
ವಿಜಯಪುರ: ಸಾರ್ವಜನಿಕ ಸ್ಥಳದಲ್ಲಿ ಮಂಗಳಮುಖಿಯನ್ನು ( Transgender ) ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ವಿಜಯಪುರ (Vijayapura) ನಗರ ಬಸ್ ನಿಲ್ದಾಣ ಬಳಿಯ ಲಲಿತ ಮಹಲ್ ಹೋಟೆಲ್ ಮುಂಭಾಗ ಘಟನೆ ನಡೆದಿದೆ.
ಮಂಗಳಮುಖಿ ಅಂತ ಹೇಳಿಕೊಂಡು ಹಣ ಕೇಳುತ್ತೀಯಾ ಅಂತ ಏಳೆಂಟು ಮಂಗಳಮುಖಿಯರು ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಒದ್ದು, ಖಾರದಪುಡಿ ಎರಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಅಂಗಲಾಚಿ ಬೇಡಿಕೊಂಡರು ಸಹ ಮಂಗಳಮುಖಿಯರು ಬಿಡುತ್ತಿಲ್ಲ. ಅಲ್ಲದೆ ಮಂಗಳಮುಖಿಯರು ತಮ್ಮ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ.
ಮಂಗಳಮುಖಿಯರು ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 15 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.