​ ರಶ್ಮಿ ಹಲ್ಲೆ..!

ಮುರುಘಾ ಮಠದ ಹಾಸ್ಟೆಲ್‌’ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢ ಆಗಿದ್ದು, ಮಕ್ಕಳು‌ ಮತ್ತು ಕುಟುಂಬಸ್ಥರ ಅನುಕಂಪ ಹಾಗು ಗೌರವ ಗಳಿಸಿ ದೌರ್ಜನ್ಯ ನಡೆಸಿದ್ದಾರೆ. ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡಿದ್ದರು. ಕೆಲವು ದಿನಗಳ ಬಳಿಕ ಟೈಂ ಟೇಬಲ್ ಬದಲಾದ ಕಾರಣ ನಾನು ಭಾನುವಾರದ ಬದಲು ಸೋಮವಾರ ಹೋಗಬೇಕಾಯಿತು. ಒಂದು ದಿನ ಕುರ್ಚಿ ಮೇಲೆ ಕುಳಿತಿದ್ದ ಮುರುಘಾ ಸ್ವಾಮಿ ತೊಡೆ ಮೇಲೆ ಕೂಡಿಸಿಕೊಂಡರು. ನನ್ನ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದರು. ನಾನು ಮುರುಘಾ ಸ್ವಾಮಿ ರೂಮಿನಲ್ಲಿ 2 ಸಲ ಮಲಗಿದ್ದಾಗ ನನ್ನನ್ನು ಬಳಸಿಕೊಂಡಿದ್ದಾರೆ ಅನ್ನಿಸುತ್ತಿದೆ. ಮುರುಘಾ ಸ್ವಾಮಿ ರೂಮ್’​ಗೆ ಹೋಗಿ ಬಂದಾಗಿನಿಂದ ಸರಿಯಾಗಿ ಪೀರಿಯಡ್ಸ್ ಆಗುತ್ತಿಲ್ಲ. ವಾರ್ಡನ್ ರಶ್ಮಿ ಟೈಂ ಟೇಬಲ್’​ನಂತೆ ಹೋಗದಿದ್ದರೆ ಹೊಡೆಯುತ್ತಿದ್ದರು ಎಂದು ಚಾರ್ಜ್’​ಶೀಟ್​’ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಚಾರ್ಜ್’​ಶೀಟ್​ ಸಂಪೂರ್ಣವಾಗಿ ಬಾಲಕಿಯರ ಹೇಳಿಕೆ ಆಧರಿಸಿಯೇ ಚಾರ್ಜ್​’ಶೀಟ್​ ಸಲ್ಲಿಕೆ ಮಾಡಲಾಗಿದೆ. ಈ ಕೇಸ್​’ನಲ್ಲಿ ಮುರುಘಾ ಸ್ವಾಮಿ ಕಂಬಿ ಹಿಂದೆ ಕಾಯಂ ಆಗಿ ಉಳಿದುಕೊಳ್ತಾರಾ..? ಅನ್ನೋ ಶಂಕೆ ಕಾಡುತ್ತಿದೆ.

Tags: ಚಿತ್ರದುರ್ಗಮುರುಘಾ ಮಠ
Previous Post

ವಿಸ್ಮೃತಿಯ ಕಣಜದಿಂದ ಹೆಕ್ಕಿ ತೆಗೆದ ರತ್ನಗಳು

Next Post

ಮಹಿಳೆಯರಿಗೆ, ರೈತರಿಗೆ ಬಂಪರ್ ಆಫರ್ ಘೋಷಿಸಿದ ಸಿದ್ದರಾಮಯ್ಯ

Related Posts

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ
ಅಂಕಣ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

by ಪ್ರತಿಧ್ವನಿ
May 27, 2026
0

ನಾ ದಿವಾಕರ ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಎಂದು ಪರಿಗಣಿಸಲು ಕಾರಣ ಎಂದರೆ ಈ ಶಾಸನಾತ್ಮಕ ಗ್ರಂಥದಲ್ಲಿ ಅಳವಡಿಸಲಾಗಿರುವ ಮಾನವೀಯ ಮೌಲ್ಯಗಳು. ನಮ್ಮ ಸಂವಿಧಾನ ಮೂಲತಃ ವ್ಯಕ್ತಿ...

Read moreDetails
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

May 26, 2026
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
Next Post
ಮಹಿಳೆಯರಿಗೆ, ರೈತರಿಗೆ ಬಂಪರ್ ಆಫರ್ ಘೋಷಿಸಿದ ಸಿದ್ದರಾಮಯ್ಯ

ಮಹಿಳೆಯರಿಗೆ, ರೈತರಿಗೆ ಬಂಪರ್ ಆಫರ್ ಘೋಷಿಸಿದ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada