ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದ ಸಿಆರ್ಪಿಎಫ್ ಶಿಬಿರದ ಮೇಲೆ ಮಂಗಳವಾರ ಸಂಜೆ ಅಪರಿಚಿತ ಮಹಿಳೆ ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಂದೆರಡು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳು ಓಡಾಡುತ್ತಿರುವಾಲೇ ಬಂದ ಬುರ್ಖಾ ಧರಿಸಿದ ವ್ಯಕ್ತಿ ತನ್ನ ಚೀಲದಿಂದ ವಸ್ತುವನ್ನು ಹೊರತೆಗೆದು CRPF ಶಿಬಿರದ ಮೇಲೆ ಎಸೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಂತರ ಆರೋಪಿ ತಕ್ಷಣ ಸ್ಥಳದಿಂದ ಓಡಿ ಹೋಗಿದ್ದಾರೆ.
‘ಸೋಪೋರೆಯಲ್ಲಿ ಸಿಆರ್ಪಿಎಫ್ ಬಂಕರ್ ಮೇಲೆ ಬಾಂಬ್ ಎಸೆದ ಮಹಿಳೆ ಯಾರು ಎಂಬುದನ್ನು ಕಂಡುಹಿಡಿಯಲಾಗಿದೆ. ಆಕೆಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.