ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ (BJP) ನಿರೀಕ್ಷೆಗೂ ಮೀರಿ ಆಘಾತವಾಗಿತ್ತು. ಆ ನಂತರ ಇದೀಗ ಉಪ ಚುನಾವಣೆಗಳಲ್ಲಿಯೂ ಅದೇ ರೀತಿ ಹಿನ್ನಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ (BY vijayendra ) ಟೆನ್ಶನ್ ತಂದಿಟ್ಟಿದೆ. ಹೀಗಾಗಿ ಅವ ಕೈ ಬಲಪಡಿಸಲು ವೇದಿಕೆ ಸಿದ್ಧವಾಗ್ತಿದೆ.
ಈ ಕುರಿತು ಪಕ್ಷ ಬಲಪಡಿಸಲು ಮತ್ತು ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಸ್ಟರ್ ಪ್ಲಾನ್ವೊಂದನ್ನ (Master plan) ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ಕ್ಷೇತ್ರಗಳ ಬಿಜೆಪಿ ಮಾಜಿ ಶಾಸಕರನ್ನು ಒಂದುಗೂಡಿಸಿ, ಈಗಿನಿಂದಲೇ ಚುನಾವಣೆಗೆ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಬಿ.ವೈ.ವಿಜಯೇಂದ್ರ, ಈಗಾಗಲೇ ಮಾಜಿ ಎಂ.ಪಿ.ರೇಣುಕಾಚಾರ್ಯ (MP renukaacharya) ಹಾಗೂ ತಂಡವನ್ನು ರೆಡಿ ಮಾಡಿದ್ದಾರೆ. ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಮಧ್ಯ ಕರ್ನಾಟಕ ಭಾಗದ ದಾವಣಗೆರೆಯಲ್ಲಿ ಸಮಾವೇಶ ಮಾಡಲು ನಿರ್ಧರಿಸಿದ್ದು,ಈ ಮೂಲಕ ಮಾಜಿ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಲು ಈಗಿನಿಂದಲೇ ವಿಜಯೇಂದ್ರ ಪ್ಲಾನ್ ರೂಪಿಸುತ್ತಿದ್ದಾರೆ.






