ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿದ್ದು, ಬೆಂಗಳೂರು ನಗರದಲ್ಲಿ ಮುಂದಿನ ಎರಡುವಾರಗಳ ಕಾಲ 10 ಮತ್ತು 12ನೇ ತರಗತಿ ಹೊರತುಪಡಿಸಿ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಲಾಗಿದೆ.
ಇಂದಿನ ಸಿಎಂ ಸಭೆಯ ಬಳಿಕ ಮಾತನಾಡಿದಂತ ಸಚಿವ ಆರ್ ಅಶೋಕ್, 10 ಮತ್ತು 12ನೇ ತರಗತಿ ಹೊರತುಪಡಿಸಿ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗುವುದು, ಸಾರ್ವಜನಿಕ ಸ್ಥಳಗಳಾದ ಮಾಲ್, ಪಬ್, ಬಾರ್ ಮತ್ತು ಚಿತ್ರಮಂದಿರಗಳಲ್ಲಿ ಶೇ.50ರ ಮಿತಿಯನ್ನು ಏರಲಾಗಿದೆ. ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಲಾಗಿದೆ. ನೈಟ್ ಕರ್ಪ್ಯೂ ಮುಂದಿನ ಎರಡು ವಾರ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು, ಓಮಿಕ್ರಾನ್ ಕೋವಿಡ್ ಗಿಂತ 5 ಪಟ್ಟು ಜಾಸ್ತಿಯಾಗುತ್ತಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಇವತ್ತು ಬೆಂಗಳೂರಿನಲ್ಲಿ 2048 ಕೇಸ್ ಆಗಿದೆ. ಓಮಿಕ್ರಾನ್ 147 ಕೇಸ್ ಪತ್ತೆಯಾಗಿದೆ ಎಂದಿದ್ದಾರೆ.
ಕಳೆದ ಮೂರು ದಿನಗಳಿಂದ ಕೋವಿಡ್ ಪ್ರಕರಣಗಳು ಎರಡು ಪಟ್ಟು ಹೆಚ್ಚು ಆಗ್ತಿದೆ. ಇವತ್ತು ಮೂರು ಸಾವಿರ ಆಗ್ತಾ ಇರೋದು ಆರು ಸಾವಿರ, ಹೀಗೆ ಹತ್ತು ಸಾವಿರ ಆಗೋ ಸಾಧ್ಯತೆ ಇದೆ. ಇದರಿಂದಾಗಿ ವಿಶೇಷವಾಗಿ ಬೆಂಗಳೂರಿಗೆ ವಿಶೇಷ ನಿಯಮ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ಜಾರಿಗೆ ತರುವ ತೀರ್ಮಾನವನ್ನು ಸಿಎಂ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಆಕ್ಸಿಜನ್ ಬೆಡ್ ಕೊರತೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕೋವಿಡ್ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸುವಂತೆ ಸಲಹೆ ಕೇಳಿ ಬಂದಿದೆ.
ಥಿಯೇಟರ್, ಶಾಪಿಂಗ್ ಮಾಲ್, ಸ್ವಿಮ್ಮಿಂಗ್ ಪೂಲ್, ಜಿಮ್, ಸಾರ್ವಜನಿಕ ಸ್ಥಳಗಳಲ್ಲಿ 50:50 ಮಿತಿ ಜಾರಿಗೊಳಿಸುವ ಬಗ್ಗೆ ಸಲಹೆ ನೀಡಲಾಗಿದೆ.