ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಮ್ ಗೌಡನ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ವಿಕ್ರಂಗೌಡ ಮನೆಯ ಆವರಣದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ವಿಕ್ರಂ ಗೌಡನ ಸಹೋದರ ಸುರೇಶ್ ಗೌಡ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ತಂಗಿ ಸುಗುಣ ಮತ್ತು ನಿಕಟ ಬಂಧುಗಳು ಹಾಗು ಊರಿನ ಪ್ರಮುಖರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ರು. 21 ವರ್ಷಗಳ ಬಳಿಕ ವಿಕ್ರಂ ಅವರನ್ನು ಮೃತದೇಹವಾಗಿ ಕಂಡು, ದುಃಖ ವ್ಯಕ್ತಪಡಿಸಿದ್ರು.
ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ ಕೌಂಟರ್ ಕುರಿತು ಶಂಕೆ ವ್ಯಕ್ತಪಡಿಸಿರುವ ವಿಚಾರಕ್ಕೆ CM ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ನಕ್ಸಲ್ ನಾಯಕನ ಹತ್ಯೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ನಕ್ಸಲರು ಇರಬೇಕಾ..? ನಕ್ಸಲಿಸಂ ಕೊನೆಯಾಗ್ಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ನೋಡಿ ಸರೆಂಡರ್ ಆಗಬೇಕು ಎಂದು ಕೇಳಿದ್ದಾರೆ. ಆದರೆ ಅವರು ಸರೆಂಡರ್ ಆಗಲಿಲ್ಲ. ಕೇರಳ ಮತ್ತು ನಮ್ಮ ಸರ್ಕಾರ ಅವರನ್ನ ಹಿಡಿಯೋದಕ್ಕೆ ಬಹುಮಾನದ ಘೋಷಿಸಿತ್ತು. ಅವರು ಶರಣು ಆಗಲಿಲ್ಲ. ಅವರನ್ನ ಎನ್ ಕೌಂಟರ್ ಮಾಡಿದ್ದಾರೆ. ಅದಕ್ಕೆ ನೀವು ಪ್ರಶಂಸೆ ಮಾಡಬೇಕು ಎಂದು ತಿಳಿಸಿದ್ದಾರೆ.
ನಕ್ಸಲ್ ನಾಯಕ, ವಿಕ್ರಂಗೌಡ ಎನ್ಕೌಂಟರ್ ಬಗ್ಗೆ ಎಡಪಂಥಿಯರ ಅನುಮಾನಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಕ್ರಂಗೌಡ ಬಳಿ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು. 60ಕ್ಕೂ ಹೆಚ್ಚು ಕೇಸ್ಗಳಿದ್ವು. ಪೊಲೀಸರು ಶೂಟ್ ಮಾಡದಿದ್ದಿದ್ರೆ, ವಿಕ್ರಮ್ ಗೌಡ ಪೊಲೀಸರನ್ನೇ ಶೂಟ್ ಮಾಡುವ ಸಾಧ್ಯತೆ ಇತ್ತು. ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನೋ ಪ್ರಶ್ನೆ ಬರೋದಿಲ್ಲ. ಸರೆಂಡರ್ ಆಗಲು ತಿಳಿಸಲಾಗಿತ್ತು. ಆದ್ರೆ ಅವರು ಕೇಳಿರಲಿಲ್ಲ ಅಂತ ಹೇಳಿದ್ದಾರೆ.