NDA ಅಭ್ಯರ್ಥಿ ಜಗದೀಪ್ ಧಂಕರ್, ಪ್ರತಿಪಕ್ಷದ ಮಾರ್ಗರೆಟ್ ಆಳ್ವಾ ವಿರುದ್ಧ ಸ್ಪರ್ಧಿಸುತ್ತಿರುವ ಉಪರಾಷ್ಟ್ರಪತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಉವಾಗಿದೆ. ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಉಭಯ ಸದನಗಳ ಸಂಸದರು ಮತ ಚಲಾಯಿಸುತ್ತಿದ್ದಾರೆ.
ಹೌದು, ಉಪ ರಾಷ್ಟ್ರಪತಿ ಚುನಾವಣೆಯ ಮತದಾನ ಇದೀಗ ಮುಕ್ತಾಯಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮತಏಣಿಕೆ ನಡೆದು, ಫಲಿತಾಂಶ ಘೋಷಣೆಯಾಗಲಿದೆ. ಸಂಜೆ 6 ಗಂಟೆಯಿಂದ ಮತಏಣಿಕೆ ಕಾರ್ಯ ನಡೆಯಲಿದೆ.
80 ವರ್ಷದ ಮಾರ್ಗರೆಟ್ ಆಳ್ವಾ ಅವರು ಕಾಂಗ್ರೆಸ್ ನ ಅನುಭವಿಯಾಗಿದ್ದು, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರೆ, 71 ವರ್ಷದ ಜಗದೀಪ್ ಧಂಕರ್ ಅವರು ಸಮಾಜವಾದಿ ಹಿನ್ನೆಲೆಯುಳ್ಳ ರಾಜಸ್ಥಾನದ ಜಾಟ್ ನಾಯಕರಾಗಿದ್ದಾರೆ.