
ಬಿಜೆಪಿ ಹೀನಾಯ ಸೋಲಿಗೆ ರೇಣುಕಾಚಾರ್ಯ ಕೊಟ್ಟ ಕಾರಣ ಏನು..?
ದಾವಣಗೆರೆ: ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ವಿರುದ್ದ ರೇಣುಕಾಚಾರ್ಯ ಕೆಂಡಾಮಂಡಲ ಆಗಿದ್ದಾರೆ. 2023ರ ಚುನಾವಣೆಯಲ್ಲಿ ಯಾರು ವಿಧಾನಸೌಧದ ಹೊರಗೆ ಒಳಗೆ ನಾಲಗೆ ಹರಿಬಿಟ್ಟಿದ್ರು. ಇವರಿಗೆ ಟಿಆರ್‌ಪಿ ಬೇಕು ಬಾಯಿ ಚಟಕ್ಕೆ ಮಾತನಾಡುತ್ತಾರೆ ಎಂದು ಛೇಡಿಸಿದ್ದಾರೆ.
2023ರ ಚುನಾವಣೆಯ ಸೋಲಿಗೆ ಅವರೇ ಕಾರಣ, ಆಗ ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿಲ್ಲಾ. ಹರಕು ಬಾಯಿಯಿಂದೆ ಯಾರು ಮಾತನಾಡುತ್ತಿದ್ದಾರೋ ಅವರೇ 2023 ರ ಚುನಾವಣೆಯಲ್ಲಿ ಸೋಲಿಗೆ ಕಾರಣ. ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರನ್ನ ವಿರೋಧ ಮಾಡುವುದು ಒಂದೇ, ಹೈಕಮಾಂಡ್ ವಿರುದ್ಧ ಮಾತನಾಡುವುದು ಒಂದೇ ಇವರ ಅಜೆಂಡ ಎಂದಿದ್ದಾರೆ.

ಕಾಂಗ್ರೆಸ್‌ನಿಂದ ಬಂದ ಮೂರ್ನಾಲ್ಕು ಜನ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸೈಕಲ್ ತುಳಿದು, ಸ್ಕೂಟಿ ಓಡಿಸಿ ರಸ್ತೆ ಪಕ್ಕ ಮಿರ್ಚಿ ಮಂಡಕ್ಕಿ ತಿಂದು ಪಕ್ಷ ಕಟ್ಟಿದ್ದಾರೆ. ಅವರ ಶ್ರಮದ ಫಲವಾಗಿ ಬಿಜೆಪಿ ಅಧಿಕಾರಕ್ಕೆ ಬಂತು. ನಿಮ್ಮ ಹರಕು ಬಾಯಿಯಿಂದ ವಿರೋಧ ಮಾಡುವುದು ಸರಿಯಲ್ಲ. ನಿಮ್ಮ ಹರಕು ಬಾಯಿಯಿಂದ ಮೂರು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂದಿದ್ದಾರೆ.
ಯಡಿಯೂರಪ್ಪ, ವಿಜಯೇಂದ್ರ ಹೈಕಮಾಂಡ್ ಬಗ್ಗೆ ಟೀಕೆ ಮಾಡ್ತಾರೆ. ಇವರಿಗೆ ಕಾಂಗ್ರೆಸ್ ವಿರುದ್ಧ ಹೋರಾಟ ಬೇಡ, ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಮಂತ್ರಿ ಆಗಿಲ್ಲಾ ಎಂಬ ಒಂದೇ ಕಾರಣಕ್ಕೆ ನಾಲಿಗೆ ಹರಿ ಬಿಟ್ಟು ಮಾತನಾಡುತ್ತಾರೆ. ನಮ್ಮವರ ಹರಕು ಬಾಯಿಯಿಂದ ನಾವು ಸೋತಿದ್ದೇವೆ. ಯಡಿಯೂರಪ್ಪ ಉಪವಾಸ, ವನವಾಸ ಇದ್ದು ಪಕ್ಷ ಕಟ್ಟಿ ಜೈಲಿಗೆ ಹೋಗಿದ್ದರ ಪರಿಣಾಮ ನೀವು ಹೈಫೈ ಲೈಫ್ ನಡೆಸುತ್ತಿದ್ದೀರಿ ಎಂದಿದ್ದಾರೆ.