• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಾತಿಗಣತಿಗೆ ನಿರ್ಧಾರ.. ಕಾಂಗ್ರೆಸ್​ನಲ್ಲೇ ಶುರುವಾಯ್ತು ತಲ್ಲಣ..

ಕೃಷ್ಣ ಮಣಿ by ಕೃಷ್ಣ ಮಣಿ
May 1, 2025
in Top Story, ಕರ್ನಾಟಕ, ರಾಜಕೀಯ
0
ಜಾತಿಗಣತಿಗೆ ನಿರ್ಧಾರ.. ಕಾಂಗ್ರೆಸ್​ನಲ್ಲೇ ಶುರುವಾಯ್ತು ತಲ್ಲಣ..
Share on WhatsAppShare on FacebookShare on Telegram

ಕೇಂದ್ರ ಸರ್ಕಾರ ಜಾತಿ ಜನಗಣತಿ ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ತುರ್ತು ಸಭೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಕಾಂಗ್ರೆಸ್​ ಹೋರಾಟಕ್ಕೆ ಮಣಿದು ಜಾತಿ ಜನಗಣತಿ ಮಾಡಲು ಮುಂದಾಗಿದೆ. ಇದು ಕಾಂಗ್ರೆಸ್​ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ ಎಂದಿದೆ ಕಾಂಗ್ರೆಸ್​. ಈ ಹಿಂದೆ ಜಾತಿ ಜನಗಣತಿ ಮಾಡುವಂತೆ ಕಾಂಗ್ರೆಸ್​ ಒತ್ತಾಯ ಮಾಡಿತ್ತು. ಇದೀಗ ಕಾಂಗ್ರೆಸ್​ ಪಕ್ಷದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ಮುಂದಾಗಿದೆ ಎಂದಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ADVERTISEMENT

ಕೇಂದ್ರ ಸರ್ಕಾರಿದಂದ ಜಾತಿ ಜನಗಣತಿಗೆ ತೀರ್ಮಾನ ವಿಚಾರದ ಬಗ್ಗೆ ಬಾಗಲಕೋಟೆಯ ಕೂಡಲಸಂಗಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಜಾತಿ ಜನಗಣತಿ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೆವು. ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿ ಮಾಡ್ತೇವೆ ಎಂದು ಹೇಳಿದ್ದೆವು. ನನಗೆ ಗೊತ್ತಿಲ್ಲ ಅವ್ರು ಯಾವ ಜನಗಣತಿ ಮಾಡ್ತಾರೆ ಅಂತ. ಅವ್ರು ಸಾಮಾಜಿಕ ಜನಗಣತಿ ಮಾಡ್ತಾರಾ? ಆರ್ಥಿಕ ಜನಗಣತಿ ಮಾಡ್ತಾರಾ? ಅಥವಾ ಜಾತಿ ಜನಗಣತಿ ಮಾಡ್ತಾರಾ ನನಗೆ ಗೊತ್ತಿಲ್ಲ, ಅದನ್ನು ನೋಡಿಬಿಟ್ಟು ನಾನು ಪ್ರತಿಕ್ರಿಯೆ ನೀಡ್ತೇನೆ. ಈಗಿನದು ಕೇವಲ ಜಾತಿ ಗಣತಿ, ಜನಗಣತಿ ಮಾಡ್ತೀವಿ ಅಂದಿದ್ದಾರೆ. ಸಾಮಾಜಿಕ, ಆರ್ಥಿಕ ಸರ್ವೆ ಬಹಳ ಮುಖ್ಯ. ಸಾಮಾಜಿಕ ನ್ಯಾಯ ಕೊಡಬೇಕಾದ್ರೆ ಸಾಮಾಜಿಕ, ಆರ್ಥಿಕ ಸರ್ವೆ ಮಾಡಬೇಕಾಗುತ್ತದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿದ ಸಚಿವ ಖಂಡ್ರೆ ಸ್ವಾಗತಿಸಿದ್ದಾರೆ. ದೇಶದಾದ್ಯಂತ ಜಾತಿಗಣತಿ ಆಗಬೇಕೆಂಬುವುದು ನಮ್ಮ ಪಕ್ಷದ ಬೇಡಿಕೆಯಾಗಿತ್ತು. ಸಾಮಾಜಿಕ ನ್ಯಾಯ ಎಲ್ಲ ಸಮುದಾಯಕ್ಕೆ ಸಿಗಬೇಕೆಂಬುವುದು ಸಾಂವಿಧಾನಿಕ ಹಕ್ಕಾಗಿದೆ. ಇವತ್ತು ಜಾತಿಗಣತಿಯ ಬಗ್ಗೆ ಬಿಜೆಪಿ ಕೇಂದ್ರ ಸರ್ಕಾರ ಕಣ್ತೆರೆದಿದೆ. ಕೇಂದ್ರ ಸರ್ಕಾರದ ಜಾತಿಗಣತಿ ಮಾಡ್ತೀನಿ ಅಂತಾ ಘೋಷಿಸಿರುವುದನ್ನ ಸ್ವಾಗತಿಸುತ್ತೇನೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಪ್ರತಿಯೊಂದ ಸಮಾಜದ ಹಿಂದುಳಿದಿರುವಿಕೆಯನ್ನ, ಯಾವುದೇ ಅಪಸ್ವರ ಇಲ್ಲದೇ, ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಜಾತಿಗಣತಿ ಮಾಡಬೇಕು ಎಂದಿದ್ದಾರೆ.

ಜಾತಿಗಣತಿ ವಾಸ್ತವಾಂಶದಿಂದ ಕೂಡಿರಬೇಕು, ಸರ್ವ ಸಮಾಜದ, ದೇಶದ ಅಭಿವೃದ್ಧಿಗೆ ಅಡಿಪಾಯ ಆಗುವ ದೃಷ್ಟಿಕೋನದಲ್ಲಿ ಜಾತಿಗಣತಿ ಆಗಬೇಕು. 1931ರ ಬಳಿಕ ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಜಾತಿಗಣತಿ ಆಗ್ತಿರುವುದನ್ನ ಸ್ವಾಗತಿಸುತ್ತೇನೆ. ರಾಜ್ಯದಲ್ಲಿ ಜಾತಿಗಣತಿ ವರದಿ ಗೊಂದಲ, ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಜಾತಿಗಣತಿಯನ್ನ ಆದಷ್ಟು ಶೀಘ್ರವೇ ಮಾಡಲಿ ಎಂದು ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಜಾತಿ ಗಣತಿ ಗೊಂದಲದ ಗೂಡಾಗಿರುವ ಬೆನ್ನಲ್ಲೇ ಕೇಂದ್ರ ಜಾತಿ ಗಣತಿಗೆ ಮುಂದಾಗಿರುವುದು ಕಾಂಗ್ರೆಸ್​ ನಾಯಕರಿಗೆ ಟೆನ್ಷನ್​ ಆದಂತೆ ಕಾಣ್ತಿದೆ.

Tags: congress on caste censuseditorial analysis of the hindueditorial discussion for ias upsc in hindithe hinduthe hindu analysisthe hindu analysis in englishthe hindu analysis in hindithe hindu analysis todaythe hindu daily news analysisthe hindu daily news analysis in hindithe hindu editorialthe hindu editorial analysis for clatthe hindu for clatthe hindu newspaper todaythe indian express editorial analysis in hindi
Previous Post

ಕರ್ನಾಟಕ ಸರ್ಕಾರದ ಜಾತಿ ಜನಗಣತಿಗೆ ಕೇಂದ್ರದಿಂದ ಕೌಂಟರ್.. ಅವೈಜ್ಞಾನಿಕ ಎಂದಿದ್ಯಾಕೆ..?

Next Post

ಸರ್ಕಾರಿ ಬಸ್​ ನಿಲ್ಲಿಸಿ ಮಾರ್ಗ ಮಧ್ಯೆ ನಮಾಜ್​.. ಶಿಸ್ತು ಕ್ರಮಕ್ಕೆ ಸೂಚನೆ

Related Posts

ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!
Top Story

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

by ಪ್ರತಿಧ್ವನಿ
May 23, 2026
0

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಪೇಜ್‌ಗೆ ಸಂಬಂಧಿಸಿದಂತೆ ಅದರ ಅಡ್ಮಿನ್ ಅಭಿಜಿತ್ ದಿಪ್ಕೆ ಮಹತ್ವದ ಹೇಳಿಕೆ ನೀಡಿದ್ದಾರೆ. “ಸಿಜೆಪಿ ಹೆಸರಿನಲ್ಲಿ...

Read moreDetails
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

May 23, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
Next Post
ಸರ್ಕಾರಿ ಬಸ್​ ನಿಲ್ಲಿಸಿ ಮಾರ್ಗ ಮಧ್ಯೆ ನಮಾಜ್​.. ಶಿಸ್ತು ಕ್ರಮಕ್ಕೆ ಸೂಚನೆ

ಸರ್ಕಾರಿ ಬಸ್​ ನಿಲ್ಲಿಸಿ ಮಾರ್ಗ ಮಧ್ಯೆ ನಮಾಜ್​.. ಶಿಸ್ತು ಕ್ರಮಕ್ಕೆ ಸೂಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada