ನವದೆಹಲಿ : ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ , ಅಮೆರಿಕವು ಇರಾನ್ನಲ್ಲಿರುವ ತನ್ನ ಪ್ರಜೆಗಳಿಗೆ ತಕ್ಷಣವೇ ಇರಾನ್ ತೊರೆಯುವಂತೆ ತುರ್ತುಬ ಸೂಚನೆ ನೀಡಿದೆ. ಈ ಕುರಿತು ಇರಾನ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆದೇಶ ಹೊರಡಿಸಿದೆ, ದೇಶಾದ್ಯಂತ ಅಶಾಂತಿ ಹಾಗೂ ದಂಗೆಗಳು ನಡೆಯುತ್ತಿವೆ, ಇದು ಅಮೆರಿಕದ ಪ್ರಜೆಗಳಿಗೆ ಸಂಕಷ್ಟ ತಂದೊಡ್ಡುವ ಅಪಾಯವಿದೆ, ಹೀಗಾಗಿ ಟ್ರಂಪ್ ಸರ್ಕಾರದ ಸಹಾಯಕ್ಕಾಗಿ ಎದುರು ನೋಡಬೇಡಿ. ನಿಮ್ಮ ಸುರಕ್ಷತೆ ನಿಮ್ಮ ಹೊಣೆ, ಹೇಗಾದರೂ ಮಾಡಿ ಅಮೆರಿಕದ ಸೇರಿಕೊಳ್ಳಿ ಎಂದು ಶಾಕಿಂಗ್ ಸಂದೇಶ ನೀಡಿದೆ.
ನಿಮಗೆ ಇರಾನ್ನಿಂದ ಹೊರಡಲು ಸಾಧ್ಯವಾಗದಿದ್ದರೆ, ನಿಮ್ಮ ಊಟ, ವಸತಿ, ನೀರು, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಬಗ್ಗೆ ನೀವು ಹೆಚ್ಚು ಗಮನ ಹರಿಸಿ. ಎಲ್ಲಿಯೂ ಓಡಾಡಬೇಡಿ, ನಿಮ್ಮ ಸುತ್ತಮುತ್ತಲಿನ ಜನರು ಹಾಗೂ ಪ್ರದೇಶದ ಬಗ್ಗೆ ಎಚ್ಚರದಿಂದಿರಿ ಎಂದು ರಾಯಬಾರ ಕಚೇರಿ ಸಲಹೆ ನೀಡಿದೆ.

ನಿಮಗೆ ಬೇಕಾದ ಸಮಯದಲ್ಲಿ ವಿಮಾನದ ಸೌಲಭ್ಯವೂ ಸಿಗುವುದು ಕಷ್ಟವಾಗುವ ಸಾಧ್ಯತೆಗಳಿವೆ. ಅಲ್ಲದೆ ನಿರಂತರವಾಗಿ ಇಂಟರ್ನೆಟ್ ಸೌಲಭ್ಯವೂ ದೊರೆಯುತ್ತದೆ ಎಂಬ ನಿರೀಕ್ಷೆಯೂ ಬೇಡ, ಅಮೆರಿಕ ಸೇರಿಕೊಳ್ಳುವುದು ನಿಮ್ಮ ಹೊಣೆಗಾರಿಕೆ ಎಂದು ತಿಳಿಸಿದೆ. ಪ್ರಮುಖವಾಗಿ ಇರಾನಿನ ಪಾಸ್ಪೋರ್ಟ್ಗಳನ್ನು ಹೊಂದಿರುವ ಅಮೆರಿಕ-ಇರಾನ್ ಎರಡೂ ದೇಶಗಳು ಪ್ರಜೆಗಳು ಇರಾನ್ನಿಂದ ನಿರ್ಗಮಿಸುವಂತೆ ಅಮೆರಿಕ ಹೇಳಿದೆ. ಇರಾನ್ ಸರ್ಕಾರವು ದ್ವಿರಾಷ್ಟ್ರೀಯತೆಗೆ ಮಾನ್ಯತೆ ನೀಡುವುದಿಲ್ಲ. ಅಲ್ಲದೆ ಅಮೆರಿಕವು ಇರಾನಿನ ಹಾಗೂ ಅಮೆರಿಕ ಎರಡೂ ದೇಶಗಳ ಪ್ರಜೆಗಳನ್ನು ಇರಾನಿನ ಪ್ರಜೆಗಳೆಂದು ಮಾತ್ರ ಪರಿಗಣಿಸುತ್ತದೆ.


1979 ರ ಇಸ್ಲಾಮಿಕ್ ಕ್ರಾಂತಿ ಮತ್ತು ಇರಾನ್ ರಾಯಭಾರ ಕಚೇರಿಯ ನಡುವಿನ ಒತ್ತೆಯಾಳು ಬಿಕ್ಕಟ್ಟಿನ ನಂತರ ಅಮೆರಿಕ ಮತ್ತು ಅದರ ಬದ್ಧ ವೈರಿ ಇರಾನ್ ದೇಶಗಳ ನಡುವೆ ಪರಸ್ಪರ ಸಂಘರ್ಷ ನಡೆಯುತ್ತಲೇ ಇದೆ. ಆದರೆ ಕಳೆದ 2025 ರ ಡಿಸೆಂಬರ್ ಕೊನೆಯ ದಿನಗಳಲ್ಲಿ ಅಲ್ಲಿನ ಅಧ್ಯಕ್ಷ ಅಯತ್ತುಲ್ಲಾ ಖಮೇನಿ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು, ಖಮೇನಿಗೆ ವಿರೋಧವಾಗಿ ಪ್ರತಿಭಟನೆಗಳೂ ನಡೆದಿವೆ. ಈ ವೇಳೆ ಜೀವ ಹಾನಿಯ ಜೊತೆಗೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಅಪಾರ ಹಾನಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಾದ ಬಳಿಕ ಉಭಯ ದೇಶಗಳ ನಡುವೆ ನಿರಂತರವಾಗಿ ಸಂಘರ್ಷ ಮುಂದುವರೆದಿದೆ.





