ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಕಬ್ಜ ಸಿನಿಮಾ, ಮಾರ್ಚ್ 17ರಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ, ದೊಡ್ಡ ಹೈಪ್ ಕ್ರಿಯೇಟ್ ಮಾಡಿರೋ, ನಿರ್ದೇಶಕ ಆರ್.ಚಂದ್ರು ಅವರ ʼಕಬ್ಜʼ ಚಿತ್ರ ಥಿಯೇಟರ್‌ನಲ್ಲಿ ಧೂಳೆಬ್ಬಿಸುತ್ತಿದೆ.

ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕಂಡಿರುವ ʻಕಬ್ಜʼ ಸಿನಿಮಾ, ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ ಎನ್ನಲಾಗ್ತಿದೆ. ʻಕಬ್ಜʼ ಪಕ್ಕಾ ಮಾಸ್ ಎಂಟರ್ಟೈನರ್ ಸಿನಿಮಾ ಆಗಿದ್ದು, ಚಿತ್ರಕ್ಕೆ ಉಪ್ಪಿ ಫ್ಯಾನ್ಸ್ ಫಿದಾ ಆಗಿದ್ರು.

ಈಗಲೂ ಚಿತ್ರಮಂದಿರಗಳಲ್ಲಿ ʻಕಬ್ಜʼ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ನಡುವೆಯೇ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದು ವೈರಲ್ ಆಗಿದೆ. ಅಮೇಜಾನ್ ಪ್ರೈಮ್ ಸಿನಿಮಾದ ಓಟಿಟಿ ಹಕ್ಕನ್ನು ಭಾರೀ ದೊಡ್ಡ ಮೊತ್ತಕ್ಕೆ ಖರೀದಿಸಿದ್ದು, ಏಪ್ರಿಲ್ 14 ರಂದು ʼಕಬ್ಜʼ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಎನ್ನುವ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
