• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ:ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
January 5, 2025
in Top Story, ಇತರೆ / Others, ಕರ್ನಾಟಕ, ರಾಜಕೀಯ
0
ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ:ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಧಾರವಾಡ: ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸಲು ನಾವು ವಿಫಲರಾಗಿದ್ದೇವೆ. ಧಾರವಾಡದ ಅಂತಸತ್ವ ಆತ್ಮೀಯತೆ, ಪ್ರೀತಿ, ವಿಶ್ವಾಸ. ಅಂತಕರಣ ಎಲ್ಲವನ್ನೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ADVERTISEMENT

ಅವರು ಇಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಶ್ರೀ ಚನ್ನವೀರೌಡ ಅಣ್ಣಾ ಶಿದ್ರಾಮಗೌಡ ಪಾಟೀಲ್ ಸಂಸ್ಕರಣೆ ದತ್ತಿ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಿಕಾರ್ಜುನ ಪಾಟೀಲ್ ಬರೆದಿರುವ ಸೈದಾಪುರ ಸಿ.ಎಸ್.ಪಾಟೀಲ ಜೀವನ ಮತ್ತು ಸಾಧನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ನೂರಾರು ವರ್ಷಗಳಿಂದ ಜಗತ್ತಿಗೆ ಮಹಾಪುರುಷರನ್ನು ಕೊಟ್ಟ ಈ ಮಣ್ಣಿನ ಗುಣ, ಕೇವಲ ಧಾರವಾಡದಲ್ಲಿ ಹುಟ್ಟಿದವರಷ್ಟೇ ಅಲ್ಲ, ಮಹಾರಾಷ್ಟ್ರ, ಗೋವಾದಿಂದ ಬಂದು ಇಲ್ಲಿ ವಿದ್ಯಾರ್ಜನೆ ಪಡೆದು ಉನ್ನತ ಹುದ್ದೆ ಪಡೆದವರು ಅನೇಕರು ಇದ್ದಾರೆ. ನನಗೆ ಧಾರವಾಡದಲ್ಲಿ ಸ್ನೇಹಿತರು ಅತಿ ಹೆಚ್ಚಿದ್ದಾರೆ ಎಂದರು.

ನಮ್ಮೆಲ್ಲರ ಹಿರಿಯರು ಸಿ.ಎಸ್. ಪಾಟೀಲರು ಆ ಕಾಲದಲ್ಲಿ ಅದ್ಭುತ ಸಾಧನೆ ಮಾಡಿದರು. ನಾವೆಲ್ಲ 21 ನೇ ಶತಮಾನ ಜ್ಞಾನದ ಶತಮಾನ ಅಂತ ಹೇಳುತ್ತೇವೆ. ಆದರೆ. ಪಾಟೀಲರು 20 ನೇ ಶತಮಾನದಲ್ಲಿ ಶಿಕ್ಷಣದ ಮಹತ್ವ ತಿಳಿದು ವಿದ್ಯಾರ್ಜನೆ ಮಾಡುತ್ತೇನೆ ಎಂದು ಛಲದಿಂದ ಶಿಕ್ಷಣ ಪಡೆದಿದ್ದರು. ಅವತ್ತು ಇಂಜನೀಯರಿಂಗ್ ಮಾಡುತ್ತೇನೆ ಎಂದು ಮಾಡಿರುವುದು ಅವರ ದೂರದೃಷ್ಟಿಯ ಪ್ರತೀಕ, ಈ ದೇಶ ಈ ನಾಡು ಜಗತ್ತಿನಲ್ಲಿ ಅಮೂಲಾಗ್ರವಾಗಿರುವಂತಹ ಮೂಲಭೂತ ಬದಲಾವಣೆ ಮಾಡುವಂತಹದ್ದು ದೇಶ ಅಥವಾ ಸಂಸ್ಥೆಗಳಲ್ಲಾ, ವ್ಯಕ್ತಿಗಳು ಬದಲಾವಣೆ ಮಾಡಿದ್ದಾರೆ.

ಬುದ್ಧ, ಬಸವ, ಕ್ರಿಸ್ತ, ಪೈಗಂಬ‌ರ್ ಬದಲಾವಣೆ ತಂದವರು, ವ್ಯಕ್ತಿಯಲ್ಲಿ ಗುರಿ, ಗುರಿ ಮುಟ್ಟುವ ದಾರಿ ಸಾಧನೆಯ ಶಕ್ತಿ ಎಲ್ಲವೂ ಕೇಂದ್ರಿಕೃತವಾದ ಮನಸ್ಸಿನಿಂದ ಮಾಡಲು ಸಾಧ್ಯ. ಜಗತ್ತಿನಲ್ಲಿ ಮಹಾ ಕ್ರಾಂತಿಗಳಾಗಿವೆ. ಫ್ರೆಂಚ್ ಕಾಂತಿ, ರಷ್ಯನ ಕ್ರಾಂತಿ, ಚೀನಾ ಕಾಂತಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮಲ್ಲಿ ಏಕಾಗ್ರತೆ ಇತ್ತು. ಸ್ವಾತಂತ್ರ ಬಂದ ಮೇಲೆ ಏಕಾಗತೆ ಹೋಗಿ ಎರಡು ದೇಶವಾಗಿ ಒಡೆಯಿತು. ಬದಲಾವಣೆಯನ್ನು ಹೇಗೆ ನಿರ್ವಹಿಸಬೇಕು, ಬದಲಾವಣೆ ನಂತರ ಏನು ಎನ್ನುವ ಚಿಂತನೆ ಆಗಬೇಕು. ಬುದ್ಧ, ಬಸವ, ಕ್ರಿಸ್ತ, ತಮ್ಮ ಚಿಂತನೆಯನ್ನು ಎಂದೂ ಬದಲಾಯಿಸಲಿಲ್ಲ.

ನಾನು ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ. ನಾವು ದೂರದ ಬಗ್ಗೆ ಮಾತನಾಡುತ್ತೇವೆ. ಆದರೆ, ಈ ನೆಲದ ಮಣ್ಣಿನ ಮಕ್ಕಳ ಬಗ್ಗೆ ನಾವು ಮಾತನಾಡುವುದಿಲ್ಲ. ಪಕ್ಕದ ರಾಜ್ಯದ ಹೊರಾಟಗಳು ದೊಡ್ಡದಾಗಿ ಕಾಣಿಸುತ್ತವೆ. ಚನ್ನವೀರಗೌಡರು ಮಾಡಿರುವ ಸಾಧನೆ ಕರ್ನಾಟಕದ ಅಗ್ರಮಾನ್ಯ ಸಾಧನೆಯಾಗಿದೆ. ಎಂ. ವಿಶ್ವೇಶ್ವರಯ್ಯ ಅವರು ಸಾಧನೆ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಾಗಿದೆ. ಆದರೆ, ಚನ್ನವೀರಗೌಡರ ಸಾಧನೆ ಹೊರ ಬಂದಿಲ್ಲ ಎಂದು ಹೇಳಿದರು.

ವಿದ್ಯಾವರ್ಧಕ ಸಂಘ, ಕೇವಲ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸಂಘ ಅಲ್ಲ, ನಮ್ಮ ನಾಡು, ನುಡಿ ಜಲ ಹಾಗೂ ಬದುಕಿನ ಎಲ್ಲ ವಿಷಯಗಳಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿದೆ. ಕರ್ನಾಟಕ ಏಕೀಕರಣ ಪ್ರಾರಂಭವಾಗಿರುವುದು ಇಲ್ಲಿಯೇ ಅದರಗುಂಚಿಯ ಶಂಕರಗೌಡರು, ಉಪವಾಸ ಮಾಡಿ ಲಾಠಿ ಚಾರ್ಜ್ ಆಗದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ. ಯಶಸ್ಸಿಗೆ ಬಹಳ ಜನ ಅಪ್ಪಂದಿರು ಇರುತ್ತಾರೆ. ಅದ್ಭುತವಾದ ನಾಡು ನಮ್ಮದು, ವಿಜಯನಗರ ಸಾಮಾಜ್ಯ ಆಳಿದ ನಾಡಿದು, ಶ್ರೇಷ್ಠ ಆಡಳಿತಗಾರರು, ಸಾಹಿತಿಗಳು ಆಳಿದ ನಾಡಿದು, ಇಡೀ ಜಗತ್ತಿನಲ್ಲಿಯೇ ನಾವು ವಿಶಿಷ್ಟ ಸ್ಥಾನ ಪಡೆಯಬಹುದು. ಹನ್ನೊಂದನೆ ಶತಮಾನದ ಆರನೇ ವಿಕ್ರಮಾಧಿತ್ಯನ ಆಡಳಿತದ ಕುರಿತು ಒಬ್ಬರು ಬರೆದಿದ್ದಾರೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ ಎಂದು ಹೇಳುತ್ತಾರೆ. ಅಭಿವೃದ್ಧಿ ಇಲಾಖೆ ಕಂದಾಯ ಇಲಾಖೆ, ಮಿಲಿಟರಿಯಲ್ಲಿ ಕೆಲಸ ಮಾಡಿದರೆ ದಂಡನಾಯಕ ಆಗಬಹುದು ಎಂದು ಹೇಳಿದ್ದಾರೆ ಎಂದರು.

ಲಿಂಗಾಯತ ಸಂಸ್ಥೆಯನ್ನು ಕಟ್ಟಿದವರು ಎಲ್ಲರೂ ವಿದ್ಯಾವಂತರಾಗಿರಲಿಲ್ಲ. ಅವರ ಮಕ್ಕಳು ವಿದ್ಯಾವಂತರಾಗುತ್ತಾರೆ ಎಂಬ ಉದ್ದೇಶದಿಂದ ಕಟ್ಟಿದರು. ಲಿಂಗಾಯತ ಸಂಸ್ಥೆ, ಮುರುಗಾ ಮಠ ಈ ” ಭಾಗದಲ್ಲಿ ಇರದಿದ್ದರೆ ನಾವೆಲ್ಲ ವಿದ್ಯಾವಂತರಾಗಲು ಸಾಧ್ಯವಿರಲಿಲ್ಲ. ಚನ್ನವೀರಗೌಡರ ಬಗ್ಗೆ ಬಂದಿರುವ ಈ ಪುಸ್ತಕ ಸಮಯೋಚಿತವಾಗಿದೆ. ಸಿ.ಎಸ್. ಪಾಟೀಲ್ ಅವರು ಇಂದಿನ ವ್ಯವಸ್ಥೆಗೆ ಅಪವಾದ, ಅಂದರೆ ಅವರ ಘನತೆ ಕಡಿಮೆಯಾಗಲಿಲ್ಲ. ವ್ಯವಸ್ಥೆ ಅಷ್ಟು ಅಧೋಗತಿಗೆ ಹೋಗಿದೆ. ಅವರು ಅಷ್ಟೊಂದು ಪ್ರಾಮಾಣಿಕ, ವ್ಯಕ್ತಿ, ಅವರು ಪವರ್ ಪೊಲಿಟಿಕ್ಸ್ ಮಾಡಿದ್ದರೆ ಎಲ್ಲಿಯೋ ಹೋಗುತ್ತಿದ್ದರು. ಆದರೆ, ಅವರು ಸೈದಾಪುರ ಗೌಡರಾಗಿಯೇ ಉಳಿದಿದ್ದಾರೆ. ಅವರು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿ. ಅವರು ಹೋರಾಟವನ್ನು ಹುಡುಕಿಕೊಂಡು ಹೋಗುವವರು. ಬಹಳ ಸ್ನೇಹ ಜೀವಿ, ಜೀವಕ್ಕೆ ಜೀವ ಕೊಡುವವರು, ಹಗಲು ರಾತ್ರಿ ಎನ್ನದೇ ಎಲ್ಲರ ಜೊತೆಗೆ ನಿಲ್ಲುತ್ತಿದ್ದರು.

ಒಂದು ಶಿಸ್ತು, ಪರಂಪರೆಯಿಂದ, ಹಿರಿಯ ಸಾಧನೆಯ ಪ್ರೇರಣೆಯಿಂದ ಬಂದಿದ್ದರಿಂದ ಸೈದಾಪುರ ಗೌಡರು ಏನು ಗಳಿಸಿದ್ದರೊ, ಅವರ ಮರಿಮೊಮ್ಮಗ ಅದನ್ನು ಉಳಿಸಿಕೊಂಡು ಹೊರಟಿದ್ದಾರೆ. ವಿದ್ಯಾವರ್ಧಕ ಸಂಘ ಏನೇ ಹೋರಾಟ ರೂಪಿಸಿದರೂ, ನಾನು ನಿಮ್ಮ ಜೊತೆಗೆ ಇರುತ್ತೇನೆ. ಧಾರವಾಡದ ಅಂತಸತ್ವ ಆತ್ಮೀಯತೆ. ಪ್ರೀತಿ, ವಿಶ್ವಾಸ, ಅಂತಕರಣ ಎಲ್ಲವನ್ನೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಿದೆ. ಸಿ.ಎಸ್. ಪಾಟೀಲರು ಕೆಸರಿನಲ್ಲಿ ಅರಳಿದ ಕಮಲ ಇದ್ದ ಹಾಗೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿ.ಐ. ಪಾಟೀಲ್, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Tags: BJPCongress PartyDharwad is intimacyDharwad.Karnataka Vidyavardhak Sangh.MP Basavaraja BommaiProf. Shri Channaweerauda Anna Shidrama Gowda Patil in the Purushika Darthi program.Saidapur C.S. Patil.Vidyavardhak Sangh General Secretary Shankar Halagathi.We have failed to recognize our children
Previous Post

ಕೂದಲು ಕಪ್ಪಾಗಲು ಬಳಸುವ ಹೇರ್ ಡೈಯಿಂದ, ಈ ಸಮಸ್ಯೆ ಶುರುವಾಗುತ್ತದೆ.!

Next Post

C.T ರವಿಯ ಅಶ್ಲೀಲ ಮಾತಿಗೆ ರಿಲೀಫ್‌ ಕೊಟ್ರಾ ಹೊರಟ್ಟಿ..?

Related Posts

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
0

ಮೇಷ ರಾಶಿಯ ಈ ದಿನದ ಭವಿಷ್ಯ ಮೇಷ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಬಹು ದಿನಗಳಿಂದ ಕಾದಿದ್ದ ಬಡ್ತಿ ನಿಮ್ಮದಾಗುವ ಸಮಯ ಬಂದಿದೆ. ವ್ಯವಹಾರದಲ್ಲಿ ಉತ್ತಮ...

Read moreDetails
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

November 19, 2025

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

November 19, 2025
Next Post
C.T ರವಿಯ ಅಶ್ಲೀಲ ಮಾತಿಗೆ ರಿಲೀಫ್‌ ಕೊಟ್ರಾ ಹೊರಟ್ಟಿ..?

C.T ರವಿಯ ಅಶ್ಲೀಲ ಮಾತಿಗೆ ರಿಲೀಫ್‌ ಕೊಟ್ರಾ ಹೊರಟ್ಟಿ..?

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು
Top Story

ಮರೆವುದೆಂತು ಆ ಗಟ್ಟಿ ಜನಪರ ದನಿಯನು

by ನಾ ದಿವಾಕರ
November 20, 2025
Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada