ಚುನಾವಣಾ ಸಂದರ್ಭದಲ್ಲಿ
ಮಾಜಿ ಶಾಸಕರ ಜೊತೆ ವಾಗ್ವಾದಕ್ಕೆ ಕಾರಣವಾಯಿತು ಬಸಪ್ಪ ಎಂಬ ಇಬ್ಬರ ರೈತರ ಹೆಸರುಗಳು.
ಪ್ರಚಾರದ ವೇಳೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ರೈತನ ಮಧ್ಯೆ ವಾಗ್ವಾದ ನಡೆದಿದೆ. ಮತಯಾಚನೆ ವೇಳೆ ಒಂದೇ ಹೆಸರಿನ ಬಸಪ್ಪ ಯಳ್ಳಿಗುತ್ತಿ,ಬಸಪ್ಪ ಸ್ವಾಗಿ ಎಂಬ ಇಬ್ಬರು ರೈತರೂ ಕುಳಿತಿದ್ದರು.ತಮಗೆ ಆತ್ಮೀಯವಾಗಿರುವ ರೈತ ಬಸಪ್ಪ ಯಳ್ಳಿಗುತ್ತಿಗೆ ಹೇ ಬಸಪ್ಪ ಇಲ್ಲೇನ ಕೆಲಸ ಎಂದು ಸುಮ್ಮನೆ ಕೇಳಿದ ಚರಂತಿಮಠ..
ಇದನ್ನು ತನಗೆ ಎಂದು ಬಾವಿಸಿದ ಬಸಪ್ಪ ಸ್ವಾಗಿ ಎಂಬ ಇನ್ನೊಬ್ಬ ರೈತ. ನೀವೇಕೇ ಇಲ್ಲಿ ಬಂದಿರಿ ಎಂದು ವೀರಣ್ಣ ಚರಂತಿಮಠಗೆ ಪ್ರಶ್ನೆ. ನಾನು ನಿನ್ನ ಕೇಳಿಲ್ಲ ಎಂದ ಮಾಜಿ ಶಾಸಕ. ಇಷ್ಟಕ್ಕೆ ಬಸಪ್ಪ ಸ್ವಾಗಿ ಚರಂತಿಮಠ ಮಧ್ಯೆ ವಾಗ್ವಾದ. ಚರಂತಿಮಠ ಗದ್ದಿಗೌಡರ ಪರ ಪ್ರಚಾರದ ವೇಳೆ ವಾಗ್ವಾದ. ಬಾಗಲಕೋಟೆಯ ಹಳೆಪೇಟೆಯಲ್ಲಿ ಘಟನೆ. ಶಾಸಕರನ್ನು ಸಮಾಧಾನಪಡಿಸಿ ಕಳಿಸಿದ ಬಿಜೆಪಿ ಕಾರ್ಯಕರ್ತರು. ಚರಂತಿಮಠ ಅವರಿಂದ ಜೀವಕ್ಕೆ ಏನಾದರೂ ಅಪಾಯ ಆಯ್ತಂದ್ರೆ ಹೇಗೆ..
ರೈತರಿಗೇನು ಬೆಲೆ ಇಲ್ವಾ ಎಂದ ಬಸಪ್ಪ..