• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಹಿಜಾಬ್ ನಿಷೇಧದ ಬಗ್ಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನೀತಿ ಏನು ಹೇಳುತ್ತದೆ?

ಫಾತಿಮಾ by ಫಾತಿಮಾ
February 15, 2022
in ಅಭಿಮತ, ದೇಶ
0
ಹಿಜಾಬ್ ನಿಷೇಧದ ಬಗ್ಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನೀತಿ ಏನು ಹೇಳುತ್ತದೆ?
Share on WhatsAppShare on FacebookShare on Telegram

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಕುರಿತು ಇತ್ತೀಚಿನ ಗಲಭೆಯು ಲಿಂಗ ಸಮಾನತೆ ಮತ್ತು ಧರ್ಮದ ಸ್ವಾತಂತ್ರ್ಯದ ಬಗ್ಗೆ ಚರ್ಚೆಯನ್ನೂ ಪುನರುಜ್ಜೀವನಗೊಳಿಸಿದೆ. ಒಂದೆಡೆ ಹಿಂದೂ ಬಲಪಂಥೀಯರು ಹಿಜಾಬ್ ಧರಿಸಿದರೆ ತಾವೂ ಕೇಸರಿ ಶಾಲು ಧರಿಸಿಕೊಂಡು ಬರುತ್ತೇವೆ ಎಂದು ವಾದ ಮಾಡುತ್ತಿದ್ದರೆ ಇನ್ನೊಂದೆಡೆ ಈ ನಾಡಿನ ಪ್ರಗತಿಪರರು ಹಿಜಾಬ್ ಪ್ರತಿಗಾಮಿ ಸಂಕೇತ ಎಂದು ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ಹಿಜಾಬ್ ಅಥವಾ ಯಾವುದೇ ಧಾರ್ಮಿಕ ನಂಬಿಕೆಗಳು ಕೇವಲ ಸಾಂವಿಧಾನಿಕವಾಗಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಮಾತ್ರವಲ್ಲ ಬದಲಾಗಿ ಮಾನ್ಯತೆ ಪಡೆದ ಮಾನವ ಹಕ್ಕುಗಳೂ ಆಗಿವೆ. ಆದ್ದರಿಂದ, ಹಿಜಾಬ್ ನಿಷೇಧವನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು (IHRL) ದೃಷ್ಟಿಕೋನದಿಂದಲೂ ನೋಡಬೇಕಾಗುತ್ತದೆ. ಹಿಜಾಬ್ ನಿಷೇಧದ ಕುರಿತಾದ ವಿವಾದವು ಲಿಂಗ ಸಮಾನತೆ, ಜಾತ್ಯತೀತತೆ, ಧಾರ್ಮಿಕ ಹಕ್ಕು, ಮುಂತಾದ ಕಾನೂನುಬದ್ಧವಾಗಿ ದಟ್ಟವಾದ ಅನೇಕ ಸಮಸ್ಯೆಗಳ ಗೋಜಲೂ ಹೌದು. ಸಾಂಸ್ಕೃತಿಕ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಪ್ರಶ್ನೆಗಳಿರುವ ಹಿಜಾಬ್ ವಿವಾದವು ಹಿಜಾಬ್ IHRL ಅಡಿಯಲ್ಲಿ ರಕ್ಷಿಸಲ್ಪಟ್ಟಿದೆಯೇ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಾನೂನು ಬದ್ಧ ಮಿತಿಗಳಿವೇ ಮತ್ತು ಹಿಜಾಬ್ ನಿಷೇಧವು IHRL ಅಡಿಯಲ್ಲಿ ಧರ್ಮದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬ ಪ್ರಶ್ನೆಗಳನ್ನೂ ಮುಂದಿಡುತ್ತದೆ.

ADVERTISEMENT

ಹಿಜಾಬ್ IHRL ಅಡಿಯಲ್ಲಿ ರಕ್ಷಿಸಲ್ಪಟ್ಟಿದೆಯೇ?

ಕೆಲವೇ ವರ್ಷಗಳ ಹಿಂದೆ ಫ್ರಾನ್ಸ್ “ಸಾರ್ವಜನಿಕ ಸ್ಥಳದಲ್ಲಿ ಯಾರೂ ಮುಖವನ್ನು ಮರೆಮಾಡಲು ಉದ್ದೇಶಿಸಿರುವ ಯಾವುದೇ ಬಟ್ಟೆಗಳನ್ನು ಧರಿಸುವಂತಿಲ್ಲ” ಎಂದು ಆದೇಶ ಮಾಡಿತ್ತು. ಮಾತ್ರವಲ್ಲದೇ ಸಾರ್ವಜನಿಕವಾಗಿ ಬುರ್ಖಾ ಧರಿಸಿದ್ದಕ್ಕೆ ಇಬ್ಬರು ಫ್ರೆಂಚ್ ಮುಸ್ಲಿಂ ಮಹಿಳೆಯರಿಗೆ ದಂಡವನ್ನೂ ವಿಧಿಸಿತ್ತು. ಆದರೆ ನಾಗರಿಕ ಮತ್ತು ರಾಜಕೀಯ ಹಕ್ಕುಗಳ (ICCPR) ನ ಅಂತರರಾಷ್ಟ್ರೀಯ ಒಪ್ಪಂದದ 18 ನೇ ವಿಧಿಯ ಪ್ರಕಾರ ಪ್ರತಿಯೊಬ್ಬರಿಗೂ ಆಲೋಚನೆ, ಆತ್ಮಸಾಕ್ಷಿಯ ಮತ್ತು ಧರ್ಮದ ಸ್ವಾತಂತ್ರ್ಯದ ಹಕ್ಕಿದೆ. ಈ ಹಕ್ಕು ತನ್ನ ಆಯ್ಕೆಯ ಧರ್ಮ ಅಥವಾ ನಂಬಿಕೆಯನ್ನು ಹೊಂದಲು ಅಥವಾ ಅಳವಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ, ಮತ್ತು ವೈಯಕ್ತಿಕವಾಗಿ ಅಥವಾ ಇತರರೊಂದಿಗೆ ಸಮುದಾಯದಲ್ಲಿ ಮತ್ತು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ, ತನ್ನ ಧರ್ಮ ಅಥವಾ ನಂಬಿಕೆಯನ್ನು ಪೂಜೆ ಮತ್ತು ಆಚರಣೆಯಲ್ಲಿ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ.

ಈ ಒಪ್ಪಂದಕ್ಕೆ ಫ್ರಾನ್ಸ್, ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಸಹಿ ಹಾಕಿದೆ ಮತ್ತು ಅನುಮೋದಿಸಿದೆ. ಇದರರ್ಥ ಒಪ್ಪಂದದ ನಿಬಂಧನೆಗಳನ್ನು ತನ್ನ ದೇಶೀಯ ನ್ಯಾಯವ್ಯಾಪ್ತಿಯಲ್ಲಿ ಗೌರವಿಸಲು, ರಕ್ಷಿಸಲು ಮತ್ತು ಕಾರ್ಯಗತಗೊಳಿಸಲು ಈ ದೇಶಗಳು ಕಾನೂನು ಬಾಧ್ಯತೆಯನ್ನು ಹೊಂದಿದೆ. ಮತ್ತು ಅವುಗಳನ್ನು ಉಲ್ಲಂಘಿಸುವಂತಿಲ್ಲ.
2018 ರಲ್ಲಿ UNHRC ಸಮಿತಿಯು ಮಹತ್ವದ ನಿರ್ಧಾರದಲ್ಲಿ, ಇಬ್ಬರು ಫ್ರೆಂಚ್ ಮುಸ್ಲಿಂ ಮಹಿಳೆಯರಿಗೆ ದಂಡ ವಿಧಿಸಿದ್ದು ಮತ್ತು ಫ್ರಾನ್ಸಿನ ಬುರ್ಖಾ ನಿಷೇಧವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ಆರ್ಟಿಕಲ್ 18) ಮತ್ತು ಸಮಾನತೆಯ ಹಕ್ಕನ್ನು (ಆರ್ಟಿಕಲ್ 26)ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತು. ಅಂದರೆ ಬುರ್ಖಾ ಅಥವಾ ಸಂಪೂರ್ಣ ಮುಖ ಮುಚ್ಚುವಂತೆ ವಸ್ತ್ರ ಧರಿಸುವುದನ್ನು IHRL ಅಡಿಯಲ್ಲಿ ಧರ್ಮದ ಹಕ್ಕಾಗಿ ರಕ್ಷಿಸಲಾಗಿದೆ . ಪ್ರಸ್ತುತ ಕರ್ನಾಟಕದಲ್ಲಿ ಹೇರಿರುವ ನಿಷೇಧವು ಕೇವಲ ಮುಖದ ಮುಸುಕುಗಳಿಗೆ ಮಾತ್ರ ಸಂಬಂಧಿಸದೆ ತಲೆ ಮುಚ್ಚುವ ಸ್ಕಾರ್ಫ್ಗೂ ಸಂಬಂಧಿಸಿದೆ
ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಾನೂನು ಬದ್ಧ ಮಿತಿಗಳಿವೇ?

ಧರ್ಮದ ಹಕ್ಕು ಸಹ ಇತರ ಹಕ್ಕುಗಳಂತೆಯೇ ಸಂಪೂರ್ಣ ಸ್ವಾತಂತ್ರವನ್ನು ನೀಡುವುದಿಲ್ಲ. ಆರ್ಟಿಕಲ್ 18 (3) ರ ಪ್ರಕಾರ ಒಬ್ಬರ ಧರ್ಮ ಅಥವಾ ನಂಬಿಕೆಗಳನ್ನು ಪ್ರಕಟಿಸುವ ಸ್ವಾತಂತ್ರ್ಯವು ಕಾನೂನಿನಿಂದ ಸೂಚಿಸಲಾದ ಸಾರ್ವಜನಿಕ ಸುರಕ್ಷತೆ, ಸುವ್ಯವಸ್ಥೆ, ಆರೋಗ್ಯ, ಅಥವಾ ನೈತಿಕತೆಯನ್ನು ರಕ್ಷಿಸಲು ಅಗತ್ಯವಿರುವಂತಹ ಮಿತಿಗಳಿಗೆ ಒಳಪಟ್ಟಿರುತ್ತದೆ. ಇದು ಭಾರತದ ಸಂವಿಧಾನದ 25 ನೇ ವಿಧಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ.

ಬುರ್ಖಾ ನಿಷೇಧಿಸಿದ ಫ್ರಾನ್ಸ್ “ಒಬ್ಬರ ಮುಖವನ್ನು ಮತ್ತೊಬ್ಬರಿಂದ ಮರೆಮಾಚುವುದು ವ್ಯಕ್ತಿಗಳ ನಡುವಿನ ಪರಸ್ಪರ ಸಂಬಂಧವನ್ನು ದುರ್ಬಲಗೊಳಿಸುತ್ತದೆ ಮತ್ತು ವೈವಿಧ್ಯಮಯ ಸಮಾಜದಲ್ಲಿ ಒಟ್ಟಿಗೆ ವಾಸಿಸುವ ಪರಿಸ್ಥಿತಿಗಳನ್ನು ಹಾಳುಮಾಡುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನುರಕ್ಷಿಸಲು ಕಾನೂನು ಜಾರಿಗೊಳಿಸಲಾಗಿದೆ” ಸಮರ್ಥಿಸಿತ್ತು.
ಭ್ರಾತೃತ್ವ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯ ಈ ವಾದಗಳನ್ನು ಪರಿಶೀಲಿಸಿದ UNHRC ಸಮಿತಿಯು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾವನ್ನು ನಿಷೇಧಿಸುವುದರಿಂದ ಈ ಹೇಳಲಾದ ಯಾವುದೇ ಉದ್ದೇಶಗಳನ್ನು ಪೂರೈಸಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನಿರ್ಧಾರವನ್ನು ತೆಗೆದುಕೊಳ್ಳುವಾಗ, ಸಮಿತಿಯು ಕೆಲವು ಅಂಶಗಳನ್ನು ಉಲ್ಲೇಖಿಸಿದ್ದು “ನಿಷೇಧವು ಪೂರ್ಣ ಮುಖದ ಮುಸುಕು ಅಂತರ್ಗತವಾಗಿ ತಾರತಮ್ಯವನ್ನು ಹೊಂದಿದೆ ಮತ್ತು ಅದನ್ನು ಧರಿಸುವ ಮಹಿಳೆಯರು ಬಲವಂತವಾಗಿ ಹಾಗೆ ಮಾಡುತ್ತಾರೆ ಎಂಬ ಊಹೆಯನ್ನು ಆಧರಿಸಿದೆ” ಎಂದು ಹೇಳಿದೆ. ಕೆಲವು ಮಹಿಳೆಯರು ಕೌಟುಂಬಿಕ ಅಥವಾ ಸಾಮಾಜಿಕ ಒತ್ತಡಗಳಿಂದ ಬುರ್ಖಾವನ್ನು ಧರಿಸುತ್ತಿರುವ ಸಾಧ್ಯತೆಗಳು ಇದೆಯಾದರೂ ಧಾರ್ಮಿಕ ನಂಬಿಕೆಯ ಆಧಾರದ ಮೇಲೂ ಧರಿಸುತ್ತಿರುವ ಸಾಧ್ಯತೆಗಳೂ ಇದೆ ಎಂದಿದೆ.

ಪ್ರಸ್ತುತ ಹಿಜಾಬ್ ನಿಷೇಧವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಅಡಿಯಲ್ಲಿ ಧರ್ಮದ ಹಕ್ಕನ್ನು ಉಲ್ಲಂಘಿಸುತ್ತದೆಯೇ?

ಕಾಲೇಜುಗಳಲ್ಲಿ ಬುರ್ಖಾ/ಹಿಜಾಬ್ ಧರಿಸುವುದನ್ನು ನಿಷೇಧಿಸುವುದು IHRL ಅಡಿಯಲ್ಲಿ ಸಂರಕ್ಷಿತವಾಗಿರುವ ಮುಸ್ಲಿಂ ಮಹಿಳೆಯರ ಧರ್ಮದ ಹಕ್ಕನ್ನು ನಿರ್ಬಂಧಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸಲು ಅನುಮತಿಸದ ಸರ್ಕಾರಿ ಪಿಯು ಕಾಲೇಜಿನ ನಿರ್ಧಾರವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಅಡಿಯಲ್ಲಿ ಸಂಪೂರ್ಣವಾಗಿ ನಿಯಮಬಾಹಿರ.
ಆದರೆ ಆನಂತರ ಹಿಜಾಬ್ ಮತ್ತು ಕೇಸರಿ ಶಾಲು ಹೆಚ್ಚಿನ ಕಾಲೇಜುಗಳಲ್ಲಿ ಗಲಭೆಗೆ ಕಾರಣವಾದಾಗ ಫೆಬ್ರವರಿ 5, 2022 ರಂದು ಸರ್ಕಾರವು ಏಕತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹೆಸರಿನಲ್ಲಿ ಏಕರೂಪದ ಡ್ರೆಸ್ ಕೋಡ್ನ ಭಾಗವಾಗಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತು. ಬಲಪಂಥೀಯ ಸಂಘಟನೆಗಳ ಋಣದಲ್ಲಿರುವ ಮತ್ತು ಸಮಸ್ಯೆಗಳಿಂದ ತಾತ್ಕಾಲಿಕ ಮುಕ್ತಿಯನ್ನಷ್ಟೇ ಬಯಸುವ ಸರ್ಕಾರದಿಂದ ಇದಕ್ಕಿಂತ ಹೆಚ್ಚಿನದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.

ಆದರೆ ಕರ್ನಾಟಕ ಉಚ್ಚ ನ್ಯಾಯಾಲಯವೂ ತನ್ನ ಮಧ್ಯಂತರ ಆದೇಶದಲ್ಲಿ ಎಲ್ಲಾ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶ ಅತ್ಯಂತ ನಿರಾಶದಾಯಕ. ಕೇಸರಿ ಶಾಲು ಸಹ ಹಿಜಾಬ್ನಂತೆಯೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಎಂಬ ತಪ್ಪುದಾರಿಗೆಳೆಯುವ ಮತ್ತು ಅಸಹ್ಯಕರ ಊಹೆಯ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ. ಶಾಲನ್ನು ಸಮಸ್ಯೆಯನ್ನು ಉಲ್ಬಣಗೊಳಿಸಲು ಮತ್ತು ರಾಜಕೀಯಗೊಳಿಸಲು ಧರಿಸಲಾಗಿದೆ ಮತ್ತು ಇದು ಆಳವಾದ ಧಾರ್ಮಿಕ ಆಚರಣೆಯಾಗಲೀ, ಧರಿಸಿದವರ ಗುರುತಿನ ಭಾಗವಾಗಲೀ ಅಲ್ಲ ಎಂಬುವುದನ್ನು ಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ.

ಸಮಾನತೆಯ ಆಧಾರದ ಮೇಲೆ ಹಿಜಾಬ್ ಅನ್ನು ನಿಷೇಧಿಸುವುದು ಅತ್ಯಂತ ತೆಳುವಾದ ಮತ್ತು ಆಳವಿಲ್ಲದ ಗ್ರಹಿಕೆಯಾಗಿದೆ. ಇಲ್ಲಿ ಕಾನೂನಿನ ಉದ್ದೇಶವು ಸಮಾನತೆಯಾಗಿದ್ದರೂ ಸಹ, ಅದರ ಪರಿಣಾಮವು ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಸ್ಪಷ್ಟ ತಾರತಮ್ಯವನ್ನು ಹೊಂದಿದೆ. ಸಾರ್ವಜನಿಕ ಸುವ್ಯವಸ್ಥೆಯ ಕಾರಣವೂ ಅಷ್ಟೇ ಆಧಾರರಹಿತವಾಗಿದೆ. ವಿಪರ್ಯಾಸವೆಂದರೆ, ಬೆತ್ತಲೆ ಸಾಧುಗಳನ್ನು ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಎಂದು ಪರಿಗಣಿಸಲಾಗುವುದಿಲ್ಲ ಆದರೆ ಸಂಪೂರ್ಣವಾಗಿ ಮುಚ್ಚಿದ ಮಹಿಳೆಯರನ್ನು ಪರಿಗಣಿಸಲಾಗುತ್ತದೆ. ಬುರ್ಖಾ ನಿಷೇಧವು ಫ್ರಾನ್ಸ್ ಅನ್ನು ಹೆಚ್ಚು ಶಾಂತಿಯುತ ಅಥವಾ ಜಾತ್ಯತೀತವಾಗದಂತೆ ಮಾಡಿತು ಎಂದಾದರೂ ಇದ್ದರೆ ಈ ನಿಷೇಧವನ್ನು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ, ಇದು ತನ್ನ ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಅಪನಂಬಿಕೆಯನ್ನು ಉಂಟುಮಾಡಿತು ಮತ್ತು ಫ್ರೆಂಚ್ ಸಮಾಜದ ಧ್ರುವೀಕರಣವನ್ನು ಹೆಚ್ಚಿಸಿತು.

ಹಿಜಾಬ್ ಬಗ್ಗೆ ಚರ್ಚೆಯಲ್ಲಿ, ಒಂದು ವಿಷಯವನ್ನು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ಸಾಂವಿಧಾನಿಕ ಕಾನೂನು ಮತ್ತು ಮಾನವ ಹಕ್ಕುಗಳ ಮಾನದಂಡಗಳ ಹೊಸ್ತಿಲಲ್ಲಿ ಕೂಲಂಕಷವಾಗಿ ಪರಿಶೀಲಿಸಬೇಕಾದ ಹಿಜಾಬ್ ಅನ್ನು ನಿಷೇಧಿಸುವುದೆಂದರೆ ಅದು ಕೇವಲ ಹಿಜಾಬ್ ನಿಷೇಧಲ್ಲ ಬದಲಾಗಿ ಒಂದು ಸಾಂಸ್ಕೃತಿಕ ಚಹರೆಯ ಮೇಲಿನ ನಿಷೇಧ. ಕೆಲವೊಮ್ಮೆ ಹಿಜಾಬ್ ಲಿಂಗ ತಾರತಮ್ಯದ ಅಭ್ಯಾಸವಾಗಿರಲೂ ಬಹುದು ಆದರೆ ಅದನ್ನು ನಿಷೇಧಿಸುವುದು ಅಂದರೆ ಬಲವಂತವಾಗಿ ಮಹಿಳೆಯರ ಉಡುಪಿನ ಹಕ್ಕನ್ನು ಕಿತ್ತುಕೊಂಡಂತೆ. ಅದರಲ್ಲೂ ಶಿಕ್ಷಣಾರ್ಥಿಯಾಗಿ ಕಾಲೇಜಿನ ಗೇಟಿನ ಮುಂದೆ ನಿಂತವರಿಗೆ ಹಿಜಾಬಿನ ನೆಪ ಮುಂದಿಟ್ಟುಕೊಂಡು ಶಿಕ್ಷಣ ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಹಿಜಾಬಿನ ಹೆಸರಲ್ಲಿ ಜನಾಂಗ ದ್ವೇಷ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ರಾಚುತ್ತಿದ್ದರೂ ಲಿಂಗ ಸಮಾನತೆ, ಪ್ರತಿಗಾಮಿ ನಡವಳಿಕೆ ಎಂದೆಲ್ಲಾ ನಿಷೇಧವನ್ನು ಸಮರ್ಥಿಸುವುದು ನಿಜವಾದ ಪ್ರತಿಗಾಮಿತನ.

Tags: burkhaHIJABKarnatakamuslimnternational Human Rights LawUNHRC ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಕರ್ನಾಟಕಧಾರ್ಮಿಕ ಸ್ವಾತಂತ್ರ್ಯಬುರ್ಖಾಮುಸ್ಲಿಂಯೂಎನ್‌ಎಚ್‌ಆರ್‌ಸಿಹಿಜಾಬ್‌
Previous Post

ಯುಪಿಯಲ್ಲಿ ಕೋಮು ವಿವಾದ ಸೃಷ್ಟಿಗೆ ಹೊಸ ಅಸ್ತ್ರಗಳ ಮೊರೆ ಹೋದ ಬಿಜೆಪಿ

Next Post

ಹಿಜಾಬ್‌ ವಿವಾದ | ಮಧ್ಯಪ್ರದೇಶದ ಬಿಜೆಪಿ ಹಿಜಾಬ್ ವಿಚಾರದಲ್ಲಿ ತಣ್ಣಗಾಗಿದ್ದೇಕೆ?

Related Posts

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ
Top Story

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

by ಪ್ರತಿಧ್ವನಿ
February 8, 2026
0

ಚಿನ್ನದ ಬೆಲೆ ಏರಿಕೆ ಜೊತೆಗೆ 2026ರ ಆರಂಭದಲ್ಲೇ ಕ್ರಿಪ್ಟೋ(crypto )ಹೂಡಿಕೆದಾರರಿಗೆ ಬಿಟ್‌ಕಾಯಿನ್(Bitcoin) ಭಾರಿ ಶಾಕ್ ನೀಡಿದೆ. ಒಂದು ಬಿಟ್‌ಕಾಯಿನ್ ಮೌಲ್ಯ 1.2 ಲಕ್ಷ ಡಾಲರ್‌ನಿಂದ 66 ಸಾವಿರ...

Read moreDetails
ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

February 7, 2026
ರಷ್ಯಾ ತೈಲ ಖರೀದಿ ಸುಂಕ ರದ್ದು: ಭಾರತದ ಮೇಲಿನ ಅಮೆರಿಕನ್ ತೆರಿಗೆ 50ರಿಂದ 18%ಗೆ ಇಳಿಕೆ

ರಷ್ಯಾ ತೈಲ ಖರೀದಿ ಸುಂಕ ರದ್ದು: ಭಾರತದ ಮೇಲಿನ ಅಮೆರಿಕನ್ ತೆರಿಗೆ 50ರಿಂದ 18%ಗೆ ಇಳಿಕೆ

February 7, 2026
Next Post
ಹಿಜಾಬ್‌ ವಿವಾದ | ಮಧ್ಯಪ್ರದೇಶದ ಬಿಜೆಪಿ ಹಿಜಾಬ್ ವಿಚಾರದಲ್ಲಿ ತಣ್ಣಗಾಗಿದ್ದೇಕೆ?

ಹಿಜಾಬ್‌ ವಿವಾದ | ಮಧ್ಯಪ್ರದೇಶದ ಬಿಜೆಪಿ ಹಿಜಾಬ್ ವಿಚಾರದಲ್ಲಿ ತಣ್ಣಗಾಗಿದ್ದೇಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada