ವಿಟಮಿನ್ ಇ ಕ್ಯಾಪ್ಸುಲ್ ಇಂದ ಚರ್ಮ ಹಾಗೂ ಕೂದಲಿನ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಮುಖ್ಯವಾಗಿ ಈ ಕ್ಯಾಪ್ಸುಲನ್ನು ಬಳಸಿದ ಕೆಲವೇ ದಿನಗಳಲ್ಲಿ ನಿಮಗೆ ರಿಸಲ್ಟ್ ಕೂಡ ದೊರಕುತ್ತದೆ. ಸಾಕಷ್ಟು ಸೆಲೆಬ್ರಿಟಿಗಳು ಕೂಡ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ತ್ವಚೆಗೆ ಬಾಲಸಿ ಹೊಳಪನ್ನು ಹೆಚ್ಚಿಸಿಕೊಳ್ತಾರೆ. ಹಾಗಾದ್ರೆ ಈ ಮಾತ್ರೆಗಳನ್ನು ಹೇಗೆ ಬಳಸಬೇಕು ಯಾವ ರೀತಿಯ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಏಜಿಂಗ್ ಸಮಸ್ಯೆ ನಿವಾರಣೆ
ವಯಸ್ಸು ಚಿಕ್ಕದಿದ್ದರೂ ಕೂಡ ಮುಖದಲ್ಲಿ ಸುಖಗಟ್ಟುವುದು ಅಥವಾ ವೃಂಕಲ್ಸ್ ಹೆಚ್ಚಾಗಿರುತ್ತದೆ. ಇವರು ರಾತ್ರಿ ಮಲಗುವುದಕ್ಕಿಂತ ಮುಂಚೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಅನ್ನ ಮುಖಕ್ಕೆ ಹಚ್ಚಿ ಬೆಳಗ್ಗೆ ಎದ್ದು ಅದನ್ನ ಬೆಚ್ಚುಗಿನ ನೀರಿನಿಂದ ವಾಶ್ ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ವಿಟಮಿನ್ ಇ ಕ್ಯಾಪ್ಸುಲ್ನಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ತುಂಬಾನೇ ಒಳ್ಳೆಯದು.
ಕೂದಲ ಬೆಳವಣಿಗೆಗೆ ಉತ್ತಮ
ನೀವು ತಲೆಗೆ ಹಚ್ಚುವ ಎಣ್ಣೆಯೊಂದಿಗೆ ವಿಟಮಿನ್ ಇ ಕ್ಯಾಪ್ಸುಲನ್ನ ಬೆರೆಸಿ,ಆ ಮಿಶ್ರಣವನ್ನು ಒಂದೆರಡು ಗಂಟೆಗಳ ಕಾಲ ಹಾಕಿ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ ಹಾಗೂ ಉದುರುವ ಸಮಸ್ಯೆ ಇದ್ದರೂ ಕೂಡ ನಿಲ್ಲುತ್ತದೆ.

ಕಂಡಿಷನರ್
ಸ್ನಾನದ ಬಳಿಕ ಕೂದಲಿಗೆ ಕಂಡಿಷನರ್ ಬಳಸುತ್ತಾರೆ. ಕಂಡಿಷನರ್ ಜೊತೆಗೆ ವಿಟಮಿನ್ ಇ ಕ್ಯಾಪ್ಸುಲನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಬೇಗನೆ ರಿಸಲ್ಟ್ ದೊರೆಯುತ್ತದೆ.
ಡಾರ್ಕ್ ಸರ್ಕಲ್ ನಿವಾರಣೆ
ಕಣ್ಣಿನ ಕೆಳಗೆ ಕಪ್ಪು ಕಲೆಗಳಿದ್ದರೆ ಅವುಗಳನ್ನ ನಿವಾರಣೆ ಮಾಡುವುದು ಸ್ವಲ್ಪ ಕಷ್ಟ.ಕೆಲವು ಬಾರಿ ಎಷ್ಟೇ ಪ್ರಯತ್ನ ಮಾಡಿದ್ರು ಕೂಡ ಅವು ಹಾಗೆ ಇರುತ್ತದೆ. ಹಾಗೂ ಮುಖ್ಯವಾಗಿ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಪ್ರತಿದಿನ ನೀವು ರಾತ್ರಿ ಮಲಗುವುದಕ್ಕಿಂತ ಮುನ್ನ ವಿಟಮಿನ್ ಇ ಕ್ಯಾಪ್ಸುಲ್ ಎಣ್ಣೆಯೊಂದಿಗೆ ಸ್ವಲ್ಪ ರೋಜ್ ವಾಟರ್ ನ ಬೆರೆಸಿ ಪ್ರತಿದಿನ ಹಚ್ಚುವುದರಿಂದ ತಕ್ಷಣಕ್ಕೆ ನಿಮಗೆ ರಿಸಲ್ಟ್ ದೊರೆಯುತ್ತದೆ.
