ಚೈತ್ರಾ ಕುಂದಾಪುರ ಬರೋಬ್ಬರಿ 5 ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಬಂಧನ ಆಗಿದ್ದಾರೆ. ಸೆಪ್ಟೆಂಬರ್ 12ರ ರಾತ್ರಿ ಉಡುಪಿಯ ಶ್ರೀ ಕೃಷ್ಣ ಮಠದ ಆವರಣದಲ್ಲಿ ಅರೆಸ್ಟ್ ಮಾಡಿದ ಬಳಿಕ ಬೆಂಗಳೂರಿಗೆ ಕರೆತಂದಿದ್ದ ಸಿಸಿಬಿ ಪೊಲೀಸ್ರು, ಕೋರ್ಟ್‌ಗೆ ಹಾಜರುಪಡಿಸಿ, ಸೆಪ್ಟೆಂಬರ್ 23ರ ತನಕ ವಶಕ್ಕೆ ಪಡೆದಿದ್ದಾರೆ. ಗುರುವಾರ ಬೆಳಗ್ಗೆ ಸಿಸಿಬಿ ಕಚೇರಿಗೆ ಕರೆ ತರುವಾಗ ಮಾಧ್ಯಮಗಳ ಎದುರು ಮಾತನಾಡಿರುವ ಚೈತ್ರಾ ಕುಂದಾಪುರ, ಅಭಿನವ ಹಾಲಾಶ್ರೀ ಸ್ವಾಮಿಜಿಯನ್ನು ಬಂಧಿಸಿದ ಬಳಿಕ ದೊಡ್ಡ ದೊಡ್ಡವರ ಹೆಸರು ಹೊರಕ್ಕೆ ಬರುತ್ತೆ ನೋಡಿ ಎಂದು ಹೇಳಿ ಹೋಗಿದ್ದಾಳೆ. ಅಂದರೆ ಚೈತ್ರಾ ಕುಂದಾಪುರ ಕೊಟ್ಟ ಸುಳಿವಿನಲ್ಲಿ ಇರುವ ದೊಡ್ಡ ದೊಡ್ಡವರು ಯಾರು ಅನ್ನೋ ಪ್ರಶ್ನೆ ಕುತೂಹಲ ಮೂಡಿಸಿದೆ.

ಅಭಿನವ ಹಾಲಶ್ರೀ ಉತ್ತಮ ವಾಗ್ಮಿ, ಹಿಂದುತ್ವ ಭಾಷಣಕಾರ..!
ಚೈತ್ರಾ ಕುಂದಾಪುರ ಹಿಂದುತ್ವದ ಬಗ್ಗೆ ಮಾತನಾಡುತ್ತ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೇ ರೀತಿ ಹಿಂದುತ್ವದ ಪರ ಅಭಿನವ ಹಾಲಶ್ರೀ ಕೂಡ ಉತ್ತಮ ಭಾಷಣಕಾರ. ಕರ್ನಾಟಕದಲ್ಲಿ ಭಾಷಣಕಾರ ಎಂದು ಖ್ಯಾತಿ ಪಡೆದಿರುವ ಮಿಥುನ್ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇದೀಗ ಅಭಿನವ ಹಾಲಶ್ರೀ ಸಿಸಿಬಿ ಕೈಗೆ ಸಿಕ್ಕಿಬಿದ್ದರೆ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪ್ರಮುಖ ಹೆಸರು ಹೊರಕ್ಕೆ ಬರುವ ಸಾಧ್ಯತೆಗಳು ಇವೆ ಅನ್ನೋ ಸುದ್ದಿ ಹರಿದಾಡುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ಒಂದೇ ವೇದಿಕೆಯಲ್ಲಿ ಮಾಡಿದ್ದ ಭಾಷಣ ವೈರಲ್ ಆಗುತ್ತಿದೆ.

ಸತೀಶ್ ಜಾರಕಿಹೊಳಿ ವಿರುದ್ಧ ಸಿಡಿದೆದ್ದಿದ್ದ ಟೀಂ..
ಹಾಲಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಹಿಂದೂ ಪದದ ಅರ್ಥ ಏನು ಅನ್ನೋ ಬಗ್ಗೆ ವ್ಯಾಖ್ಯಾನ ಮಾಡಿದ್ದರು. ಆ ಹೇಳಿಕೆ ವಿರುದ್ಧ ಗುಟುರು ಹಾಕಿದ್ದ ಮಿಥುನ್ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲೇ ಬೃಹತ್ ಸಭೆ ನಡೆಸಿ ಖಂಡಿಸಲಾಗುವುದು ಎಂದಿದ್ದರು. ಈ ಕಾರ್ಯಕ್ರಮದ ಹೊಣೆಗಾರಿಕೆ ವಹಿಸಿಕೊಂಡಿದ್ದು ಇದೇ ಅಭಿನವ ಹಾಲಶ್ರೀ ಎನ್ನಲಾಗಿದೆ. ಇನ್ನು ಡೀಲ್ನಲ್ಲಿ ಬಂದಿರುವ ಎಲ್ಲಾ ಹಣವನ್ನು ಹೆಂಡತಿ ತಂದೆ ಹೆಸರಿನಲ್ಲಿ 10 ಎಕರೆ ಜಮೀನು ಖರೀದಿ ಮಾಡಿ ಕಬ್ಬು ಬೆಳೆದಿದ್ದಾರೆ. ಇನ್ನು ಪೆಟ್ರೋಲ್ ಬಂಕ್ ಮಾಡಿದ್ದಾರೆ. ಮನೆ ನಿರ್ಮಾಣ ಮಾಡಿದ್ದಾರೆ ಅನ್ನೋದು ಗೊತ್ತಾಗಿದ್ದು, ಚಕ್ರವರ್ತಿ ಸೂಲಿಬೆಲೆ ಹಾಗು ಸ್ವಾಮೀಜಿ ಜೊತೆಗಿರುವ ಹಲವಾರು ಫೋಟೋಗಳು ವೈರಲ್ ಆಗ್ತಿವೆ.

ಚೈತ್ರಾ ಪಾತ್ರಧಾರಿ ಮಾತ್ರ.. ಸೂತ್ರಧಾರಿ ಬೇರೆ ಇದ್ದಾರಾ..?
ಚೈತ್ರಾ ಕುಂದಾಪುರ ಸದ್ಯಕ್ಕೆ ಫಿಡ್ಸ್ನಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಆಸ್ಪತ್ರೆಗೆ ಸೇರುವ ಮೊದಲು ಸಿಸಿಬಿ ವಿಚಾರಣೆಯಲ್ಲಿ ಮಾತನಾಡಿದ್ದ ಚೈತ್ರಾ ಕುಂದಾಪುರ. ನನ್ನ ಮುಖ ನೋಡಿ ಯಾರು ಹಣ ಕೊಡ್ತಾರೆ ಮೇಡಂ, ಗಗನ್ ಕಡೂರು ಹೇಗೆ ಹೇಳುತ್ತಿದ್ದನೋ ಹಾಗೆ ನಾನು ಮಾಡುತ್ತಿದ್ದೆ ಅಷ್ಟೆ. ಇದರ ಹಿಂದೆ ಬೇರೆ ಬೇರೆಯವರು ಇದ್ದಾರೆ ಎಂದಿದ್ದಾಳೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಅಭಿನವ ಹಾಲಶ್ರೀ ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದು, ಗುರುವಾರ ಸಂಜೆ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇನ್ನೊಂದು ಕಡೆ ಸ್ವಾಮೀಜಿ ಬಂಧನ ಮಾಡದೆ ಚೈತ್ರಾ ಕುಂದಾಪುರಳ ಹೇಳಿಕೆ ಮೇಲೆ ತನಿಖೆ ನಡೆಸುವಂತೆ ಸಿಸಿಬಿ ಮೇಲೆ ಒತ್ತಡ ಕೂಡ ಆರಂಭವಾಗಿ ಎನ್ನುವ ಮಾತುಗಳು ಹರಿದಾಡುತ್ತಿವೆ.
ಕೃಷ್ಣಮಣಿ