ಸಿದ್ದರಾಮಯ್ಯರನ್ನು ತೆಗಳುತ್ತಾ ಯಡಿಯೂರಪ್ಪಗೂ ತಿವಿದ್ರಾ B.L ಸಂತೋಷ್..?
ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ 2018 ರಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ ಶಾಸಕ ಡಾ ಯತೀಂದ್ರ ಈ ಬಾರಿ ಸಿದ್ದರಾಮಯ್ಯಗೆ ಸೇಫ್ ಎನ್ನುವ ಕಾರಣದಿಂದ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಇದನ್ನು ಸಿದ್ದರಾಮಯ್ಯ ತ್ಯಾಗ ಮಾಡಿದ್ದಾನೆ ಎಂದು ಎಲ್ಲಿಯೂ ಬಣ್ಣಿಸಿಲ್ಲ ಅದು ಬೇರೆ ವಿಚಾರ. ಇದೇ ರೀತಿ ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪ ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರವನ್ನು ತನ್ನ ಮಗ ಬಿ.ವೈ ವಿಜಯೇಂದ್ರಗೆ ಬಿಟ್ಟು ಕೊಟ್ಟಿದ್ದಾರೆ. ಬಿ.ಎಸ್ ಯಡಿಯೂರಪ್ಪ ಕೂಡ ನಾನು ತ್ಯಾಗ ಮಾಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿದ್ದಿಲ್ಲ. ನನಗೆ ಹೇಗೆ ಬೆಂಬಲವಾಗಿ ನಿಂತ್ತಿದ್ದಿರೋ ಅದೇ ರೀತಿ ವಿಜಯೇಂದ್ರನನ್ನು ಬೆಳೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ಬಿ.ಎಲ್ ಸಂತೋಷ್ ಮಾತ್ರ ಯಡಿಯೂರಪ್ಪ ಮೇಲೆ ಕತ್ತಿ ಮಸೆಯುವಂತೆಯೇ ಕಾಣಿಸುತ್ತಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಯತೀಂದ್ರ ತ್ಯಾಗ ಮಾಡಿದ್ರಾ..?
ಅವರ ಮಗನ ಬಗ್ಗೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು ನಾವು. ಅವನೇನು ದೇಶ ಕಟ್ಟಿದ್ದಾರೆ. ಗಡಿಯಲ್ಲಿ ಹೋರಾಟ ಮಾಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಮೆಡಲ್ ಗೆದ್ದಿದ್ದಾನೆ. ಜ್ಯೂಡೋ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಮೆಡಲ್ ಗೆದ್ದಿದ್ದಾನೆ ಎನ್ನುವಂತೆ ಅಪ್ಪನಿಗೆ ಸೀಟ್ ಗತಿ ಇರಲಿಲ್ಲ ಅಂತಾ ಇಲ್ಲಿ ನಿಂತ್ಕೊ ಅಂದ್ರೆ ತ್ಯಾಗ ಅಂತೆ ಎಂದು ಸಿದ್ದರಾಮಯ್ಯ ಹಾಗು ಡಾ ಯತೀಂದ್ರ ಅವರನ್ನು ಟೀಕಿಸಿದ್ದಾರೆ. ಆದರೆ ಮಾಧ್ಯಮಗಳು ಸಿದ್ದರಾಮಯ್ಯಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ, ತ್ಯಾಗವೂ ಅಲ್ಲ ಏನು ಅಲ್ಲ. ಪಕ್ಷದ ಅದೆಷ್ಟೋ ನಾಯಕರು ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ಮುಂದಾಗಿದ್ದಾರೆ. ಇದರಲ್ಲಿ ನನ್ನದು ಯಾವ ಲೆಕ್ಕ ಎಂದಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯಗೆ ಹೊಡೆಯುವಂತೆ ಮಾಡಿ ಯಡಿಯೂರಪ್ಪಗೆ ಸಂತೋಷ್ ಕಲ್ಲು ಹೊಡೆದಿದ್ದ ಎನ್ನುವುದು ರಾಜಕೀಯವಾಗಿ ಚರ್ಚೆ ಹುಟ್ಟು ಹಾಕಿದೆ.
ತ್ಯಾಗ ಎಂದರೆ ಏನು..? ಬಿ.ಎಲ್ ಸಂತೋಷ್ ಬಣ್ಣನೆ..!
ರಾಜಕೀಯದಲ್ಲಿ ತ್ಯಾಗ ಎಂದರೆ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟು ಕೊಟ್ಟಿದ್ದಾರೆ. ತನಗೆ ಅಥವಾ ತನ್ನ ಮಗನಿಗೆ ಟಿಕೆಟ್ ಸಿಗದಿದ್ದರೂ ಪಕ್ಷಕ್ಕಾಗಿ ದುಡಿಯುವ ತೀರ್ಮಾನ ಮಾಡಿದ್ದಾರೆ. ತ್ಯಾಗ ಎಂದರೆ ಇದು. ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಎಸ್.ಎ ರಾಮದಾಸ್ಗೆ ಟಿಕೆಟ್ ಸಿಗದಿದ್ದರೂ ನಾನು ಪಕ್ಷ ಬಿಟ್ಟು ಹೋಗಲ್ಲ. ನಾನು ಪಕ್ಷದಲ್ಲೇ ಉಳಿಯುತ್ತೇನೆ ಎಂದು ಹೇಳಿದ್ದಾರೆ. ತ್ಯಾಗ ಎಂದರೆ ಇದು. ಉಡುಪಿ ಜಿಲ್ಲೆಯ ಕಾಪು ವಿಧಾನಸಭೆಯಲ್ಲಿ ಗೆದ್ದು ಶಾಸಕರಾಗಿದ್ದ ಲಾಲಾಜಿ ಮೆಂಡನ್ ಅವರನ್ನು ತ್ಯಾಗ ಎನ್ನಬಹುದು. ಕಳೆದ ಬಾರಿ ನನಗಾಗಿ ಕೆಲಸ ಮಾಡಿದ್ದಾರೆ. ನಾನು ಈ ಬಾರಿ ಅವರನ್ನು ಗೆಲ್ಲಿಸುವ ಕೆಲಸ ಮಾಡ್ತೇನೆ ಎಂದಿದ್ದಾರೆ. ಇದನ್ನು ತ್ಯಾಗ ಎನ್ನಬಹುದು. ಅದೇ ರೀತಿ ಉಡುಪಿ ಶಾಸಕ ರಘುಪತಿ ಭಟ್, ನಾನು ಸತ್ತ ಮೇಲೂ ನನ್ನ ಶವದ ಮೇಲೆ ಬಿಜೆಪಿ ಬಾವುಟವನ್ನೇ ಹಾಕಬೇಕು ಎಂದು ಹೇಳಿದ್ದಾರೆ. ಇದನ್ನು ತ್ಯಾಗ ಎನ್ನಬಹುದು ಎಂದಿದ್ದಾರೆ.
ಯಡಿಯೂರಪ್ಪಗೆ ಬಿ.ಎಲ್ ಸಂತೋಷ್ ತಿವಿದಿದ್ದು ಹೇಗೆ..?
ಮೊದಲು ಸಿದ್ದರಾಮಯ್ಯ ಅವರನ್ನು ಹಾಗು ಡಾ ಯತೀಂದ್ರ ಅವರನ್ನು ಟೀಕಿಸಿದ್ದ ಬಿ.ಎಲ್ ಸಂತೋಷ್ ತನ್ನ ಪಕ್ಷದ ನಾಯಕರು ತ್ಯಾಗ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇರಲ್ಲಿ ಯಡಿಯೂರಪ್ಪ ಅವರನ್ನು ಟೀಕಿಸಿದ್ದು ಹೇಗೆ ಎನ್ನುವ ಪಗ್ರಶ್ನೆ ಬರುವುದು ಸಹಜ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಒಂದೇ ವರ್ಷಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದು ತ್ಯಾಗ ಅಲ್ಲವೋ..? ತಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಘೋಷಣೆ ಮಾಡಿದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ತಾನು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ರಾಜ್ಯ ಸುತ್ತುತ್ತಿರುವುದು ತ್ಯಾಗ ಅಲ್ಲವೋ..? ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಹೈಕಮಾಂಡ್ನಿಂದ ಸಾಕಷ್ಟು ತೊಂದರೆ ಎದುರಾದರೂ ಪಕ್ಷಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ. ಇದು ತ್ಯಾಗ ಅಲ್ಲವೋ ಎನ್ನುವುದು ಯಡಿಯೂರಪ್ಪ ಅಭಿಮಾನಿ ಬಳಗದ ಪ್ರಶ್ನೆ. ಈ ಪ್ರಶ್ನೆಗೆ ಬಿ.ಎಲ್ ಸಂತೋಷ್ ಉತ್ತರ ಕೊಡ್ತಾರಾ..? ಯಡಿಯೂರಪ್ಪ ಅವರದ್ದೂ ತ್ಯಾಗ ಎಂದು ಹೇಳುತ್ತಾರಾ..? ಗೊತ್ತಿಲ್ಲ. ಯಾಕಂದ್ರೆ ಸಂತೋಷ್ ಇಲ್ಲೀವರೆಗೂ ಯಾವುದೇ ಮಾಧ್ಯಮಗಳ ಎದುರು ಹೇಳಿಲ್ಲ. ಕನಿಷ್ಟ ಪಕ್ಷ ಕಾರ್ಯಕರ್ತರ ಎದುರಲ್ಲಿ ಆದರೂ ಹೇಳಿಕೆ ನೀಡಿದರೆ ಯಡಿಯೂರಪ್ಪ ಬೆಂಬಲಿಗರಿಗೆ ಖುಷಿ ತರುವುದು ಸತ್ಯ.
ಕೃಷ್ಣಮಣಿ