• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರ್ನಾಟಕ ಸರ್ಕಾರದ ಜಾತಿ ಜನಗಣತಿಗೆ ಕೇಂದ್ರದಿಂದ ಕೌಂಟರ್.. ಅವೈಜ್ಞಾನಿಕ ಎಂದಿದ್ಯಾಕೆ..?

ಪ್ರತಿಧ್ವನಿ by ಪ್ರತಿಧ್ವನಿ
April 30, 2025
in Top Story, Uncategorized, ಇತರೆ / Others, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಜಾತಿ ಜನಗಣತಿ ಘೋಷಣೆ ಬಗ್ಗೆ ಗೊಂದಲದಲ್ಲಿ ಮುಳುಗಿರುವಾಗಲೇ ಕೇಂದ್ರ ಸರ್ಕಾರ ಜನಗಣತಿ ಘೋಷಣೆ ಮಾಡಿದೆ. ಜನಗಣತಿ ಜೊತೆಗೆ ಜಾತಿಗಣತಿ ಮಾಡುವುದಾಗಿ ಘೋಷಿಸಿದೆ. ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಯುತ್ತದೆ. 2011ರಲ್ಲಿ ಜನಗಣತಿ ನಡೆದಿದ್ದು, ಆ ಬಳಿಕ 2021ರಂದು ಜನಗಣತಿ ನಡೆಯಬೇಕಿತ್ತು. ಆದರೆರ ಕೊರೋನಾ ಕಾರಣಕ್ಕೆ ಜನಗಣತಿ ನಡೆದಿರಲಿಲ್ಲ, ಇದೀಗ ಜನಗಣತಿ ಘೋಷಣೆ ಮಾಡಿದ್ದು, ಜಾತಿಗಣತಿಯನ್ನೂ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ADVERTISEMENT

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್​, ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಜನಗಣತಿ ಸರ್ವೇ ಮಾಡಲಿದೆ ಅಂತಾ ತಿಳಿಸಿದ್ರು. ಸಚಿವ ಸಂಪುಟ ಸಭೆ ಬಳಿಕ ಪಾಕ್​ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜಾತಿ ಜನಗಣತಿ ಬಗ್ಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಅವೈಜ್ಞಾನಿಕವಾಗಿ ಜಾತಿ ಜನಗಣತಿ ಸರ್ವೇ ಮಾಡಿಕೊಂಡು ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ದೇಶದಲ್ಲಿ ಜಾತಿಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಬೇರೆ ಯಾವುದೇ ಸಮೀಕ್ಷೆಗಳ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅಶ್ವಥನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ಜಾತಿ ಜನಗಣತಿ ಹಾಗೂ ಜನಗಣತಿ ಮಾಡ್ತಿರೋದಕ್ಕೆ ಸ್ವಾಗತ, ಪ್ರಧಾನಿ ಮೋದಿಯವರಿಗೆ ಅಭಿನಂದನೆ ತಿಳಿಸ್ತೇವೆ ಎಂದಿದ್ದಾರೆ. ಈ‌ ಬಾರಿ ಜಾತಿ ಜನಗಣತಿಯನ್ನೂ ಸೇರಿಸಿ ಜನಗಣತಿ ಮಾಡ್ತಿರೋದು ವಿಶೇಷ. ನಮ್ಮ ರಾಜ್ಯದಲ್ಲಿ ಜಾತಿ ಜನಗಣತಿ ಮೂಲಕ ದೊಡ್ಡ ಗೊಂದಲ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಈಗಾಗಲೇ ಅಭಿಪ್ರಾಯ ತಿಳಿಸಿದ್ದು, ಕಾಂಗ್ರೆಸ್ ಸರ್ಕಾರ ಸಮಾಜಗಳ ಮಧ್ಯೆ ಒಡಕು ತಂದು ಗೊಂದಲ ಮೂಡಿಸಿತ್ತು. ಈಗ ಕೇಂದ್ರವೇ ಎಲ್ಲ ಗೊಂದಲಕ್ಕೆ ತೆರೆ ಎಳೆದು ಜಾತಿ‌ಜನಗಣತಿ ಮಾಡುವ ಘೋಷಣೆ ಮಾಡಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ವ್ಯವಸ್ಥಿತವಾಗಿ ಜಾತಿ ‌ಜನಗಣತಿ ನಡೆಯಲಿದೆ ಎಂದಿರುವ ಮಾಜಿ ಸಚಿವ ಅಶ್ವತ್ಥ ನಾರಾಯಣ್​,. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜಾತಿ ಜನಗಣತಿಗೆ ಕಾನೂನು ಮಾನ್ಯತೆ ಸಿಕ್ಕಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ಸಮೀಕ್ಷೆ ಮಾಡಿಸಿತ್ತು. ಕಾಂಗ್ರೆಸ್ ಪಕ್ಷದ ದುರುದ್ದೇಶದಿಂದ ಸಮಾಜಗಳ ನಡುವೆ ಗೊಂದಲ ಮೂಡಿಸಿತ್ತು, ಈಗ ಇದಕ್ಕೆಲ್ಲ ತೆರೆ ಎಳೆಯಲು ಕೇಂದ್ರ ಸರ್ಕಾರವೇ ಜಾತಿ ಜನಗಣತಿ ಮಾಡಲಿದೆ ಎಂದಿದ್ದಾರೆ.

ಸಂಸದ ಗೋವಿಂದ ಕಾರಜೋಳ ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ತೆಗೆದುಕೊಂಡ ಜಾತಿಗಣತಿ ನಿರ್ಣಯ ಐತಿಹಾಸಿಕವಾಗಿದೆ. ಈ ನಿರ್ಣಯವನ್ನು ಸ್ವಾಗತ ಮಾಡುತ್ತೇವೆ. ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಅವರನ್ನು ಮೇಲೆತ್ತಲು ಈ ಜಾತಿಗಣತಿ ‌ಅನುಕೂಲಕರ ಆಗಿದೆ. ಸಿದ್ದರಾಮಯ್ಯ ಹತ್ತು ವರ್ಷಗಳಿಂದ ಜಾತಿ ಗಣತಿ ಮಾಡುತ್ತೇವೆ ಎಂದರು. ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಏನು ಮಾಡಿಲ್ಲ, ಕೇವಲ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

Tags: ashwath narayanBJPCongress PartyKarnataka Govtನರೇಂದ್ರ ಮೋದಿಸಿದ್ದರಾಮಯ್ಯ
Previous Post

ಭಯೋತ್ಪಾದನೆಯ ಮೂಲೋಚ್ಚಾಟನೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ಜಾತಿಗಣತಿಗೆ ನಿರ್ಧಾರ.. ಕಾಂಗ್ರೆಸ್​ನಲ್ಲೇ ಶುರುವಾಯ್ತು ತಲ್ಲಣ..

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ಜಾತಿಗಣತಿಗೆ ನಿರ್ಧಾರ.. ಕಾಂಗ್ರೆಸ್​ನಲ್ಲೇ ಶುರುವಾಯ್ತು ತಲ್ಲಣ..

ಜಾತಿಗಣತಿಗೆ ನಿರ್ಧಾರ.. ಕಾಂಗ್ರೆಸ್​ನಲ್ಲೇ ಶುರುವಾಯ್ತು ತಲ್ಲಣ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada