• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಲಿಂಗಾಯತ ನಾಯಕರಿಗೆ ಎದುರಾಗಿರುವ ಆತಂಕ ಏನು..?

ಕೃಷ್ಣ ಮಣಿ by ಕೃಷ್ಣ ಮಣಿ
April 19, 2025
in Top Story, ಕರ್ನಾಟಕ, ರಾಜಕೀಯ
0
ಲಿಂಗಾಯತ ನಾಯಕರಿಗೆ ಎದುರಾಗಿರುವ ಆತಂಕ ಏನು..?
Share on WhatsAppShare on FacebookShare on Telegram

ಜಾತಿ ಜನಗಣತಿ ವಿಚಾರವಾಗಿ ಲಿಂಗಾಯತ ಸಚಿವರು ವಿಶೇಷ ಕ್ಯಾಬಿನೆಟ್ ಸಭೆಗೂ ಮುನ್ನ ಪ್ರತ್ಯೇಕವಾಗಿ ಸಭೆ ಮಾಡಿದ್ದಾರೆ ಅನ್ನೋ ವಿಚಾರ ಭಾರೀ ಚರ್ಚೆ ಆಗ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ಪ್ರತ್ಯೇಕ ಸಭೆ ಮಾಡಿ, ಸಿಎಂ ಸಿದ್ದರಾಮಯ್ಯ ಎದುರು ಏನು ಹೇಳಬೇಕು..? ಜಾತಿ ಜನಗಣತಿ ಬಗ್ಗೆ ಸಮುದಾಯದಲ್ಲಿ ಯಾವ ವಿಚಾರ ಆತಂಕ ಮೂಡಿಸಿದೆ ಎನ್ನೂ ಬಗ್ಗೆ ಸಚಿವರು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ಸಚಿವರಾದ ಎಂ.ಬಿ ಪಾಟೀಲ್​, ಶಿವಾನಂದ ಪಾಟೀಲ್, ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಲಿಂಗಾಯತ ಸಮುದಾಯದ 7 ಮಂದಿ ಸಚಿವರು ಸಭೆ ಸೇರಿ ಕ್ಯಾಬಿನೆಟ್‌ಗೂ ಮುನ್ನ ಚರ್ಚೆ ನಡೆಸಿದ್ದಾರೆ. ಎಲ್ಲಾ ಸಚಿವರು ಚರ್ಚೆ ನಡೆಸಿದ ನಂತರ ಕಳೆದ ಬಾರಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಪ್ರಯತ್ನ ಮಾಡಿದ ನಂತರ ಎದುರಾದ ಚುನಾವಣೆಯಲ್ಲಿ ಎಡವಟ್ಟು ಆಗಿತ್ತು ಅನ್ನೋದನ್ನು ಸಿಎಂ ಸಿದ್ದರಾಮಯ್ಯ ಎದುರು ಗಮನಕ್ಕೆ ತಂದರು.

ಸಚಿವ ಶಿವಾನಂದ ಪಾಟೀಲ್ ಸಚಿವ ಸಂಪುಟದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಸಿಎಂ ಸಿದ್ದರಾಮಯ್ಯ ಮರುಪ್ರಶ್ನೆ ಹಾಕಿದ್ದು, ಯಾವ ರೀತಿ ತೊಂದರೆ ಆಯ್ತು ಶಿವಾನಂದ ಪಾಟೀಲ್‌ ಎಂದಿದ್ದಕ್ಕೆ ಮತಗಳಿಕೆ ಮೇಲೆ ಪರಿಣಾಮ ಬೀರಿತ್ತು ಸರ್ ಎಂದಿದ್ದಾರೆ ಎನ್ನಲಾಗಿದೆ. ಈ ಮಾತು ನಿಜವಾಗಿದ್ದರೆ ಎಂ.ಬಿ ಪಾಟೀಲ್ ಹೇಗೆ ಗೆದ್ರು..? ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಎಂ.ಬಿ ಪಾಟೀಲ್‌ ಅವರೇ ಮುಂಚೂಣಿಯಲ್ಲಿ ಇದ್ರಲ್ಲಪ್ಪ ಎಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಈಶ್ವರ ಖಂಡ್ರೆ, ಇಲ್ಲ ಸಾರ್, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಮತಗಳಿಗೆ ಮೇಲೆ ಸಮಸ್ಯೆ ಆಗಿತ್ತು ಎಂದಿದ್ದಾರೆ. ಈ ಮಾತುಕತೆ ವೇಳೆ ಮಧ್ಯ ಪ್ರವೇಶ ಮಾಡಿದ ಎಂಬಿ ಪಾಟೀಲ್, ಪ್ರತ್ಯೇಕ ಧರ್ಮ ವಿರೋಧ ಮಾಡಿದ್ದವರೂ ಆಗ ಸೋತಿದ್ದರು. ಎಸ್.ಎಸ್‌ ಮಲ್ಲಿಕಾರ್ಜುನ್ ಕೂಡ ಸೋತಿದ್ರಲ್ಲ ಎಂದಿದ್ದಾರೆ. ಅಷ್ಟರಲ್ಲಿ ಚರ್ಚೆ ದಾರಿ ತಪ್ಪುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ. ಜಾತಿ ಜನಗಣತಿ ಅಂಕಿ-ಅಂಶದ ಬಗ್ಗೆ ಮಾತಾಡೋಣ ಎಂದು ಲಿಂಗಾಯತ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು ಅನ್ನೋದು ಗೊತ್ತಾಗಿದೆ.

ಈ ಬಗ್ಗೆ ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಮಾತನಾಡಿ, ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳು ವರದಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವೆಲ್ಲ ಸಚಿವರು ನಮ್ಮ ನಮ್ಮ ಸಮುದಾಯಕ್ಕೆ ಆಗುವ ಅನುಕೂಲ ಹಾಗೂ ಅನಾಕೂಲದ ಬಗ್ಗೆ ತಿಳಿಸಿದ್ದೇವೆ. ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಸಂಪುಟ ಸಭೆ ವೇಳೆ ಯಾವುದೇ ವಾಗ್ವಾದ ಆಗಿಲ್ಲ. ಎಲ್ಲವೂ ಸೌಹಾರ್ಧಯುತವಾಗಿದೆ. ಎಲ್ಲರೂ ಕೂಡಾ ಇದರ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ. ಚರ್ಚೆ ‌ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆವೆ. ಸಮೀಕ್ಷೆ ಬಗ್ಗೆಯೂ ಸಭೆಯಲ್ಲಿ‌ ವಿವರಣೆ ನೀಡಿದ್ದಾರೆ ಎಂದಿದ್ದಾರೆ ಎಂಬಿ ಪಾಟೀಲ್.

Tags: #lingayatbsy son meets lingayat seerscongress conspiracy on lingayatcongress leader newscongress leader ramalinga reddyLingayatLingayat Communitylingayat dharmalingayat karnatakalingayat matalingayat minority statuslingayat seerlingayat seer arrestedlingayat seers backs karnataka cmlingayat separate religionlingayat vachanasramalinga reddy upset with party leadersrape accused lingayat seersaparate lingayat row
Previous Post

ರಾಜ್ಯದಲ್ಲಿ ಬೇಸಿಗೆ ಮಳೆಯಿಂದ ಏನೆಲ್ಲಾ ಅನಾಹುತ ಆಯ್ತು..?

Next Post

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ತಡರಾತ್ರಿ ಫೈರಿಂಗ್..! ರಿಕ್ಕಿ ರೈ ಜಸ್ಟ್ ಮಿಸ್.. ಆಸ್ಪತ್ರೆಗೆ ದಾಖಲು 

Related Posts

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
Top Story

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ KIMS Hospitals ನಲ್ಲಿ ಚಿಕಿತ್ಸೆ...

Read moreDetails
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ತಡರಾತ್ರಿ ಫೈರಿಂಗ್..! ರಿಕ್ಕಿ ರೈ ಜಸ್ಟ್ ಮಿಸ್.. ಆಸ್ಪತ್ರೆಗೆ ದಾಖಲು 

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ತಡರಾತ್ರಿ ಫೈರಿಂಗ್..! ರಿಕ್ಕಿ ರೈ ಜಸ್ಟ್ ಮಿಸ್.. ಆಸ್ಪತ್ರೆಗೆ ದಾಖಲು 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada