ರಾಜ್ಯ ವಿಧಾಸಭಾ ಅಧಿವೇಶನದಲ್ಲಿ (Budget session) ಇಂದು ನಡೆದ ಗಡ್ಡ ಗಲಾಟೆಗಳಿಗೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (Dcm dk Shivakumar) ಪ್ರತಿಕ್ರಿಯಿಸಿದ್ದಾರೆ. ಹನಿ ಟ್ರ್ಯಾಪ್ ವಿಚಾರ ಹಿಡಿದು ಗದ್ದಲ ಎಬ್ಬಿಸಿದ ಬಿಜೆಪಿ (Bjp) ಸಂಸ್ಕೃತಿ ಹೀನ ಪಕ್ಷವಾಗಿದೆ. ಅವ್ರಿಗೆ ಹೇಗೆ ನಡೆದುಕೊಳ್ಳಬೇಕು ಅನ್ನೊದು ಗೊತ್ತಿಲ್ಲ. ಗೊತ್ತಿದ್ರೇ ಹೀಗೆ ಮಾಡ್ತಿದ್ರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ರಾಜ್ಯದ ವಿಧಾನಸಭಾ ಇತಿಹಾಸದಲ್ಲಿ ಈ ರೀತಿಯ ವರ್ತನೆ ಇದುವರೆಗೂ ನಡೆದಿಲ್ಲ.ಹನಿಟ್ರಾಫ್ ವಿಚಾರದಲ್ಲಿ ಸಿಎಂ ಮತ್ತು ಗೃಹ ಸಚಿವರು ಈಗಾಗಲೇ ಮಾತನಾಡಿ ತನಿಖೆಗೆ ನೀಡೋದಾಗಿ ಹೇಳಿದ್ದಾರೆ.ಮೊದಲು ಯಾರಾದರೂ ದೂರು ದಾಖಲಿಸಲಿ ಎಂದು ಡಿಕೆ ಹೇಳಿದ್ದಾರೆ.
ಇನ್ನು ವಿಧಾನಸೌಧದಲ್ಲಿ ಏನಾಗಿದೆ ಅನ್ನೊದು ಎಲ್ಲಿರಗೂ ಗೊತ್ತಿದೆ.ವಿಧಾನಸೌಧದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ.ಯಾರು ಹೋಗಿ ಕೋರ್ಟ್ ನಲ್ಲಿ ಸ್ಟೇ ತಂದಿದ್ದು?ಈ 9 ಜನ ಬಾಂಬೆ ಬಾಯ್ಸ್ ಹೋಗಿ ಸ್ಟೇ ಯಾಕೆ ತಂದ್ರು.? ಎಂದು ಕಿಡಿಕಾರಿದ್ದಾರೆ.