• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

C.T ರವಿಯ ಅಶ್ಲೀಲ ಮಾತಿಗೆ ರಿಲೀಫ್‌ ಕೊಟ್ರಾ ಹೊರಟ್ಟಿ..?

ಕೃಷ್ಣ ಮಣಿ by ಕೃಷ್ಣ ಮಣಿ
January 5, 2025
in Top Story, ಕರ್ನಾಟಕ, ರಾಜಕೀಯ
0
C.T ರವಿಯ ಅಶ್ಲೀಲ ಮಾತಿಗೆ ರಿಲೀಫ್‌ ಕೊಟ್ರಾ ಹೊರಟ್ಟಿ..?
Share on WhatsAppShare on FacebookShare on Telegram

ADVERTISEMENT

ಸಿ.ಟಿ ರವಿ ಸದನದಲ್ಲಿ ಆಶ್ಲೀಲ ಮಾತಿನ ವಿರುದ್ಧ ಸಭಾಪತಿಗೆ ದೂರು ಕೊಟ್ಟಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಶನಿವಾರ ಬೆಳಗಾವಿಯಲ್ಲಿ ನೀಡಲಾಗಿದೆ. ಆ ಬಳಿಕ ಪ್ರತಿಕ್ರಿಯೆ ನೀಡಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್‌‌ನಲ್ಲಿ ಸಿಐಡಿ ತನಿಖೆಗೆ ಸ್ಥಳ ಮಹಜರಿಗೆ ಅನುಮತಿ ಕೊಡ್ತೀರಾ ಎಂಬ ಪ್ರಶ್ನೆಗೆ ಸಿಐಡಿಯವರು ಯಾವ ರೀತಿ ಸ್ಥಳ ಮಹಜರು ಮಾಡ್ತಾರೆ ಎಂದು ಹೇಳಬೇಕಾಗುತ್ತದೆ. ಅಲ್ಲೇನು ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡ್ತಾರೋ..? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಹಜರು ಮಾಡ್ತಾರೋ ಅನ್ನೋದನ್ನ ಹೇಳಬೇಕು. ಯಾವ ರೀತಿ ಪಂಚನಾಮೆ ಮಾಡ್ತಾರೆ ಅನೋದನ್ನ ಮೊದಲು ಸಿಐಡಿ ಹೇಳಲಿ ಎಂದಿದ್ದರು.

ಸಿ.ಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಸಂಧಾನ ಮಾಡ್ತೇನೆ ಎಂದಿರುವ ಸಭಾಪತಿ, ಇವತ್ತು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಈಗ ಇಬ್ಬರನ್ನ ನೋಡಿದ್ರೆ ಸಂಧಾನ ಆಗೋ ರೀತಿ ಕಾಣ್ತಿಲ್ಲ. ಯಾಕೆಂದರೆ ಈಗ ಪ್ರಕರಣ ಪೊಲಿಟಿಕಲ್ ತಿರುವು ಪಡೆದುಕೊಂಡಿದೆ. ಆದರೂ ಇಬ್ಬರಿಗೂ ಪೋನ್ ಮಾಡಿ ಸಂಧಾನ ಮಾಡಲು ಪ್ರಯತ್ನಿಸುತ್ತೇನೆ. ಆದರೆ ಶೇಕಡ 99 ರಷ್ಟು ಸಂಧಾನ ಆಗಲ್ಲ ಎಂದಿದ್ದಾರೆ ಸಭಾಪತಿ. ಸದನ ಮುಂದೂಡಿಕೆ ಆದ ಬಳಿಕ ನಮ್ಮ ಕ್ಯಾಮೆರಾ, ಆಡಿಯೋ, ವಿಡಿಯೋ ಆಟೋಮ್ಯಾಟಿಕ್ ಆಗಿ ಬಂದ್ ಆಗುತ್ತವೆ. ಸದನ ಮುಂದೂಡಲಾಗಿದೆ ಎಂದು ಹೇಳಿ ನಾನು ಒಂದು‌ ಹೆಜ್ಜೆ ಮುಂದಿಟ್ರು ವಿಡಿಯೋ ಆಡಿಯೋ ಬಂದ್ ಆಗುತ್ತದೆ. ಹಾಗಾಗಿ ನಮಗೆ ಆ ವಿಡಿಯೋ ಆಡಿಯೋ ಸಿಕ್ಕಿಲ್ಲ ಎಂದಿದ್ದಾರೆ.

RSS-ಬಿಜೆಪಿಗೆ ಅಂಬೇಡ್ಕರ್ ಎಂದರೇಕೆ ದ್ವೇಷ? #pratidhvani#pratidhvani

ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲನೆ ಮಾಡುತ್ತೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ ಆಡಿಯೋ ನೋಡುತ್ತೇವೆ. FSLಗೆ ಕಳುಹಿಸುವ ಹಾಗೆ ಇದ್ರೆ ಕಳುಹಿಸುತ್ತೆವೆ. ವರದಿ ಬಂದ ನಂತರ ತೀರ್ಮಾನ ಮಾಡ್ತೇನೆ ಎಂದಿದ್ದಾರೆ. ಸಂಧಾನದ ಬಗ್ಗೆ ನಾನು ರವಿನ ಕೇಳಿದ್ರೆ ನಮ್ಮ ಅಧ್ಯಕ್ಷರನ್ನ ಕೇಳಿ ಅಂತಾನೆ. ಲಕ್ಷ್ಮೀ ಹೆಬ್ಬಾಳ್ಕರ್ ಕೇಳಿದ್ರೆ ಸಿಎಂ‌ ಕೇಳು ಅಂತಾರೆ. ಹೆಬ್ಬಾಳ್ಕರ್ ಒಬ್ರು ರಾಜಕಾರಣಿ, ಅವರನ್ನು ನಾನು ಶಾಸಕಿ, ಮಂತ್ರಿ ಅಂತಾ ಕನ್ಸಿಡರ್ ಮಾಡಿಲ್ಲ. ನಮ್ಮ ಮನೆಯಲ್ಲೂ ಹೆಣ್ಣುಮಗಳು ಇದ್ದಾರೆ. ಮರ್ಯಾದೆಯಿಂದ ಬಂದರೆ ನಾನು ಜವಾಬ್ದಾರಿ ಆಗುತ್ತೇನೆ, ಕಾಳಜಿ ವಹಿಸುತ್ತೇನೆ. ಇತಿಹಾಸದಲ್ಲಿ ಇದೊಂದು ದಾಖಲೆ ಆಗುತ್ತದೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿರುವ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್‌ನಲ್ಲಿ ಸಿಐಡಿ ಸ್ಥಳ ಮಹಜರಿಗೆ ಅವಕಾಶ ನೀಡಲ್ಲ ಎಂದಿದ್ದಾರೆ. ಸದ್ಯಕ್ಕೆ ಸದನದಲ್ಲಿ ಸಿಐಡಿಗೆ ಸ್ಥಳ ಮಹಜರಗೆ ಅನುಮತಿ ನೀಡುವುದಿಲ್ಲ. ಸ್ಥಳ ಮಹಜರ್ ಹೇಗೆ ಮಾಡುತ್ತಾರೆ..? ಕುರ್ಚಿ, ಟೇಬಲ್ ಪಂಚನಾಮೆ ಮಾಡುತ್ತಾರೆಯೇ…? ಪಂಚನಾಮೆಗೆ ನಮ್ಮಲ್ಲಿ ವಿಡಿಯೋ ಇದ್ದರೆ ಮಾಡಬಹುದು. ವಿಡಿಯೋ ಕೊಟ್ಟಿದ್ದಾರೆ ಚೆಕ್ ಮಾಡುತ್ತಿದ್ದೇನೆ. ಅದರಲ್ಲಿ ಯಾವುದು ಕ್ಲಿಯರ್ ಇಲ್ಲ. ಯಾವ ತರಹ ಪಂಚನಾಮೆ ಮಾಡುತ್ತಾರೆ ಅಂತಾ ತಿಳಿಸಲಿ. ಸಿಟಿ ರವಿ ಬಂಧನ ಸುವರ್ಣಸೌಧದ ಕಾಂಪೌಂಡ್‌ನಲ್ಲಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಬಂಧನ ಮಾಡಿಲ್ಲ ಎನ್ನುವುದು ಅವರ ವಾದ. ಸಿಐಡಿ ಅವರಿಗೆ ಸ್ಥಳ ಮಹಜರ್‌ಗೆ ಅನುಮತಿ ಕೇಳಿದ್ದರು. ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದೇನೆ. ವಿಧಾನಸೌಧದಲ್ಲಿ ಯಾರಿಗೂ ಬರಲು ಅಧಿಕಾರವಿಲ್ಲ. ನಾವು FSL ಗೆ ವಿಡಿಯೋ ಕೊಡುತ್ತಿದ್ದೇವೆ. ಆ ವರದಿ ಬಂದ ನಂತರ ಮುಂದೆ ವಿಚಾರ ಮಾಡುತ್ತೇವೆ ಎಂದಿದ್ದಾರೆ.

Tags: attempt to attack ct ravi in suvarna soudhaCT Ravict ravi arrestct ravi arrest updatesct ravi arrestedct ravi case updatesct ravi derogatory remarks against lakshmi hebbalkarct ravi injuredct ravi latest newsct ravi newsct ravi offensive wordsct ravi produced before people's representatives' courtct ravi today newsct ravi vs lakshmi hebbalkarct ravi vs laxmi hebbalkarfir against ct ravilakshmi hebbalkar allegation on ct ravi
Previous Post

ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ:ಬಸವರಾಜ ಬೊಮ್ಮಾಯಿ

Next Post

ಜಾತಿ ರಾಜಕಾರಣಕ್ಕೆ ಚಾಟಿ.. ಯುವಕರಿಗೆ ಸಿಎಂ ಜಾತ್ಯತೀತ ಪಾಠ..!

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಜಾತಿ ರಾಜಕಾರಣಕ್ಕೆ ಚಾಟಿ.. ಯುವಕರಿಗೆ ಸಿಎಂ ಜಾತ್ಯತೀತ ಪಾಠ..!

ಜಾತಿ ರಾಜಕಾರಣಕ್ಕೆ ಚಾಟಿ.. ಯುವಕರಿಗೆ ಸಿಎಂ ಜಾತ್ಯತೀತ ಪಾಠ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada