• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಐಟಿ ಕಾಯ್ದೆ 2021ಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶ ಮಹತ್ವದ್ದು ಏಕೆ?

ಫಾತಿಮಾ by ಫಾತಿಮಾ
September 30, 2021
in ದೇಶ
0
ಐಟಿ ಕಾಯ್ದೆ 2021ಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶ ಮಹತ್ವದ್ದು ಏಕೆ?
Share on WhatsAppShare on FacebookShare on Telegram

ಮಾಹಿತಿ ತಂತ್ರಜ್ಞಾನ ನಿಯಮಗಳು 2021ನ್ನು ಸರ್ಕಾರ ಜಾರಿಗೆ ತರಲು ಉದ್ದೇಶಿಸಿದಂದಿನಿಂದಲೂ ಕಾಯ್ದೆ  ವಿವಾದಕ್ಕೊಳಗಾಗುತ್ತಲೇ ಇದೆ. ಹೊಸ ಐಟಿ ಕಾಯ್ದೆಯು ಪ್ರಜಾಪ್ರಭುತ್ವ ವಿರೋಧಿ‌ ಹಾಗೂ ಅಸಂವಿಧಾನಿಕ ಎಂಬ ಟೀಕೆ ವ್ಯಕ್ತವಾಗುತ್ತಲೇ ಇದೆ.‌ ಈ ಸಂಬಂಧ ಹಲವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಬಾಂಬೆ, ಕೇರಳ, ದೆಹಲಿ, ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.

ADVERTISEMENT

ಸರ್ಕಾರ ಅಧಿಸೂಚನೆ ಹೊರಡಿಸಿರುವ ಐಟಿ ಕಾಯ್ದೆಯ ಭಾಗ II ಡಿಜಿಟಲ್ ಮಧ್ಯವರ್ತಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಭಾಗ III ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವ ನಿಯಮಗಳನ್ನು ಒಳಗೊಂಡಿದೆ.

ಇದೀಗ ಮದ್ರಾಸ್ ಹೈಕೋರ್ಟ್ ಐಟಿ‌ ಕಾಯ್ದೆಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶವೊಂದನ್ನು ಹೊರಡಿಸಿದ್ದು “ಕೇಂದ್ರ ಸರ್ಕಾರಕ್ಕೆ ಮಾಧ್ಯಮಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುವ ಐಟಿ ನಿಯಮಗಳ ಮೀಡಿಯಾ ರೂಲ್ 9  ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು” ಎಂದಿದೆ. ಈ ತೀರ್ಪನ್ನು ಐಟಿ ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯಗಳ ತೀರ್ಪುಗಳಲ್ಲಿ  ಅತ್ಯಂತ ಮಹತ್ವದ ತೀರ್ಪು ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

ಯಾಕೆಂದರೆ ಈ ಮೊದಲು ಐಟಿ ಕಾಯ್ದೆಗೆ ಸಂಬಂಧಪಟ್ಟ ತೀರ್ಪು ನೀಡಿರುವ ವಿವಿಧ ನ್ಯಾಯಾಲಗಳು ಹೆಚ್ಚಿನ ಗಮನವನ್ನು ಭಾಗ IIIಕ್ಕೆ ನೀಡಿದ್ದವು. ಆದರೆ ಮದ್ರಾಸ್ ಹೈಕೋರ್ಟ್ ಉಲ್ಲೇಖಿಸಿರುವ ಮೀಡಿಯಾ ರೂಲ್ 9 ಭಾಗ IIರ ಅಡಿಯಲ್ಲಿ ಬರುತ್ತದೆ.

ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನಂತೆ ಪರಿಚ್ಛೇದ 19 (2)ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಸಮಗ್ರತೆ, ಸುಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಬಹುದು. ಆದರೆ ಹೊಸ ಐಟಿ ಕಾಯ್ದೆಯ ಭಾಗ IIರ ನಿಯಮ 9 ನೇರವಾಗಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ‌ ಕಸಿದುಕೊಳ್ಳುವಂತಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಯಾಕೆಂದರೆ ನಿಯಮ 3 (1) (b)(x) ಯಂತೆ ಮಧ್ಯವರ್ತಿ ಪ್ಲಾಟ್‌ಫಾರ್ಮ್‌ಗಳು ‘ಪೇಟೆಂಟ್ ಸುಳ್ಳು ಮತ್ತು ಅಸತ್ಯ’ ಎಂಬ ಕಾರಣ ನೀಡಿ ಯಾವುದೇ ಮಾಹಿತಿಯನ್ನು ಪ್ರಕಟಿಸುವುದನ್ನು ತಡೆಹಿಡಿಯಬಹುದು. ಈ ನಿರ್ಬಂಧಗಳು ಆರ್ಟಿಕಲ್ 19 (2) ರ ವ್ಯಾಪ್ತಿಯನ್ನು ಮೀರಿದ್ದು ಎಂದು‌ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಆರ್ಟಿಕಲ್ 19 (2)ರ ಮಿತಿಯನ್ನು ಉಲ್ಲಂಘಿಸುತ್ತದೆ ಮತ್ತು ಕಾನೂನಿನ‌ ಮಾನದಂಡಗಳನ್ನು ಪ್ರತಿನಿಧಿಸದ ಹಾಗೂ ಅಸ್ಪಷ್ಟ ಪದಗಳನ್ನು ಹೊಂದಿವೆ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗಳನ್ನು ಎದುರಿಸಿದ ಐಟಿ ನಿಯಮ 2021ರ ಭಾಗ IIರ ನಿಯಮ 9ನ್ನು ಇದೀಗ ಮದ್ರಾಸ್ ಹೈಕೋರ್ಟ್ ಶ್ರೇಯಾ ಸಿಂಘಾಲ್ ತೀರ್ಪಿನ ಆಧಾರದ ಮೇಲೆಯೇ ಪರಿಶೀಲಿಸಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಇದರ ಹೊರತಾಗಿಯೂ ಈ ತೀರ್ಪು ಮಹತ್ವದ್ದಾಗಿದೆ. ಏಕೆಂದರೆ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ನಿಯಮಗಳಿಗೆ ಅನುಮತಿ ನೀಡಲು ಅಂತರ್ಗತ ಸಮಸ್ಯೆಗಳಿವೆ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ನ ತೀರ್ಪಿಗೆ  ಮದ್ರಾಸ್ ಹೈಕೋರ್ಟ್ ಸಹ ಸಹಮತ ವ್ಯಕ್ತಪಡಿಸಿದ್ದು “ಮಾಧ್ಯಮಗಳನ್ನು ನಿಯಂತ್ರಿಸಬಯಸುವ ಸರ್ಕಾರದ ಕಾರ್ಯ ವಿಧಾನವು ಸಂವಿಧಾನದ ನಾಲ್ಕನೇ ಅಂಗದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದು  ಮತ್ತು ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದೂ ಸಹ ಹೇಳಿದೆ.

ಕೇದ್ರ ಸರ್ಕಾರ ರೂಪಿಸಿರುವ ನಿಯಮಗಳ ಅಂತಿಮ ತೀರ್ಪುಗಾರನಾಗುವುದು ಸುಪ್ರೀಂ ಕೋರ್ಟ್ ಮಾತ್ರ ಎನ್ನುವುದು ನಿಜವಾದರೂ ಸುಪ್ರೀಂ ಕೋರ್ಟ್ ತನ್ನ ತೀರ್ಪು ಹಾಗೂ ಆದೇಶ ನೀಡುವವರೆಗೂ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವು ಆಶಾದಯಕವಾಗಿದೆ ಎಂದೇ ಹೇಳಬಹುದು.

Tags: BJPCongress Partyincome taxIncome Tax DepartmentMadras High Courtನರೇಂದ್ರ ಮೋದಿಬಿಜೆಪಿ
Previous Post

ಹತ್ರಾಸ್ ಗುಂಪು ಅತ್ಯಾಚಾರ ಪ್ರಕರಣ: ತೀವ್ರವಾದ ಜಾತೀಯತೆ, ಆರೋಪಿತರ ಕೇಳದ ಕೂಗು, ರಾಜಕೀಯ ಮುಖಂಡರ ನಿರಾಗಮನ (ಭಾಗ 2)

Next Post

ಕೋವಿಡ್‌ನಿಂದ ಅನಾಥರಾದ ಮಕ್ಕಳ ಪರೀಕ್ಷಾ ಶುಲ್ಕ ರದ್ದು: ಎಲ್ಲಾ ಶಿಕ್ಷಣ ಮಂಡಳಿಗಳಿಗೂ ಮಾದರಿಯಾಗಬೇಕಿದೆ CBSE ಈ ನಿಲುವು.!

Related Posts

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್
Top Story

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

by ಪ್ರತಿಧ್ವನಿ
February 1, 2026
0

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಇಂದು ಲೋಕಸಭೆಯಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ಮಧ್ಯಮ ವರ್ಗದ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು ಆದಾಯ...

Read moreDetails
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

February 1, 2026
Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

February 1, 2026
Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

February 1, 2026
Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

February 1, 2026
Next Post
ಕೋವಿಡ್‌ನಿಂದ ಅನಾಥರಾದ ಮಕ್ಕಳ ಪರೀಕ್ಷಾ ಶುಲ್ಕ ರದ್ದು: ಎಲ್ಲಾ ಶಿಕ್ಷಣ ಮಂಡಳಿಗಳಿಗೂ ಮಾದರಿಯಾಗಬೇಕಿದೆ CBSE ಈ ನಿಲುವು.!

ಕೋವಿಡ್‌ನಿಂದ ಅನಾಥರಾದ ಮಕ್ಕಳ ಪರೀಕ್ಷಾ ಶುಲ್ಕ ರದ್ದು: ಎಲ್ಲಾ ಶಿಕ್ಷಣ ಮಂಡಳಿಗಳಿಗೂ ಮಾದರಿಯಾಗಬೇಕಿದೆ CBSE ಈ ನಿಲುವು.!

Please login to join discussion

Recent News

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್
Top Story

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

by ಪ್ರತಿಧ್ವನಿ
February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ
Top Story

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

by ಪ್ರತಿಧ್ವನಿ
February 1, 2026
Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ
Top Story

Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

by ಪ್ರತಿಧ್ವನಿ
February 1, 2026
Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ
Top Story

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

by ಪ್ರತಿಧ್ವನಿ
February 1, 2026
Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ
Top Story

Union Budget 2026: ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!