ಇಂದು ಚಳಿಗಾಲದ ಅಧಿವೇಶನದ (Winter session ) ಕಲಾಪ ಆರಂಭ ಆಗ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY vijayendra) ಸೇರಿದಂತೆ ಬಿಜೆಪಿ ನಾಯಕರು ಮಾಣಿಪ್ಪಾಡಿ ಗೆ 150 ಕೋಟಿ ರೂಪಾಯಿ ಆಫರ್ ನೀಡಿದ್ದ ಆರೋಪದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಬಿ.ವೈ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.ನಾನು ಸದನದಲ್ಲಿ ಇಲ್ಲದ ವೇಳೆ ಸಚಿವರು ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಿನ ಮೈನಾರಿಟಿ ಕಮಿಷನ್ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ (Anwar manippadi) ವಕ್ಫ್ ಬಗ್ಗೆ ವರದಿ ಕೊಟ್ಟಿದ್ರು.ಕಳೆದ 2016ರ ಮಾರ್ಚ್ನಲ್ಲಿ ಉಪಲೋಕಾಯುಕ್ತರ ವರದಿಯನ್ನ ಸದನದಲ್ಲಿ ಮಂಡಿಸಿದ್ರು.ಆದ್ರೆ ಸಿದ್ದರಾಮಯ್ಯ ಸರ್ಕಾರವೇ ವರದಿಯನ್ನು ತಿರಸ್ಕಾರ ಮಾಡಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡಿರುವ 150 ಕೋಟಿ ಆರೋಪದ ಬಗ್ಗೆ ಯಾವ ತನಿಖೆ ಬೇಕಿದ್ರೂ ಮಾಡಲಿ.ಅದ್ರ ಜೊತೆಗೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸಿಬಿಐಗೆ ನೀಡ್ಲಿ ಅಂತ ವಿಜಯೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.