ಬೆಂಗಳೂರು ಜನರು ಮಳೆಗೆ ನಲುಗಿ ಹೋಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ಜತೆ ಮಳೆ ಹಾನಿ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾದ ಕಮಿಷನರ್ ಯಲಹಂಕದ ಟಾಟಾ ನಗರದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾರು ನೀರಿನಲ್ಲಿ ಚಲಿಸಲು ಸಾಧ್ಯವಾಗಲಿಲ್ಲ. ಆಗ ಟ್ರಾಕ್ಟರ್ನಲ್ಲೇ ತುಷಾರ್ ಗಿರಿನಾಥ್ ರೌಂಡ್ಸ್ ಹಾಕಿದರು.. ಹಲವು ಏರಿಯಾಗಳ ಜನ ಬಿಬಿಎಂಪಿ ಆಯುಕ್ತರಿಗೆ ತರಾಟೆ ತೆಗೆದುಕೊಂಡರು..
ಮಳೆ ಹಾನಿ ಪ್ರದೇಶ ಪರಿಶೀಲನೆ ನಂತರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದರು.. ಯಲಹಂಕದಲ್ಲಿ ಸುರಿದಿರುವ ಅತಿ ಹೆಚ್ಚಿನ ಮಳೆಯಿಂದ ಕೆರೆ ತುಂಬಿ ನೀರು ಓವರ್ ಫ್ಲೋ ಆಗ್ತಿದೆ.. ಈ ವಲಯದಲ್ಲಿ ಮಳೆಯಿಂದ 10 ರಿಂದ 11 ಲೇಔಟ್ನಲ್ಲಿ ಅವಾಂತರ ಆಗಿದೆ.. 4 ಸಾವಿರ ಮನೆಗಳು ಸಮಸ್ಯೆಗೆ ಒಳಗಾಗಿದೆ. ಕೇಂದ್ರೀಯ ವಿಹಾರದ ನಿವಾಸಿಗಳನ್ನು ಸ್ಥಳಾಂತರ ಮಾಡಿದ್ದೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಉಂಟಾಗಿರುವ ಮಳೆ ಅವಾಂತರದ ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ SDRF ತಂಡ ರಕ್ಷಣಾ ಕಾರ್ಯ ನಡೆಸಿದೆ.. ಮಳೆ ಅನಾಹುತಗಳ ಬಗ್ಗೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ… ಕೇಂದ್ರಿಯ ವಿಹಾರ್, ಟಾಟಾ ನಗರದಲ್ಲಿ ನೀರು ಎತ್ತುವ ಕೆಲಸ ಆಗ್ತಿದೆ. ಎಲ್ಲೆಲ್ಲಿ ಮಳೆಯಿಂದ ಸಮಸ್ಯೆ ಆಗಿದೆ ಆ ಬಗ್ಗೆ ವರದಿ ನೀಡಲು ಹೇಳಿದ್ದೇನೆ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಕೆಲಸಕ್ಕೆ ಕ್ರೆಡಿಟ್ ತಗೋತಿದ್ದಾರೆ. ಆದರೆ ಅವರು ಬಂದ ಮೇಲೆ ಕೆಲಸ ಮಾಡಿಲ್ಲ. ಸಿಎಂ, ಡಿಸಿಎಂ ನಡುವಿನ ವ್ಯತ್ಯಾಸದಿಂದ ಬೆಂಗಳೂರಿಗೆ ಪೆಟ್ಟಾಗಿದೆ. ಬೆಂಗಳೂರಿನ ಜನ ಬೋಟಲ್ಲಿ ಹೋಗುವ ಸ್ಥಿತಿ ಇದೆ. ಜನರಿಗೆ ಬೋಟ್‌ಗಳನ್ನಾದರೂ ಕೊಡಿಸಲಿ. ಇಂಗ್ಲೆಂಡ್ ರೀತಿ ಬೋಟ್ ವ್ಯವಸ್ಥೆ ತರಲಿ ಎಂದು ವ್ಯಂಗ್ಯವಾಡಿದ್ದಾರೆ. ರೋಡ್ ಟ್ರಾನ್ಸ್‌ಪೋರ್ಟ್‌ನಲ್ಲಿ ಸರ್ಕಾರ ವಿಫಲ ಆಗಿದೆ. ಬೋಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಆದರೂ ಜಾರಿಗೆ ತರಲಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಉಂಟಾಗಿರುವ ಮಳೆ ಅವಾಂತರಕ್ಕೆ ಜೆಡಿಎಸ್ ಚಾಟಿ ಬೀಸಿದೆ. ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.. ಡಿಸಿಎಂ ಡಿಕೆ ಶಿವಕುಮಾರ್ ನನ್ನ ವಿಷನ್ ಬ್ರಾಂಡ್ ಬೆಂಗಳೂರು ಮಾಡೋದು ಅಂತ ಹೇಳ್ತಾರೆ.. ಆದರೆ ವಾಸ್ತವದಲ್ಲಿ ಹಾಗಾಗಿಲ್ಲ. ಬೆಂಗಳೂರಿನಾದ್ಯಂತ ಚರಂಡಿ ವ್ಯವಸ್ಥೆ ಹಾಳಾಗಿದೆ.. ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ತಲೆಕೆಡಿಸಿಕೊಂಡಿಲ್ಲ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಸಿಗ್ತಿಲ್ಲ. ಇವರಿಗೆಲ್ಲ ನಾಚಿಕೆ ಆಗಬೇಕು ಅಂತ ಆಕ್ರೋಶ ವ್ಯಕ್ತ ಪಡಿಸಿದ್ರು..