ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ (Local body election) ಬ್ಯಾಲೆಟ್ ಪೇಪರ್ (Ballet paper) ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿ ಪ್ರಸಾದ್ (BK Hariprasad) ಪ್ರತಿಕ್ರಿಯಿಸಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ನಡಿಸೋ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ.ಸಂಪೂರ್ಣವಾಗಿ ರಾಜ್ಯ ಸರ್ಕಾರ ಈ ನಿರ್ಧಾರ ತಗೆದುಕೊಳಲಿ ಎಂದಿದ್ದಾರೆ.

ಕೆಳಮಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ, EVM ಎಷ್ಟು ಸರಿ ನಡೆಸೋಕೆ ಆಗುತ್ತೋ ಇಲ್ಲವೋ ಅದು ಬೇರೆ ಪ್ರಶ್ನೆನೇ..ಬ್ಯಾಲೆಟ್ ಪೇಪರ್ ನಿಂದ ನಿಷ್ಪಕ್ಷಪಾತವಾದ ಚುನಾವಣೆ ನಡಿಯತ್ತೆ ಅಂತ ಇಡೀ ರಾಷ್ಟ್ರಕ್ಕೆ ತೋರಿಸಿ ಕೊಡುತ್ತೇವೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಎಲ್ಲ ರಾಜ್ಯದಲ್ಲೂ ವೋಟ್ ಚೋರಿ ನಾವೂ ನೋಡಿದ್ದೇವೆ. ಬಿಹಾರ್ ನಲ್ಲಿ ಅಯ್ತು, ಹರಿಯಾಣದಲ್ಲೂ ಇದೆ. ಮೋದಿ ನಿಲ್ಲುವ ಬನಾರಸ್ ನಲ್ಲಿ ಕೂಡ ಮಾಡಿದ್ದಾರೆ, ನಮ್ಮ ಪ್ರದೇಶ ಕಮಿಟ್ಟಿ KPCC ಅಧ್ಯಕ್ಷರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆಬ್ಯಾಲೆಟ್ ಪೇಪರ್ ಬಂದಿರೋದು ಸ್ವಾಗತಕರ ಎಂದಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರದ ಈ ನಿರ್ಧಾರ ಬಿಜೆಪಿ ಅವರಿಗೆ ನಡುಕ ಹುಟ್ಟಿದೆ, ಏಕೆಂದರೆ ಇನ್ಮುಂದೆ ಅವರ ಆಪರೇಷನ್ ನಡಿಯಲ್ಲ ಅಂತ ಹರಿಪ್ರಸಾದ್ ಹೇಳಿದ್ದಾರೆ.