• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರನ ವಿರುದ್ಧ ವೈಭವ್‌ ಸೂರ್ಯವಂಶಿ ರೊಚ್ಚಿಗೇಳಲು ಕಾರಣವೇನು..?

ಶ್ರೀಲಂಕಾದ ಆಟಗಾರ ವಿಶೇನ್ ಹಲಂಬ ಉದ್ಧಟತನಕ್ಕೆ ಸಿಡಿದೆದ್ದ ಯುವ ಆಟಗಾರ..

ಪ್ರತಿಧ್ವನಿ by ಪ್ರತಿಧ್ವನಿ
June 16, 2026
in Top Story, ಇದೀಗ, ಕ್ರೀಡೆ, ದೇಶ, ವಿದೇಶ
0
ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರನ ವಿರುದ್ಧ ವೈಭವ್‌ ಸೂರ್ಯವಂಶಿ ರೊಚ್ಚಿಗೇಳಲು ಕಾರಣವೇನು..?

Vaibhav Suryavanshi Anger

Share on WhatsAppShare on FacebookShare on Telegram

ಬೆಂಗಳೂರು : ಭಾರತ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ ಎ ಸರಣಿಯ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾದ ಎದುರು ಸೋಲಿಗೆ ಶರಣಾಗಿದೆ. ಇದಾದ ಬಳಿಕ ಪೆವಿಲಿಯನ್‌ಗೆ ವಾಪಸ್ಸಾಗುತ್ತಿದ್ದ ಭಾರತ ತಂಡದ ಯುವ ಆರಂಭಿಕ ಆಟಗಾರ ವೈಭವ್‌ ಸೂರ್ಯವಂಶಿ ಹಾಗೂ ಶ್ರೀಲಂಕಾದ ಆಟಗಾರನ ನಡುವೆ ಗಲಾಟೆ ನಡೆದಿದೆ.

ADVERTISEMENT
CM DK Shivakumar : ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ವೈದ್ಯಕೀಯ ಕ್ಷೇತ್ರದ ಆಧಾರ ಸ್ಥಂಭ..! #pratidhvani

ದಂಬುಲ್ಲಾದಲ್ಲಿ ನಡೆದ ಪಂದ್ಯವು ಟೈನಲ್ಲಿ ಕೊನೆಗೊಂಡಿದ್ದರಿಂದ ಸೂಪರ್ ಓವರ್‌ ನಡೆಸಲಾಯಿತು. ಸೂಪರ್ ಓವರ್ ನಲ್ಲಿ ಭಾರತ ಸೋಲು ಕಂಡಿದೆ. ಈ ಪಂದ್ಯದ ಸಮಯದಲ್ಲಿ ವೈಭವ್ ಕೋಪಗೊಂಡು ಶ್ರೀಲಂಕಾ ಆಟಗಾರನೊಂದಿಗೆ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ಉಲ್ಬಣಗೊಂಡು ಇಬ್ಬರೂ  ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಂತರ ಪರಿಸ್ಥಿತಿಯನ್ನು ಶಾಂತಗೊಳಿಸಲು ಇತರ ಆಟಗಾರರು ಮಧ್ಯಪ್ರವೇಶ ಮಾಡಿದರು.

ಇದನ್ನೂ ಓದಿ : ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ : ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ

ಆದರೆ ಆರಂಭದಲ್ಲಿ ವೈಭವ್‌ ಸೂರ್ಯವಂಶಿ ಆಟದ ಬಳಿಕ ವಾಪಸ್‌ ಪೆವಿಲಿಯನ್‌ಗೆ ತೆರಳುತ್ತಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಲಂಬ ವೈಭವ್‌ನನ್ನು ’ಪಂದ್ಯ ಮುಗೀತು, ಇನ್ನು ಮನೆಯ ಕಡೆಗೆ ಹೋಗು’ಎಂದು ಕೆಣಕಿದ್ದಾರೆ. ಈ ವೇಳೆ ಕೋಪಗೊಂಡ ಭಾರತೀಯ ಆಟಗಾರ ಹಲಂಬ ಮೇಲೆ ಆಕ್ರೋಶ ವ್ಯಕ್ತಪಡಿಸಿ ಮುಂದೆ ಸಾಗುತ್ತಿದ್ದ ವೇಳೆ ಸ್ಥಳದಲ್ಲಿದ್ದ ಆಟಗಾರರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.

ಇನ್ನೂ ಆಟದ ಬಳಿಕವೂ ಕೈ ಕುಲುಕಿದಾಗಲೂ, ಸೂರ್ಯವಂಶಿ ಅಸಮಾಧಾನಗೊಂಡಂತೆ ಇದ್ದರು. ತಂಡದ ಸದಸ್ಯರು ಅವರನ್ನು ಶಾಂತಗೊಳಿಸಿ ಪೆವಿಲಿಯನ್‌ಗೆ ಕಳುಹಿಸಿದರು. ಪ್ರಮುಖವಾಗಿ ಐಸಿಸಿ ನಿಯಮಾವಳಿಗಳ ಪ್ರಕಾರ ಈ ರೀತಿಯ ವಿಚಾರಗಳಲ್ಲಿ ಮಂಡಳಿಯು ತಲೆ ಹಾಕುವುದಿಲ್ಲ. ಆದರೆ ಈ ಗಲಾಟೆಯು ಕ್ರೀಡಾಂಗಣದಲ್ಲಿ ನಡೆದಿರುವುದರಿಂದ ಐಸಿಸಿಯು ಇಬ್ಬರೂ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Tags: Cricket NewsICCIndian Cricket Playerone-day cricketPratidhvanisports newsSrilankan PlayerVaibhav SuryavanshiVishen Halamba
Previous Post

ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆ ಬಿಜೆಪಿ-ಜೆಡಿಎಸ್‌ ಕೂಸು, ನಮ್ಮದಲ್ಲ: ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

Next Post

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

Related Posts

Karnataka Drought: ಬತ್ತಿದ ತುಂಗಭದ್ರಾ ನದಿ: ಏಕಾಏಕಿ ಸಾವಿರಾರು ಮೀನುಗಳ ಸಾವು
Top Story

Karnataka Drought: ಬತ್ತಿದ ತುಂಗಭದ್ರಾ ನದಿ: ಏಕಾಏಕಿ ಸಾವಿರಾರು ಮೀನುಗಳ ಸಾವು

by ಪ್ರತಿಧ್ವನಿ
July 20, 2026
0

ಕೊಪ್ಪಳ: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದು, ಬಹುತೇಕ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸುತ್ತಿದೆ. ಸಮರ್ಪಕ ಮಳೆಯ ಕೊರತೆಯಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು,...

Read moreDetails
ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ: ಸದನದ ಬಾವಿಗಿಳಿದು ಪ್ರತಿಭಟನೆ

ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ: ಸದನದ ಬಾವಿಗಿಳಿದು ಪ್ರತಿಭಟನೆ

July 20, 2026
ದಾಂಡೇಲಿಯಲ್ಲಿ ಜಿಪ್‌ಲೈನ್‌ ದುರಂತ: ಪ್ರವಾಸಿಗನ ಸ್ಥಿತಿ ಚಿಂತಾಜನಕ

ದಾಂಡೇಲಿಯಲ್ಲಿ ಜಿಪ್‌ಲೈನ್‌ ದುರಂತ: ಪ್ರವಾಸಿಗನ ಸ್ಥಿತಿ ಚಿಂತಾಜನಕ

July 20, 2026
FIFA World Cup 2026: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಅಬ್ಬರ..! ಮೆಸ್ಸಿ ಕನಸಿಗೆ ಕಣ್ಣೀರ ತೆರೆ..!

FIFA World Cup 2026: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಅಬ್ಬರ..! ಮೆಸ್ಸಿ ಕನಸಿಗೆ ಕಣ್ಣೀರ ತೆರೆ..!

July 20, 2026
Prajwal Revanna: ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ

Prajwal Revanna: ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ

July 20, 2026
Next Post
ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada