ಸಿಲಿಕಾನ್ ಸಿಟಿಯಲ್ಲಿ ಸ್ವಲ್ಪ ಗಾಳಿ – ಮಳೆ ಬಂದರೆ ಸಾಕು ಮರಗಳು ಬುಡಮೇಲಾಗಿ ಬಿಡುತ್ತವೆ. ಇದರಿಂದ ಅನೇಕ ಮಂದಿ ಪ್ರಾಣ ಕಳೆದಕೊಂಡಾಗ ಬಿಬಿಎಂಪಿ ನಿರ್ಲಕ್ಷ್ಯ ಎದ್ದು ಕಾಣುತ್ತೆ. ಸದ್ಯ ಮರಗಳ ವಿಚಾರದಲ್ಲಿ ಪಾಲಿಕೆ ಮತ್ತದೇ ಯಡವಟ್ಟು ಮಾಡಿ ಜನರ ಜೀವಕ್ಕೆ ಸಂಚಕಾರ ತರುತ್ತಿದೆ.
ಸಿಟಿಯಲ್ಲಿ ಗಾಳಿ ಸಹಿತ ಸ್ವಲ್ಪ ಮಳೆಯಾದರೆ ಜನ ಜೀವವನ್ನೇ ಕೈಯಲ್ಲಿ ಹಿಡಿದು ಓಡಾಡುತ್ತಾರೆ. ಅದರಲ್ಲೂ ವಿದ್ಯುತ್ ತಂತಿ ಮತ್ತು ಟೊಳ್ಳು ಮರಗಳು ಮೂಡಿಸುವ ಭಯ ಅಷ್ಟಿಷ್ಟಲ್ಲ. ಮಳೆಗೆ ಹೆದರುವ ಜನ ಆಸರೆಗಾಗಿ ಮರಗಳ ಕೆಳಗೆ ನಿಂತರೆ ಅದೇ ಮರಗಳು ಯಮ ಸ್ವರೂಪಿಯಾಗಿ ಬಿಡುತ್ತಿದೆ. ಕಳೆದ ಒಂದು ವಾರದಿಂದ ಸಿಟಿಯಲ್ಲಿ ಮಳೆ ಧೋ ಎಂದು ಸುರಿಯುತ್ತಿದೆ. ಇದರಿಂದ ಅವಾಂತರವೂ ಸಾಲು ಸಾಲು. BBMP ಮರಗಳ ಲೆಕ್ಕಚಾರ ಗಣತಿ ಮುಕಾಂತರ ಆರಂಭಿಸಿ 2 ವರ್ಷಗಳು ಭರ್ತಿ ಆದರೂಬಇನ್ನು ಯಾವ ವಾರ್ಡ್ ನಲ್ಲಿ ಎಷ್ಟೆಷ್ಟು ಮರಗಳಿವೆ ಅನ್ನೋ ಲೆಕ್ಕ ಪಾಲಿಕೆಗೆ ಸಿಕ್ಕಿಲ್ಲಮ ಇದುವರೆಗೂ ಎಂಟು ವಲಯ ಸೇರಿ ಒಟ್ಟು 18,815 ಮರಗಳು ಮಾತ್ರ ಇವೇ ಅಂತ ಬಿಬಿಎಂಪಿ ಲೆಕ್ಕ ನೀಡಿದೆ.
ಹಾಗಾದ್ರೆ ಬಿಬಿಎಂ ಕಳೆದ ವರ್ಷ ನೀಡಿದ ಒಟ್ಟು ಮರಗಳ ಸಂಖ್ಯೆ ಎಷ್ಟು.!?
ಪೂರ್ವ ವಲಯದಲ್ಲಿ – 590, ಯಲಹಂಕ ವಲಯದಲ್ಲಿ – 500, ದಾಸರಹಳ್ಳಿ ವಲಯದಲ್ಲಿ – 500, ಮಹದೇವಪುರ ವಲಯದಲ್ಲಿ – 400, ಪಶ್ಚಿಮ ವಲಯದಲ್ಲಿ – 300, ದಕ್ಷಿಣ ವಲಯದಲ್ಲಿ – 1000, RR ನಗರ ವಲಯದಲ್ಲಿ – 400, ಬೊಮ್ಮನಹಳ್ಳಿ ಕಡೆ – 700 ಮರಗಳು ಸೇರಿದಂತೆ ಒಟ್ಟು 4390 ಮರಗಳ ಲೆಕ್ಕ ಮಾತ್ರ ಕೊಟ್ಟಿದೆ.
BMTC ಬಸ್ ಮೇಲೆ ಬಿದ್ದ ಬೃಹತ್ ಮರ !
ಇದಕ್ಕೆ ಉದಾಹಣೆ ಎಂಬಂತೆ ನಗರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಇಂದು ಬೆಳಗ್ಗೆ ಗೋರಗುಂಟೆಪಾಳ್ಯದಿಂದ ರಾಜ್ ಕುಮಾರ್ ಸಮಾಧಿ ಕಡೆ ಚಲಿಸುತ್ತಿದ್ದ BMTC ಬಸ್ ನ ಮೇಲೆ ಟೊಳ್ಳು ಮರ ಬಿದ್ದಿದೆ. ಬಸ್ ನಲ್ಲಿ 70 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಮರ ಬಾಗಿತ್ತು. ಮಳೆಗಾಲದಲ್ಲಿ ವಯಸ್ಸಾದ ಮಗಳಿಂದ ಅನಾಹುತ ಸಂಭವಿಸುತ್ತೆ. ಮರಗಣತಿಯಿಂದ ಮರಗಳ ಆರೋಗ್ಯ ಮತ್ತು ಮಳೆಗಾಲದಲ್ಲಿ ಹಾನಿಯಾಗುವ ಮರಗಳ ಬಗ್ಗೆ ತಿಳಿಯುತ್ತೆ. BBMP ಆದಷ್ಟು ಬೇಗ ಸರ್ವೇ ಮಾಡಲಿ ಎಂದ ಪರಿಸರ ತಜ್ಞ ವಿಜಯ್ ನಿಶಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಟಿಯಲ್ಲಿ ಹೀಗೆ ಅನೇಕ ಟೊಳ್ಳು ಮರಗಳಿವೆ. ಟೊಳ್ಳು ಮರಗಳಿಂದ ಮಳೆಗಾಲದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ. ಟೊಳ್ಳು ಮರ ಪತ್ತೆ ಹಚ್ಚಿ ತೆರವುಗೋಳಿಸಬೇಕಾದ ಜವಾಬ್ದಾರಿ ಪಾಲಿಕೆಯದ್ದು. BBMP 18 ತಂಡಗಳನ್ನು ನಿಯೋಜನೆ ಮಾಡಿ ಟೊಳ್ಳು ಮರಗಳ ಸೆನ್ಸಸ್ ಮಾಡುತ್ತಿದೆ. ಆದರೆ ವರ್ಷ ಕೆಲವಾದರೂ ಸೆನಸ್ಸ್ ಮಾತ್ರ ಇನ್ನೂ ಮುಗಿದಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರನ್ನು ಕೇಳಿದರೆ ಮರಗಳ ಗಣತಿಗಾಗಿ ತಂಡ ರಚಿಸಿದ್ದೇವೆ, ಕಾರ್ಯ ಪ್ರಗತಿಯಲ್ಲಿದೆ ಎನ್ನುತ್ತಾರೆ. ಒಟ್ಟಾರೆ ಅಪಾಯಕ್ಕೆ ಆಮಂತ್ರಣ ನೀಡುವಂತಿರುವ ಟೊಳ್ಳು ಮರಗಳನ್ನು BBMP ಆದಷ್ಟು ಬೇಗ ತೆರವು ಗೊಳಿಸಬೇಕಿದೆ. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಪಾಲಿಕೆಯ ಅಧಿಕಾರಿಗಳೆ ಹೊಣೆಯಾಗಬೇಕಾಗುತ್ತೆ.