• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾವು ಯಾರನ್ನು ನೋಡಿ ಮತ ಚಲಾವಣೆ ಮಾಡಬೇಕು..!? ಉತ್ತರ ಕೊಡಿ ಸಾರ್..

ಕೃಷ್ಣ ಮಣಿ by ಕೃಷ್ಣ ಮಣಿ
April 2, 2023
in Top Story, ಇದೀಗ, ರಾಜಕೀಯ
0
ನಾವು ಯಾರನ್ನು ನೋಡಿ ಮತ ಚಲಾವಣೆ ಮಾಡಬೇಕು..!? ಉತ್ತರ ಕೊಡಿ ಸಾರ್..
Share on WhatsAppShare on FacebookShare on Telegram

ADVERTISEMENT

ಬೆಂಗಳೂರು:ಏ.೦೨: ಒಂದು ದೇಶವನ್ನು ಮುನ್ನಡೆಸಲು ಉತ್ತಮ ನಾಯಕತ್ವ ಅವಶ್ಯಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನನ್ನು ಉತ್ತಮವಾಗಿ ನೋಡಿಕೊಂಡು, ಕಷ್ಟ ಸುಖಕ್ಕೆ ಆಗುವ ನಾಯಕನನ್ನು ಆಯ್ಕೆ ಮಾಡಲು ಪ್ರತಿ 5 ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಸಲಾಗುತ್ತದೆ. ಪಕ್ಷ ನೋಡಿ ಮತ ಹಾಕುವ ಬದಲು ನಾಯಕನನ್ನು ನೋಡಿ ಮತ ಹಾಕಬೇಕು ಎನ್ನುವುದು ಸತ್ಯ. ನನಗೆ ನಾಯಕನಾದವನು ನನ್ನ ಹಿತಾಸಕ್ತಿಗಾಗಿ ಕೆಲಸ ಮಾಡುವ ಅವಶ್ಯಕತೆ ಇರುತ್ತದೆ. ನಮ್ಮ ಮನೆಯ ಯಜಮಾನಿಕೆಯನ್ನು ನನ್ನ ಅಪ್ಪನಿಗೆ ಕೊಡುವುದು ಉತ್ತಮ. ಯಾಕಂದರೆ ಅಪ್ಪ ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡಿಕೊಳ್ಳುತ್ತಾನೆ. ಅದನ್ನು ಬಿಟ್ಟರೆ ಅಮ್ಮನಿಗೂ ಕೊಡಬಹುದು. ಇಲ್ಲದಿದ್ದರೆ ಅಜ್ಜ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಕೂಡ ನಮ್ಮ ಮನೆಯನ್ನು ಮುನ್ನಡೆಸಲು ಪೈಪೋಟಿ ನಡೆಸುವುದರಲ್ಲಿ ಅರ್ಥವಿದೆ. ಆದರೆ ಪಕ್ಕದ ಮನೆಯ ನಾಯಕನಿಗೆ ಅಧಿಕಾರ ಕೊಡುವುದು ಎಷ್ಟು ಸೂಕ್ತ ಎನ್ನುವುದು ಈಗ ಸೃಷ್ಟಿಯಾಗಿರುವ ಪ್ರಶ್ನೆ.

ಕಾಂಗ್ರೆಸ್​ನಲ್ಲಿ ನಾಯಕತ್ವದ ಜೊತೆಗೆ ಪೈಪೋಟಿ..!

ಕಾಂಗ್ರೆಸ್​ನಲ್ಲಿ ನಾಯಕತ್ವಕ್ಕೆ ಕೊರತೆಯಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​, ಎಂಬಿ ಪಾಟೀಲ್​, ಕೃಷ್ಣಭೈರೇಗೌಡ, ಪ್ರಿಯಾಂಕ್​ ಖರ್ಗೆ ಸೇರಿದಂತೆ ಹತ್ತು ಹಲವು ನಾಯಕರಿದ್ದಾರೆ. ಓರ್ವ ಮುಖ್ಯ ನಾಯಕ ಮುಂದೆ ಸಾಗುತ್ತಿದ್ದರೆ, ಹಿಂದೆ ಹತ್ತಾರು ನಾಯಕರು ಜನರಿಗಾಗಿ ಹೆಗಲು ಕೊಡುವುದಕ್ಕೆ ಸಿದ್ದರಿದ್ದಾರೆ. ಜನರು ತಮ್ಮ ಕ್ಷೇತ್ರದಲ್ಲಿ ಉತ್ತಮ ಅಬ್ಯರ್ಥಿ ಯಾರು ಎನ್ನುವುದನ್ನು ನೋಡುವ ಜೊತೆಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯಬಹುದಾದ ಸಂಭವನೀಯ ನಾಯಕರ ಮುಖ ನೋಡಿಕೊಂಡು ಮತ ಚಲಾವಣೆ ಮಾಡುವುದರಲ್ಲಿ ಅರ್ಥವಿದೆ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಬ್ಯರ್ಥಿಗಿಂತ ಜೆಡಿಎಸ್​, ಬಿಜೆಪಿ ಆಯ್ಕೆ ಮಾಡಿರುವ ಅಭ್ಯರ್ಥಿ ಉತ್ತಮ ಎನ್ನುವುದಾದರೆ ಜನರು ಮತಗಳ ಮೂಲಕ ಆಯ್ಕೆಯನ್ನು ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ​ಕರುನಾಡನ್ನು ಅಳುವ ನಾಯಕ ಇಂತಹ ಪಕ್ಷದಲ್ಲಿ ಇಂತವರು ಎನ್ನುವುದು ಜನರಿಗೆ ಗೊತ್ತಿದೆ.

ಜೆಡಿಎಸ್​ನಲ್ಲಿ ಸಾಕಷ್ಟು ನಾಯಕರಿದ್ದರೂ ಗೊಂದಲವಿಲ್ಲ..!

ಜೆಡಿಎಸ್​ನಲ್ಲಿ ನಾಯಕರನ್ನು ಬೆಳೆಸುವುದಿಲ್ಲ ಎನ್ನುವ ಆರೋಪ ಮಾಡಿಕೊಂಡೇ ಸಾಕಷ್ಟು ಜನರು ಪಕ್ಷ ಬಿಟ್ಟು ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಾರೆ. ಈ ಬಾರಿ ಕೂಡ ನಾಲ್ಕೈದು ಶಾಸಕರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಕೋಲಾರದಲ್ಲಿ ಶ್ರೀನಿವಾಸಗೌಡ, ಗುಬ್ಬಿ ವಾಸು, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ ರಾಮಸ್ವಾಮಿ ಹೀಗೆ ಸಾಕಷ್ಟು ಜನರು ಪಕ್ಷ ಬಿಟ್ಟಿದ್ದಾರೆ. ಆದರೆ ಇಂದು ಬಿಜೆಪಿ, ಕಾಂಗ್ರೆಸ್​​ನಲ್ಲಿ ಮುಂಚೂಣಿಯಲ್ಲಿ ಇರುವ ಬಹುತೇಕ ನಾಯಕರು ರಾಜಕೀಯ ಶಕ್ತಿಯನ್ನು ಪಡೆದುಕೊಂಡಿದ್ದು ಜೆಡಿಎಸ್​​ ಪಕ್ಷದಲ್ಲಿ ಎನ್ನುವುದನ್ನು ಜನರು ಗಮನಿಸಬೇಕು. ಅಂದರೆ ಜೆಡಿಎಸ್​ ಸಾಕಷ್ಟು ನಾಯಕರನ್ನು ಬೆಳೆಸುವಲ್ಲಿ ಶ್ರಮವಹಿಸಿದೆ. ವೈಯಕ್ತಿಕ ಕಾರಣಗಳು ಹಾಗಿ ಈರ್ಷೆಗಳಿಗಾಗಿ ಪಕ್ಷವನ್ನು ಬಿಟ್ಟು ಹೋಗುವಾಗ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಜೆಡಿಎಸ್​ ಪಕ್ಷವನ್ನು ಬೆಂಬಲಿಸಲು ಪ್ರಮುಖವಾಗಿ ಕುಮಾರಸ್ವಾಮಿ ನಾಯಕತ್ವ ಇದೆ. ಜೆಡಿಎಸ್​ನಿಂದ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಆಗುವುದು ಕುಮಾರಸ್ವಾಮಿ ಅನ್ನೋದು ಸತ್ಯ.

ಬಿಜೆಪಿಯಲ್ಲಿ ನಾಯಕತ್ವ ಇದೆ.. ಆದರೆ ರಾಜ್ಯದಲ್ಲಿ ಎಲ್ಲಿದೆ..?

ದೇಶದಲ್ಲಿ ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಸಂಕಷ್ಟ, ಖಾಸಗೀಕರಣ, ಅತಿಯಾದ ಹಿಂದುತ್ವ ಹೇರಿಕೆ, ಪ್ರತಿಮೆ ದೇವಸ್ಥಾನಗಳನ್ನು ತೋರಿಸಿ ರಾಜಕಾರಣ ನಡೆಯುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ದನಿಯನ್ನು ಗೌರವಿಸೋಣ. ಆದರೆ ಕರ್ನಾಟಕದಲ್ಲಿ ನರೇಂದ್ರ ಮುಖ ನೋಡಿ ವಿಧಾನಸಭಾ ಚುನಾವಣೆಗೆ ಮತ ಹಾಕುವುದು ಹೇಗೆ..? ಪ್ರಧಾನಿ ನರೇಂದ್ರ ಮೋದಿ ಬಂದು ಅಧಿಕಾರ ಚಲಾವಣೆ ಮಾಡ್ತಾರಾ..? ಎನ್ನುವುದು ಈಗ ಇರುವ ಪ್ರಶ್ನೆ. ಬಿಜೆಪಿಯಲ್ಲಿ ನಾಯಕರು ಇಲ್ಲ ಎಂದೇನಿಲ್ಲ. ಪ್ರಹ್ಲಾದ್​ ಜೋಷಿ, ಬಿ.ಎಲ್​ ಸಂತೋಷ್​, ನಳೀನ್​ ಕುಮಾರ್​ ಕಟೀಲ್​ ಹೀಗೆ ಹಲವು ನಾಯಕರಿದ್ದಾರೆ. ಆದರೆ ಜನರಿಗೆ ಇರುವ ಗೊಂದಲ ಎಂದರೆ ರಾಜ್ಯವನ್ನು ಅಳುವ ನಾಯಕತ್ವ ಯಾರದ್ದು..? ಎನ್ನುವುದು. ಈ ಪ್ರಶ್ನೆ ಅಥವಾ ಗೊಂದಲವನ್ನು ಪರಿಹರಿಸಿಕೊಂಡರೆ ಜನರು ಮತಹಾಕುವ ಮುನ್ನ ಯೋಜನೆ ಮಾಡಬಹುದು ಅಷ್ಟೆ. ಇಲ್ಲದಿದ್ದರೆ ರಾಜ್ಯಕ್ಕೆ ನಾಯಕತ್ವ ಇಲ್ಲದ ಕಾರಣಕ್ಕೆ ಜನ ಕಾಂಗ್ರೆಸ್​, ಜೆಡಿಎಸ್​ ಕಡೆಗೆ ಮುಖ ಮಾಡಿದರೂ ಅಚ್ಚರಿಯಿಲ್ಲ ಎನ್ನಬಹುದು.

ಕೃಷ್ಣಮಣಿ

Tags: BJPBJP GovernmentbjpkarnatakablsatoshCongress PartyDKShivakumarHD KumaraswamyJDSjdskarnatakaKPCC presidentsiddaramaiahಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕ್ಷಮೆ ಕೇಳಿದ ಉರ್ಫಿ… ಇನ್ಮುಂದೆ ಬದಲಾಗುತ್ತೇನೆ ಎಂದ ನಟಿ..!

Next Post

ಕಾಮಗಾರಿ ಟೆಂಡರಗಾಗಿ ಕಮಿಷನ್ ದರ ಫಿಕ್ಸ್ ಮಾಡಿದ ಶಾಸಕರ ಆಪ್ತ : ಗುತ್ತಿಗೆದಾರರಿಂದ ಕಮೀಷನ್ ಹಣ ಪಡೆದ ವಿಡಿಯೋ ವೈರಲ್

Related Posts

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ
ರಾಜಕೀಯ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

by ಪ್ರತಿಧ್ವನಿ
April 23, 2026
0

ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನದ ಮಹತ್ವವನ್ನು ಮನದಟ್ಟು ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.“2026ರ ವಿಧಾನಸಭಾ ಚುನಾವಣೆಯಲ್ಲಿ ನಾನು ನನ್ನ ಮತವನ್ನು...

Read moreDetails
ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
Next Post
ಕಾಮಗಾರಿ ಟೆಂಡರಗಾಗಿ ಕಮಿಷನ್ ದರ ಫಿಕ್ಸ್ ಮಾಡಿದ ಶಾಸಕರ ಆಪ್ತ : ಗುತ್ತಿಗೆದಾರರಿಂದ ಕಮೀಷನ್ ಹಣ ಪಡೆದ ವಿಡಿಯೋ ವೈರಲ್

ಕಾಮಗಾರಿ ಟೆಂಡರಗಾಗಿ ಕಮಿಷನ್ ದರ ಫಿಕ್ಸ್ ಮಾಡಿದ ಶಾಸಕರ ಆಪ್ತ : ಗುತ್ತಿಗೆದಾರರಿಂದ ಕಮೀಷನ್ ಹಣ ಪಡೆದ ವಿಡಿಯೋ ವೈರಲ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada