ಮಕ್ಕಳಿಗೆ ಪಾಠ ಮಾಡಿ ಅವರ ಮುಂದಿನ ಜೀವನ ರೂಪಿಸುವ ಅತಿಥಿ ಉಪನ್ಯಾಸಕ ಜೀವನವೇ ಅತಂತ್ರವಾಗಿದೆ. ಹಲವು ವರ್ಷಗಳಿಂದ ಕಾಲೇಜುಗಳಲ್ಲಿ ಪಾಠ ಮಾಡುತ್ತ ಜೀವನ ಸಾಗಿಸುತ್ತಿದ್ದ ಗುರುಗಳು ಇದೀಗ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ. ಸೇವಾ ಭದ್ರತೆ ಜೊತೆಗೆ ಖಾಯಂ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಸಾವಿರಾರು ಉಪನ್ಯಾಸಕರು, ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಒಂದೇಡೆ ರಾಜ್ಯಾದ್ಯಂತ ಉಪನ್ಯಾಸಕರು ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಮಕ್ಕಳು ಪಾಠ ಮಾಡದೆ ಪರೀಕ್ಷೆ ಬರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವಿಳಂಭ ನೀತಿಯಿಂದಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇಬ್ಬರು ನಡುನೀರಲ್ಲಿ ಉಳಿಯುವಂತಾಗಿದೆ. ಕೆಲವು ಕಡೆ ಕುಟುಂಬ ನಿರ್ವಹಣೆ ಸಮಸ್ಯೆಯಿಂದಾಗಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆಯ ಹಾದಿ ಹಿಡಿದ್ದಿದ್ದಾರೆ. ಮತ್ತೊಂಡೆದೆ ಉಪನ್ಯಾಸಕರಿಲ್ಲದೆ ಪಾಠ ಕೇಳಲಾಗದ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ಹಿಡಿದ್ದಿದ್ದಾರೆ. ಸರ್ಕಾರದ ದಿವ್ಯ ಮೌನ ಹಾಗೂ ವಿಳಂಭ ನೀತಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನ ಬಿದಿಗೆ ತಂದು ನಿಲ್ಲಿಸಿದೆ.
ರಾಜ್ಯದ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಜನ ಅತಿಥಿ ಉಪನ್ಯಾಸಕರು ನಿಯಮಾನುಸಾರ ಆಯ್ಕೆಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇಂದಿನ ದುಬಾರಿ ಮಾರುಕಟ್ಟೆಯಲ್ಲಿ 11 ಸಾವಿರದಿಂದ 13,500 ಸಂಬಳದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 430 ಕಾಲೇಜುಗಳಲ್ಲಿ ಶೇಕಡಾ 70% ಅತಿಥಿ ಉಪನ್ಯಾಸಕರೇ ಇದ್ದಾರೆ. ಆದರೂ ಸರಕಾರ ನಮಗೆ ಉದ್ಯೋಗ ಭದ್ರತೆ ನೀಡುತ್ತಿಲ್ಲ ಎಂಬುದು ಉಪನ್ಯಾಸಕರು ವಾದ. ಅಲ್ಲದೆ ಈ ಹಿಂದೆ ಒಂದು ವರ್ಷದ ಶೈಕ್ಷಣಿಕ ಅವಧಿಯಲ್ಲಿ 1 ರಿಂದ 9 ತಿಂಗಳು ಸಂಬಳ ನೀಡುತ್ತಿದ್ದ ಸರ್ಕಾರ, 2021-2022ನೇ ಸಾಲಿನಲ್ಲಿ ಕೇವಲ 6 ತಿಂಗಳು ಸಂಬಳ ನೀಡಲು ಆದೇಶಿಸಿರುವದು ಅತಿಥಿ ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಅತಿಥಿ ಉಪನ್ಯಾಸಕರ ಬೇಡಿಕೆ ಏನು.?
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕರ್ನಾಟಕ ನಾಗರಿಕ ಸೇವೆಯಲ್ಲಿ ಸೇವಾ ಭದ್ರತೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಸರ್ಕಾರಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳೀಯ ಅಭ್ಯರ್ಥಿ ಸ್ಟಾಫ್ ಗ್ಯಾಪ್ ಗುತ್ತಿಗೆ ಆಧಾರಿತ ಅರೇಕಾಲಿಕ ಉಪನ್ಯಾಸಕರುಗಳನ್ನು ಸರ್ಕಾರ ಮಾನವೀಯತೆ ಆಧಾರದ ಮೇಲೆ 1982, 1992, 1996, 2003ರಲ್ಲಿ ಖಾಯಂ ಮಾಡಿರುವ ನಿದರ್ಶನಗಳಿವೆ. ಅದೇ ಮಾದರಿಯಲ್ಲಿ ಅತಿಥಿ ಉಪನ್ಯಾಸಕ ಬಗ್ಗೆಯು ಕರ್ನಾಟಕ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಉಚ್ಛ ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ಆರೋಪಿಸಿರುವ ಅಥಿತಿ ಉಪನ್ಯಾಸಕರು, ನಮಗಳ ಸೇವೆಯನ್ನು ಬಳಸಿಕೊಳ್ಳುವ ಕಾಲೇಜಿನ ಪ್ರಾಚಾರ್ಯರು ಇದುವರೆಗೂ ನಮ್ಮಗಳ ಸೇವೆ ಶೈಕ್ಷಣಿಕ ವರ್ಷದ 12 ತಿಂಗಳ ಅತಿಥಿ ಉಪನ್ಯಾಸಕರ ಸೇವೆ ಅಗತ್ಯವಿದೆ ಎಂದು ಒಂದೇ ಒಂದು ಪತ್ರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿರುವದಿಲ್ಲ. ಜೊತೆಗೆ ನಮ್ಮ ನ್ಯಾಯಯುತ ದಶಕಗಳ ಬೇಡಿಕೆಗೆ ನೂರಾರು ಮನವಿ ಕೊಟ್ಟರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಹೀಗಾಗಿ ನಮ್ಮ ಕುಟುಂಬ ನಿರ್ವಹಣೆ ವಯೋದೃದ್ಧ ತಂದೆ ತಾಯಿಗಳ ಯೋಗಕ್ಷೇಮ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ನಾವು ಅಕ್ಷರ ಸಹ ಕತ್ತಲದಲ್ಲಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಮಾನವೀಯ ನೆಲಗಟ್ಟಿನಲ್ಲಿ ಪರಿಗಣಿಸಿ ತ್ವರಿತವಾಗಿ ತಿರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದರ ಜೊತೆಗೆ ಮಹಿಳಾ ಅತಿಥಿ ಉಪನ್ಯಾಸಕರಿಗೆ ಯಾವುದೇ ಹೆರಿಗೆ ರಜೆಗಳಿಲ್ಲ, ಒಂದು ವೇಳೆ ಅವರು ಹೇರಿಗೆ ರಜೆ ಹೋದ ಸಂದರ್ಭದಲ್ಲಿ ಇನ್ನೊಬ್ಬ ಅತಿಥಿ ಉಪನ್ಯಾಸಕರನ್ನು ಆ ಜಾಗಕ್ಕೆ ನೇಮಕ ಮಾಡಲಾಗುತ್ತದೆ. ಇದರಿಂದಾಗಿ ಇರೋ ಉದ್ಯೋಗಕ್ಕೂ ಸೇವಾ ಭದ್ರತೆ ಇಲ್ಲದ ಕಾರಣ ಸಂಕಷ್ಟದಲ್ಲೇ ಜೀವನ ಮಾಡುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸೆಮಿಸ್ಟರ್ ಸಿಸ್ಟಮ್ ನಲ್ಲಿ ಶಿಕ್ಷಣ ನೀಡಬೇಕಾಗಿರುವುರಿಂದ ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ ಆರರಿಂದ ಎಂಟು ತಿಂಗಳು ಮಾತ್ರ ಪಾಠ ಮಾಡಲು ಅವಕಾಶ ದೊರೆಯುತ್ತದೆ. ಇದರಿಂದಾಗಿ ಉಳಿದ ಅವಧಿಯಲ್ಲಿ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಅತಂತ್ರವಾಗಿದ್ದಾರೆ.
ಸರ್ಕಾರ ಹಾಗೂ ಅತಿಥಿ ಉಪನ್ಯಾಸಕರ ನಡುವಿನ ತಿಕ್ಕಾಟದಿಂದಾಗಿ ವಿದ್ಯಾರ್ಥಿಗಳ ಜೀವನವೂ ಸಹ ಅತಂತ್ರವಾಗಿದೆ. ರಾಜ್ಯದ ಬಹುತೇಕ ಸರ್ಕಾರಿ ಕಾಲೇಜಿನಲ್ಲಿ ಕೆಲವೇ ಕೆಲವು ಹುದ್ದೆಗಳನ್ನು ಬಿಟ್ಟರೆ ಹೆಚ್ಚಿನ ಶಿಕ್ಷಕರು ಅತಿಥಿ ಉಪನ್ಯಾಸಕರಾಗಿದ್ದಾರೆ. ಕೆಲವು ಕಡೆ ಖಾಯಂ ಉಪನ್ಯಾಸಕರಿದ್ದಾರೆ, ಆದ್ರೆ ಅವರ ಸಂಖ್ಯೆ ಕಡಿಮೆ ಇರುವುದರಿಂದ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಅತಿಥಿ ಉಪನ್ಯಾಸಕ ವಿಚಾರದಲ್ಲಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕಾಗಿದೆ. ಸರ್ಕಾರ ವಿಳಂಭ ಮಾಡಿದೆ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇದರಿಂದ ತೊಂದೆರೆಯಾಗುತ್ತದೆ ಎಂಬುದು ಅಷ್ಟೇ ಸತ್ಯ.
ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಆಗ್ರಹಿಸಿ ಎಐಡಿಎಸ್‍ಓ ಬೃಹತ್ ಪ್ರತಿಭಟನೆ
ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಇಡೇರಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್‍ಓ ನೇತೃತ್ವದಲ್ಲಿ ಬುಧವಾರ ನೂರಾರು ವಿದ್ಯಾರ್ಥಿಗಳು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು.
ಬೇಸತ್ತ ಅತಿಥಿ ಉಪನ್ಯಾಸಕ ಆತ್ಮಹತ್ಯೆ
ಮಾಡುವ ಕೆಲಸಕ್ಕೆ ಇತ್ತ ಸೇವಾ ಭದ್ರತೆಯೂ ಇಲ್ಲ, ಅತ್ತ ಸರಿಯಾದ ಸಂಬಳವೂ ಇಲ್ಲ ಎಂಬ ಕಾರಣಕ್ಕೆ ತೀರ್ಥಹಳ್ಳಿಯ ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಣಕ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾ ಸಕ ಶ್ರೀ ಹರ್ಷ ಶಾನುಭೋಗ್ (40) ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.