• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಬಿಗ್‌ಬಾಸ್‌ ಬಳಿಕ ವರ್ತೂರು ಸಂತೋಷ್‌ ಎರಡನೇ ಮದುವೆ; ‘ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌’! ಹುಡುಗಿ ಯಾರು ?

ಪ್ರತಿಧ್ವನಿ by ಪ್ರತಿಧ್ವನಿ
August 20, 2026
in Uncategorized
0
ಬಿಗ್‌ಬಾಸ್‌ ಬಳಿಕ ವರ್ತೂರು ಸಂತೋಷ್‌ ಎರಡನೇ ಮದುವೆ; ‘ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌’! ಹುಡುಗಿ ಯಾರು ?
Share on WhatsAppShare on FacebookShare on Telegram

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಗಮನ ಸೆಳೆದಿದ್ದ ವರ್ತೂರು ಸಂತೋಷ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಇದೀಗ ತೆರೆ ಬಿದ್ದಿದೆ. ನಟಿ ತನಿಷಾ ಕುಪ್ಪಂಡ ಅವರೊಂದಿಗೆ ಸಂತೋಷ್‌ ಅವರ ಹೆಸರು ಜೋಡಣೆಯಾಗಿದ್ದು, ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಇಬ್ಬರೂ ತಾವು ಕೇವಲ ಉತ್ತಮ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದರು.

ADVERTISEMENT
Magadi Balakrishna: ಸದನದಲ್ಲಿ ಬಿಜೆಪಿ ಪ್ರತಿಭಟಿಸುತ್ತಿರುವುದಕ್ಕೆ ಸಚಿವ ಬಾಲಕೃಷ್ಣ ಆಕ್ರೋಶ #pratidhvani

ಇದೀಗ ತಮ್ಮ ಮದುವೆ ವಿಚಾರದ ಬಗ್ಗೆ ಸ್ವತಃ ವರ್ತೂರು ಸಂತೋಷ್‌ ಮಾತನಾಡಿದ್ದು, ತಾವು ಎರಡನೇ ಮದುವೆಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ ಸಂತೋಷ್‌, ಇದು ತಮ್ಮ ಎರಡನೇ ಮದುವೆಯಾಗಿದ್ದು, ಪ್ರೀತಿಸಿ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆ ಹಾಗೂ ಆಶೀರ್ವಾದದೊಂದಿಗೆ ಶಾಸ್ತ್ರೋಕ್ತವಾಗಿ ವಿವಾಹವಾಗಿರುವುದಾಗಿ ಹೇಳಿದ್ದಾರೆ.

 

ತಮ್ಮ ಮದುವೆಯ ನಿರ್ಧಾರದ ಹಿಂದಿನ ಕಾರಣವನ್ನೂ ವಿವರಿಸಿರುವ ಅವರು, ವಯಸ್ಸಾದ ತಾಯಿಗೆ ಮನೆಯ ಜವಾಬ್ದಾರಿಗಳಲ್ಲಿ ನೆರವಾಗಲು ಹಾಗೂ ಕುಟುಂಬಕ್ಕೆ ಆಸರೆಯಾಗಲು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.“ಹೌದು, ಇದು ನನ್ನ ಎರಡನೇ ಮದುವೆ. ನಾನು ಪ್ರೀತಿಸಿಯೇ ಮದುವೆಯಾಗಿದ್ದೇನೆ. ಇದು ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌. ಎರಡೂ ಕುಟುಂಬದ ಹಿರಿಯರನ್ನು ಒಪ್ಪಿಸಿ, ಅವರ ಆಶೀರ್ವಾದದೊಂದಿಗೆ ಮದುವೆಯಾಗಿದ್ದೇನೆ” ಎಂದು ಸಂತೋಷ್‌ ಹೇಳಿದ್ದಾರೆ.

Siddaramaiah : Rajiv Gandhi ಬದುಕಿದ್ರೆ ಇನ್ನೂ ಒಮ್ಮೆ ಪ್ರಧಾನಿ ಆಗ್ತಾ ಇದ್ರು..! | #pratidhvani

ತಮ್ಮ ಎರಡನೇ ಮದುವೆ ಬಿಗ್‌ಬಾಸ್‌ ಕಾರ್ಯಕ್ರಮ ಮುಗಿದ ಬಳಿಕವೇ ನಡೆದಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಮದುವೆ ವಿಚಾರವನ್ನು ಇಷ್ಟು ದಿನ ಬಹಿರಂಗಪಡಿಸದೇ ಇದ್ದುದಕ್ಕೆ ಕಾರಣವನ್ನೂ ಸಂತೋಷ್‌ ತಿಳಿಸಿದ್ದಾರೆ. ಕುಟುಂಬದ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ತರುವುದು ತಮ್ಮ ಇಷ್ಟವಲ್ಲ. ವೈಯಕ್ತಿಕ ಬದುಕನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮದುವೆ ವಿಚಾರವನ್ನು ಖಾಸಗಿಯಾಗಿಟ್ಟುಕೊಂಡಿದ್ದಾಗಿ ಹೇಳಿದ್ದಾರೆ.ಆದರೆ ಇದೀಗ ನೇರವಾಗಿ ಪ್ರಶ್ನೆ ಕೇಳಿದ್ದರಿಂದ ಸತ್ಯವನ್ನು ಬಹಿರಂಗಪಡಿಸಿರುವುದಾಗಿ ತಿಳಿಸಿರುವ ಸಂತೋಷ್‌, ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದ ಶುಭ ಸಮಾರಂಭಗಳಲ್ಲಿ ಪತ್ನಿಯನ್ನು ಅಭಿಮಾನಿಗಳು ನೋಡಬಹುದು ಎಂದು ಹೇಳಿದ್ದಾರೆ.

 

ಬಿಗ್‌ಬಾಸ್‌ ಬಳಿಕ ತಮ್ಮ ನೇರ ಮಾತು, ಹಳ್ಳಿಕಾರ್‌ ಜಾನುವಾರುಗಳ ಮೇಲಿನ ಪ್ರೀತಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದ ವರ್ತೂರು ಸಂತೋಷ್‌, ಇದೀಗ ತಮ್ಮ ವೈಯಕ್ತಿಕ ಬದುಕಿನ ಹೊಸ ಅಧ್ಯಾಯದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅವರ ಅಭಿಮಾನಿಗಳು ಸಂತೋಷ್‌ ದಂಪತಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

Tags: BiggBoss 10BiggBoss KannadaEntertainment Newskannada cinemaLove Cum Arranged MarriagesandalwoodSecond MarriageTanisha KuppandaVarthur SanthoshVarthur Santhosh MarriageViral News
Previous Post

‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ಪ್ರದರ್ಶನಕ್ಕೆ ಚಾಲನೆ; ಭಾರತ–ಇಟಲಿ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ಮೆರುಗು

Next Post

‘ಅಗ್ನಿಪರೀಕ್ಷೆ’ಯಲ್ಲಿ ಗಿಲ್ಲಿ ನಟ ಗೆ ಜಡ್ಜ್ ಸ್ಥಾನ ಸಿಗದಿದ್ದು ಯಾಕೆ?ಗಿಲ್ಲಿ ನಟ ಕೊಟ್ಟ ಉತ್ತರವೇನು?

Related Posts

ʻಪ್ರೇಮದ ಊರಲಿʼ ಸಿನಿಮಾ ಹಾಡು ರಿಲೀಸ್‌ ಆಯ್ತು…
Uncategorized

ʻಪ್ರೇಮದ ಊರಲಿʼ ಸಿನಿಮಾ ಹಾಡು ರಿಲೀಸ್‌ ಆಯ್ತು…

by ಪ್ರತಿಧ್ವನಿ
August 20, 2026
0

  ಬೆಂಗಳೂರು: ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಟೈಟಲ್‌...

Read moreDetails

ಮೋದಿ ಭೇಟಿ ಮಾಡಿದ ಮಹಾ ಸಿಎಂ

August 17, 2026
ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

August 17, 2026
ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

August 16, 2026
ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

August 15, 2026
Next Post
‘ಅಗ್ನಿಪರೀಕ್ಷೆ’ಯಲ್ಲಿ ಗಿಲ್ಲಿ ನಟ ಗೆ ಜಡ್ಜ್ ಸ್ಥಾನ ಸಿಗದಿದ್ದು ಯಾಕೆ?ಗಿಲ್ಲಿ ನಟ ಕೊಟ್ಟ ಉತ್ತರವೇನು?

‘ಅಗ್ನಿಪರೀಕ್ಷೆ’ಯಲ್ಲಿ ಗಿಲ್ಲಿ ನಟ ಗೆ ಜಡ್ಜ್ ಸ್ಥಾನ ಸಿಗದಿದ್ದು ಯಾಕೆ?ಗಿಲ್ಲಿ ನಟ ಕೊಟ್ಟ ಉತ್ತರವೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada