Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹುಲಿ ಹೆಜ್ಜೆ

ಹರಿ ಪರಾಕ್‌

ಹರಿ ಪರಾಕ್‌

January 19, 2022
Share on FacebookShare on Twitter

ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಚಿತ್ರರಂಗದಲ್ಲಿ ಫ್ರಂಟ್ ಲೈನ್ ಸ್ಟಾರ್ ಅಲ್ಲದಿದ್ದರೂ ತಕ್ಕ ಮಟ್ಟಿಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರ ಚಿತ್ರಗಳಿಗೆ ಇತರ ಭಾಷೆಗಳಲ್ಲೂ ಬೇಡಿಕೆ ಇದೆ. ಅವರ ಚಿತ್ರಗಳಿಗೆ ಟಿವಿ ರೈಟ್ಸ್ ಮತ್ತು ಇತರ ಭಾಷೆಗಳ ಡಬ್ಬಿಂಗ್ ರೈಟ್ಸ್ ಬಹಳ ಸುಲಭವಾಗಿ ಸಿಗುತ್ತದೆ. ಇದೇ ಕಾರಣಕ್ಕೂ ಏನೋ ವಿನೋದ್ ಈಗ ಸ್ವತಃ ತಾವೇ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮ್ಮ ಹೋಮ್ ಬ್ಯಾನರ್ ಗೆ ಹೆಸರಿಡುವ ವಿಷಯ ಬಂದಾಗ ಅವರು ತಮ್ಮ ತಂದೆಯ ಇಮೇಜ್ ನ ಮೊರೆ ಹೋಗಿದ್ದಾರೆ. ಪ್ರಭಾಕರ್ ಅವರಿಗಿದ್ದ ಟೈಗರ್ ಎಂಬ ಬಿರುದನ್ನೇ ತಮ್ಮ ಹೋಮ್ ಬ್ಯಾನರ್ ಗೆ ಇಟ್ಟು ಟೈಗರ್ ಟಾಕೀಸ್ ಶುರು ಮಾಡಿದ್ದಾರೆ ವಿನೋದ್. ಈ ಮೂಲಕ ತಮ್ಮ ಪತ್ನಿ ನಿಶಾ ಅವರನ್ನು ನಿರ್ಮಾಪಕಿಯಾಗಿಸಿದ್ದಾರೆ ಕೂಡಾ. ಹೌದು, ವಿನೋದ್ ಪ್ರಭಾಕರ್ ನಾಯಕತ್ವದಲ್ಲಿ ಟೈಗರ್ ಟಾಕೀಸ್ ನ ಮೊದಲ ಕಾಣಿಕೆಯಾಗಿ ‘ಲಂಕಾಸುರ’ ಚಿತ್ರ ನಿರ್ಮಾಣವಾಗುತ್ತಿದೆ. ಈ ಮೂಲಕ ಖಳನಾಯಕರಾಗಿ ಹೆಸರು ಮಾಡಿದ್ದ ಪ್ರಭಾಕರ್ ಅವರ ಪುತ್ರ, ತಮ್ಮ ನಿರ್ಮಾಣದ ಮೊದಲ ಚಿತ್ರಕ್ಕೂ ‘ಲಂಕಾಸುರ’ ಎಂಬ ಖಳನಾಯಕನ ಹೆಸರನ್ನೇ ಇಟ್ಟಿದ್ದಾರೆ ಎನ್ನಬಹುದು.

ಹೆಚ್ಚು ಓದಿದ ಸ್ಟೋರಿಗಳು

ಫ್ಯಾಟ್ ಸರ್ಜರಿ ಅಡ್ಡಪರಿಣಾಮದಿಂದ ಬಲಿಯಾದ ಸಿನಿತಾರೆಯರು

9 ವರ್ಷ ನಂತರ ಗೋಲ್ಡನ್ ಡಕ್ ಗೆ ಔಟಾದ ವಾರ್ನರ್!

ಕಮಲ್‌ ಪಂತ್‌ ದಿಢೀರ್‌ ವರ್ಗ: ಪ್ರತಾಪ್‌ ರೆಡ್ಡಿ ಬೆಂಗಳೂರು ಪೊಲೀಸ್‌ ನೂತನ ಆಯುಕ್ತ!

ಕಳೆದವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅವರ ಹೊಸಲುಕ್ ಗೆ ಅಭಿಮಾನಿಗಳು ಫಿದಾ‌ ಆಗಿದ್ದರು. ಅದರ ಹೊರತಾಗಿಯೂ ತಮ್ಮದೇ ನಾಯಕತ್ವದ ಹಲವು ಚಿತ್ರಗಳಿಂದ ತಮ್ಮ ನಟನೆಯ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ‌ “ಲಂಕಾಸುರ” ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌

“ಟೈಗರ್ ಟಾಕೀಸ್” ಎಂಬ ಹೆಸರಿಟ್ಟರುವ ವಿನೋದ್ ಪ್ರಭಾಕರ್ ರವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರನ್ನು ‌ಸ್ಮರಿಸಿಕೊಂಡು ಚಿತ್ರರಂಗದಲ್ಲಿ ಹೊಸ ಹುಲಿ ಹೆಜ್ಜೆ ಇಟ್ಟಿದ್ದಾರೆ. ವಿನೋದ್ ‌ಪ್ರಭಾಕರ್ ಲಂಕಾಸುರ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕೂಡ ಅಭಿನಯಿಸುತ್ತಿದ್ದಾರೆ. ಇದು ಇವರಿಬ್ಬರು ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ. ದೇವರಾಜ್, ರವಿಶಂಕರ್ ಮುಂತಾದವರ ತಾರಾಬಳಗ ಸಹ ಈ ಚಿತ್ರದಲ್ಲಿದೆ.

ಆಕ್ಷನ್ ಕಥಾಹಂದರದ ಈ ಚಿತ್ರವನ್ನು ಪ್ರಮೋದ್ ಕುಮಾರ್ ಡಿ ಎಸ್ ನಿರ್ದೇಶಿಸುತ್ತಿದ್ದಾರೆ. ಸಿದ್ಲಿಂಗು, ಜಯಮ್ಮನ ಮಗ ಹಾಗೂ ಐ ಲವ್ ಯು ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್(ಜ್ಞಾನ ಮೂರ್ತಿ) ಈ ಚಿತ್ರಕ್ಕೆ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಿದೆ.

RS 500
RS 1500

SCAN HERE

don't miss it !

ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?
ಇದೀಗ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್

by ಪ್ರತಿಧ್ವನಿ
May 18, 2022
ರಾಷ್ಟ್ರಗೀತೆ ಹಾಡೋದನ್ನ ಪ್ರಮೋದ್ ಮುತಾಲಿಕ್ ನಿಂದ ಕಲಿಬೇಕಿಲ್ಲ – ಶಾಸಕ ಜಮೀರ್ ಅಹ್ಮದ್ ಖಾನ್
ಕರ್ನಾಟಕ

ರಾಷ್ಟ್ರಗೀತೆ ಹಾಡೋದನ್ನ ಪ್ರಮೋದ್ ಮುತಾಲಿಕ್ ನಿಂದ ಕಲಿಬೇಕಿಲ್ಲ – ಶಾಸಕ ಜಮೀರ್ ಅಹ್ಮದ್ ಖಾನ್

by ಪ್ರತಿಧ್ವನಿ
May 16, 2022
ವಿಡಿಯೋ

ಶಾಪಿಂಗ್ ಕಾಂಪ್ಲೆಕ್ಸ್ ಗೆ ನುಗ್ಗಿದ ಮಳೆನೀರು BANGALORE | PRATIDHVANI

by ಪ್ರತಿಧ್ವನಿ
May 18, 2022
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಆಸಾ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ
ಕರ್ನಾಟಕ

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಆಸಾ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

by ಪ್ರತಿಧ್ವನಿ
May 17, 2022
ಬಿಎಸ್‌ ವೈ ಪುತ್ರ ವಿಜಯೇಂದ್ರ ವಿಧಾನಪರಿಷತ್‌ ಗೆ?
ಇದೀಗ

ಬಿಎಸ್‌ ವೈ ಪುತ್ರ ವಿಜಯೇಂದ್ರ ವಿಧಾನಪರಿಷತ್‌ ಗೆ?

by ಪ್ರತಿಧ್ವನಿ
May 14, 2022
Next Post
ಮೋದಿಗೆ ಪತ್ರಬರೆದರೂ ಈಡೇರದ ಮೇಘಾನೆಯ ಕಾಲು ಶತಮಾನದ ಬೇಡಿಕೆ!

ಮೋದಿಗೆ ಪತ್ರಬರೆದರೂ ಈಡೇರದ ಮೇಘಾನೆಯ ಕಾಲು ಶತಮಾನದ ಬೇಡಿಕೆ!

ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ : ಇಕ್ಕಟ್ಟಿಗೆ ಸಿಲುಕಿದೆಯೇ ಬಿಜೆಪಿ ಸರ್ಕಾರ?

ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ : ಇಕ್ಕಟ್ಟಿಗೆ ಸಿಲುಕಿದೆಯೇ ಬಿಜೆಪಿ ಸರ್ಕಾರ?

ಹಿಂದುಳಿದ ವರ್ಗಗಳ ಮತಗಳಿಗಾಗಿ ಯುಪಿಯಲ್ಲಿ ಮೈತ್ರಿ ಕೂಟದೆದುರು ಮಂಡಿಯೂರಿದ ಬಿಜೆಪಿ

ಹಿಂದುಳಿದ ವರ್ಗಗಳ ಮತಗಳಿಗಾಗಿ ಯುಪಿಯಲ್ಲಿ ಮೈತ್ರಿ ಕೂಟದೆದುರು ಮಂಡಿಯೂರಿದ ಬಿಜೆಪಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist