ಬೀದರ್: ಮಾ.೨೮: ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಎಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಎಎಪಿಗೆ ಜನತೆ ಒಮ್ಮೆ ಅವಕಾಶ ನೀಡಬೇಕು ಎಂದು ಆಪ್ ಮುಖಂಡ, ಚಿತ್ರನಟ ಟೆನ್ನಿಸ್ ಕೃಷ್ಣ ಮನವಿ ಮಾಡಿದರು.
ಬೀದರ್ ತಾಲೂಕಿನ ಮಗದಳ ಗ್ರಾಮದ ಬಿಎಸ್‌ಎಸ್‌ಕೆ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕರ್ನಾಟಕದಲ್ಲೂ ಬಾರಿ ಬದಲಾವಣೆಯಾಗಲಿದೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ. ಪಂಜಾಬ್, ದೆಹಲಿ ಮಾದರಿ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರಕ್ಕೆ ತರಲು ಜನರು ತೀರ್ಮಾನಿಸಿದ್ದಾರೆ. ನಮ್ಮ ಪಕ್ಷ ಜನಪರ ಆಡಳಿತ ನೀಡುವುದರ ಜೊತೆಗೆ ಉಚಿತ ಆರೋಗ್ಯ, ಶಿಕ್ಷಣದಂತಹ ಜನಪರ ಯೋಜನೆಗಳು ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತರಲಾಗುವುದು ಎಂದು ಹೇಳಿದರು. ಮುಂದುವರಿದ ಮಾತನಾಡಿದ ಅವರು, ಮತದಾರರನ್ನು ಸೆಳೆಯಲು ಬೇರೆ ಪಕ್ಷಗಳಂತೆ ಕುಕ್ಕರ್, ಸೀರೆ ನೀಡಲಾಗುತ್ತಿದೆ. ಕುಕ್ಕರ್ ದೀಪಾವಳಿ ಸಮಯದಲ್ಲಿ ಕೊಡಬೇಕು ಯಾಕಂದ್ರೆ ಒಳ್ಳೆಯ ಸೌಂಡ್ ಮಾಡುತ್ತವೆ. ಸೀರೆ ಹಂಚಲಾಗುತ್ತಿದೆ ಮುಂದೆ ಹೆಂಡ ಕೂಡಾ ಹಂಚುತ್ತಾರೆ. ದಯಮಾಡಿ ಯಾರು ತೆಗೆದುಕೊಳ್ಳಬೇಡಿ. ಹಣ ತಗೋರಿ ಯಾಕಂದ್ರೆ ಅದು ನಿಮ್ಮ ದುಡ್ಡು, ನೀವು ಕಟ್ಟಿದ ಟ್ಯಾಕ್ಸ್ ದುಡ್ಡಾಗಿದೆ. ಆದರೆ, ದಯಮಾಡಿ ಬೀದರ್ ದಕ್ಷಿಣದಲ್ಲಿ ಆಮ್ ಆದಿ ಪಕ್ಷದ ಅಭ್ಯರ್ಥಿ ನಸೀಂ ಪಟೇಲ್ ಅವರಿಗೆ ಅಮೂಲ್ಯವಾದಮತ ನೀಡಬೇಕು ಎಂದು ಅವರು ಮನವಿ ಮಾಡಿದರು.

ಆಪ್ ಅಭ್ಯರ್ಥಿ ನಸೀಂ ಪಟೇಲ್ ಮಾತನಾಡಿ, ನನ್ನ ಜೀವನ ಸದಾ ರೈತರೊಂದಿಗೆ ಕಾರ್ಮಿಕರೊಂದಿಗೆ ಇದ್ದೇನೆ. ಒಂದು ಬಾರಿ ಅವಕಾಶ ನೀಡಿ ಎಂದು ಪ್ರತಿಯೊಬ್ಬ ಮನೆಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದೇನೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಅಧಿಕಾರ ನಡೆಸಿದರೂ ಯಾವುದೇ ಕಾರಂಜಾ ಪರಿಹಾರ ಅಭಿವೃದ್ಧಿಯಾಗಿಲ್ಲ, ಇವರದು ಶೂನ್ಯ ಸಾಧನೆ ಎಂದು ದೂರಿದರು. ಸಂತ್ರಸ್ತರಿಗೆ ಒದಗಿಸಲು ವಿಫಲವಾಗಿದೆ. ನಮ್ಮನ್ನು ಗೆಲ್ಲಿಸಿದರೆ, ಬೀದರ್ ದಕ್ಷಿಣ ಕ್ಷೇತ್ರದಲ್ಲಿ ನೀರುದ್ಯೋಗಿಗಳಿಗೆ ಉದ್ಯೋಗ ಸೇರಿದಂತೆ ಜನಪರ ಯೋಜನೆಗಳೊಂದಿಗೆ ನಮ್ಮ ಪಕ್ಷದ ತತ್ವ ಸಿದ್ಧಾಂತಗಳಂತೆ ಸಾಮಾನ್ಯ ಜನರ ಸೇವೆಯೆ ನಮ್ಮ ಗುರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಮನ್ನಾನ್ ಪಟೇಲ್, ಖೈರೋದ್ದಿನ್, ತಬ್ರೇಜ್ ಖಾನ್, ಬಶೀರಮಿಯ್ಯ, ಯುಕೆ ಚಿಮ್ಮಾ, ಪ್ರಭಾಕರ ಮಾಳಗೆ, ಅಶೋಕ ಜಮಾದಾರ, ತೌಫೀಕಲಿ, ಶಕೀಲ್ ಪಾಶಾ ಸೇರಿ ಹಲವರು ಉಪಸ್ಥಿತರಿದ್ದರು.