ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಬ್ಯಾಟ್ಸ್ಮ್ಯಾನ್ ವಿರಾಟ್ ಕೊಹ್ಲಿ ಅಸ್ಥಿರ ನಿರ್ವಹಣೆ ತೋರುತ್ತಿದ್ದು ಟೂರ್ನಿಯಲ್ಲಿ ಮೂರು ಶೂನ್ಯ ಸುತ್ತಿದ್ದಾರೆ.
ಡ್ಯಾನಿಶ್ ಸೇಠ್ ನಡೆಸಿದ ಕಾರ್ಯಕ್ರಮದಲ್ಲಿ ಈ ವಿಚಾರವಾಗಿ ಮೌನ ಮುರಿದಿರುವ ವಿರಾಟ್ ಕೊಹ್ಲಿ, ʻನನ್ನ ಜೀವನದಲ್ಲಿ ಈ ರೀತಿ ಹಿಂದೆಂದೂ ಆಗಿರಲಿಲ್ಲ. ಈ ಆಟದಲ್ಲಿ ಎಲ್ಲವನ್ನು ನಾನು ಅನುಭವಿಸುತ್ತಿದ್ದೇನೆ ಹಾಗಾಗಿ ನಾನು ಮುಗುಳ್ನಕ್ಕು ಸುಮ್ಮನಾದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಒಟ್ಟು ಆರು ಭಾರೀ ಶೂನ್ಯ ಸುತ್ತಿದ್ದಾರೆ. ಈ ಪೈಕಿ 2022ರಲ್ಲಿ ಅತಿ ಹೆಚ್ಚು ಭಾರೀ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಫಾರ್ಮ್ ಕುರಿತು ಕಳವಳ ವ್ಯಕ್ತಪಡಿಸಿರುವ ಮಾಜಿ ಆಟಗಾರರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ ಅಂತಹ ಅಭಿಪ್ರಾಯಗಳಿಗೆ ಕಿವಿಗೊಡುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಭಾವನೆಯನ್ನು ಗ್ರಹಿಸಲು ಅವರುಗಳಿಂದ ಸಾಧ್ಯವಿಲ್ಲ ನಾನು ಒಂದು ಟಿವಿ ಮ್ಯೂಟ್ ಮಾಡುತ್ತೇನೆ ಅಥವಾ ಅಂತಹ ಮಾತುಗಳಿಗೆ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.






