• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, October 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಪ್ರತಿಧ್ವನಿ by ಪ್ರತಿಧ್ವನಿ
June 16, 2026
in ಕ್ರೀಡೆ
0
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ
Share on WhatsAppShare on FacebookShare on Telegram

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ವಿಶೇಷ ದಿನವಾಗಿದ್ದು, ಸುಮಾರು 12 ಗಂಟೆಗಳ ಕಾಲ ನಿರಂತರ ಕ್ರಿಕೆಟ್ ರಸದೌತಣ ಸಿಗಲಿದೆ. ಭಾರತ ‘ಎ’ ತಂಡ, ಪುರುಷರ ಹಿರಿಯ ರಾಷ್ಟ್ರೀಯ ತಂಡ ಹಾಗೂ ಮಹಿಳಾ ತಂಡಗಳು ಒಂದೇ ದಿನ ತಮ್ಮ ತಮ್ಮ ಮಹತ್ವದ ಪಂದ್ಯಗಳನ್ನು ಆಡಲಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ADVERTISEMENT
Athani Sand Mafia : ಬಳ್ಳಾರಿಯನ್ನೇ ಮೀರಿಸುವಂತಿದೆ ಅಥಣಿಯ ಅಕ್ರಮ ಮಣ್ಣು ಗಣಿಗಾರಿಕೆ.! #pratidhvani

ತ್ರಿಕೋನ ಏಕದಿನ ಸರಣಿಯ ಭಾಗವಾಗಿ ತಿಲಕ್ ವರ್ಮಾ ನಾಯಕತ್ವದ ಭಾರತ ‘ಎ’ ತಂಡ ಬೆಳಗ್ಗೆ 10 ಗಂಟೆಗೆ ಅಫ್ಘಾನಿಸ್ತಾನ ‘ಎ’ ತಂಡವನ್ನು ಎದುರಿಸಲಿದೆ. ಫೈನಲ್ ಪ್ರವೇಶದ ಕನಸು ಜೀವಂತವಾಗಿಡಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಸೋಲು ಕಂಡರೆ ಟೂರ್ನಿಯಲ್ಲಿ ತಂಡದ ಅಭಿಯಾನ ಅಂತ್ಯಗೊಳ್ಳಲಿದೆ.ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪ್ರದರ್ಶನದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಅವರು ಈ ಬಾರಿ ದೊಡ್ಡ ಇನ್ನಿಂಗ್ಸ್ ಆಡಲು ಕಾತರರಾಗಿದ್ದಾರೆ. ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಸೋನಿಲೈವ್‌ನಲ್ಲಿ ವೀಕ್ಷಿಸಬಹುದು.

Krishna Byre Gowda : ಮುನಿಸು ಮರೆತ ಕೃಷ್ಣ ಭೈರೇಗೌಡ..! #ministry #krishnabyregowda #pratidhvani

 

ಮಧ್ಯಾಹ್ನ 1.30ಕ್ಕೆ ಲಖನೌನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಈ ಪಂದ್ಯದಲ್ಲೂ ಜಯ ಸಾಧಿಸಿ ಸರಣಿಯನ್ನು ಮುಂಚಿತವಾಗಿಯೇ ತನ್ನದಾಗಿಸಿಕೊಳ್ಳುವ ಗುರಿ ಹೊಂದಿದೆ.ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ಹಾಗೂ ಫಿಟ್‌ನೆಸ್ ಕುರಿತು ಅಭಿಮಾನಿಗಳಲ್ಲಿ ಕುತೂಹಲವಿದ್ದು, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರತ್ತ ಗಮನ ಹರಿದಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಗಳು ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

CM DK Shivakumar : ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ವೈದ್ಯಕೀಯ ಕ್ಷೇತ್ರದ ಆಧಾರ ಸ್ಥಂಭ..! #pratidhvani

ಸಂಜೆ 7 ಗಂಟೆಗೆ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಭಾರತ, ಅದೇ ಲಯವನ್ನು ಮುಂದುವರಿಸಿ ಮತ್ತೊಂದು ಗೆಲುವಿನತ್ತ ಕಣ್ಣಿಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಈ ಪಂದ್ಯ ತಂಡಕ್ಕೆ ಪ್ರಮುಖವಾಗಿದೆ.

ಬೆಳಗ್ಗೆಯಿಂದ ರಾತ್ರಿ ತನಕ ಮೂರು ವಿಭಿನ್ನ ಭಾರತೀಯ ತಂಡಗಳ ಪಂದ್ಯಗಳು ನಡೆಯಲಿರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಇದು ಹಬ್ಬದ ಸಂಭ್ರಮವಾಗಿದೆ. ಯುವ ಪ್ರತಿಭೆಗಳ ಆಟ, ಟೀಮ್ ಇಂಡಿಯಾದ ಸರಣಿ ಗೆಲುವಿನ ಹೋರಾಟ ಹಾಗೂ ಮಹಿಳಾ ತಂಡದ ವಿಶ್ವಕಪ್ ಅಭಿಯಾನ—ಮೂರು ಪಂದ್ಯಗಳೂ ಅಭಿಮಾನಿಗಳಿಗೆ ರೋಚಕ ಅನುಭವ ನೀಡಲಿವೆ.

 

Tags: #12HoursOfCricket#Afghanistan#CricketDay#CricketExcitement#CricketMatch#HarmanpreetKaur#IndiaA#IndianWomenCricket#LiveCricket#ODI#rohitsharma#TilakVarma#VaibhavSuryavanshiCricketFanscricketnewsIndianCricketnetherlandsSportsNewst20WorldcupTeamIndia\
Previous Post

ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

Next Post

ಕಾಮಿಡಿಯಿಂದ ಹೀರೋವರೆಗೆ: ಗಿಲ್ಲಿ ನಟನ ಹೊಸ ಸಿನಿ ಜರ್ನಿ ಆರಂಭ

Related Posts

BREAKING: Another gold medal for Nishad Kumar at the Asian Para Games
Top Story

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಿಶಾದ್ ಕುಮಾರ್ ಗೆ ಮತ್ತೊಂದು ಚಿನ್ನದ ಪದಕ

by ಪ್ರತಿಧ್ವನಿ
October 20, 2026
0

ಎರಡು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತ ಭಾರತದ ನಿಶಾದ್ ಕುಮಾರ್ (Nishad Kumar), 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನ (Asian Para Games) ಎರಡನೇ ದಿನದಂದು ಅದ್ಭುತ...

Read moreDetails
BREAKING : ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ನೇಮಕ : ರಮೇಶ್ ಪೊವಾರ್ ಗೆ ಸದಸ್ಯ ಸ್ಥಾನ

BREAKING : ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ನೇಮಕ : ರಮೇಶ್ ಪೊವಾರ್ ಗೆ ಸದಸ್ಯ ಸ್ಥಾನ

October 19, 2026
Ind vs WI: Bhuvneshwar Kumar makes a comeback to Team India after 4 years.

Ind vs WI : 4 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್

October 16, 2026
Yuvraj Singh appointed as batting coach for Delhi Capitals

BREAKING : ಡೆಲ್ಲಿ ಕ್ಯಾಪಿಟಲ್ಸ್‌ಗೆ ಬ್ಯಾಟಿಂಗ್ ಕೋಚ್ ಆಗಿ ಯುವರಾಜ್ ಸಿಂಗ್ ನೇಮಕ | Yuvraj Singh

October 13, 2026
ICC ‘Player of the Month’ Honour: Prestigious Award for India’s Shubman Gill and Shafali Verma

ಐಸಿಸಿ ‘ಪ್ಲೇಯರ್ ಆಫ್ ದಿ ಮಂತ್’ ಗೌರವ: ಭಾರತದ ಶುಭ್‌ಮನ್ ಗಿಲ್ ಮತ್ತು ಶಫಾಲಿ ವರ್ಮಾಗೆ ಪ್ರತಿಷ್ಠಿತ ಪ್ರಶಸ್ತಿ | Player of the Month

October 13, 2026
Next Post
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಕಾಮಿಡಿಯಿಂದ ಹೀರೋವರೆಗೆ: ಗಿಲ್ಲಿ ನಟನ ಹೊಸ ಸಿನಿ ಜರ್ನಿ ಆರಂಭ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada