• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

ಪ್ರತಿಧ್ವನಿ by ಪ್ರತಿಧ್ವನಿ
August 15, 2026
in Uncategorized
0
ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ
Share on WhatsAppShare on FacebookShare on Telegram

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಮೊಬೈಲ್‌ ಬಳಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಅಂಶಗಳು ಬೆಳಕಿಗೆ ಬಂದಿವೆ. ಸಿಸಿಬಿ ಪೊಲೀಸರು ಈ ಹಿಂದೆ ಆರು ಬಾರಿ ಜೈಲಿನಲ್ಲಿ ದಾಳಿ ನಡೆಸಿದ್ದರೂ ಮೊಬೈಲ್‌ ಪತ್ತೆಯಾಗಿರಲಿಲ್ಲ. ಆದರೆ, ಆಗಸ್ಟ್‌ 11ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಜ್ವಲ್‌ ಇದ್ದ ಬ್ಯಾರಕ್‌ನಿಂದ ಮೊಬೈಲ್‌ ಪತ್ತೆಯಾಗಿದೆ ಎನ್ನಲಾಗಿದೆ.

ADVERTISEMENT
D. K. Shivakumar : ಕೃಷ್ಣ ಭೈರೇಗೌಡರಿಗೆ ನಾನು ದೊಡ್ಡ ಜವಾಬ್ದಾರಿ ನೀಡಿದ್ದೇನೆ..  #dkshivakumar

ಈ ಬಾರಿ ಸಿಸಿಬಿ ಅಧಿಕಾರಿಗಳು ವಿಭಿನ್ನ ಕಾರ್ಯತಂತ್ರ ರೂಪಿಸಿದ್ದರು. ಇಬ್ಬರು ಅಧಿಕಾರಿಗಳು ಸಭೆ ನಡೆಸುವ ನೆಪದಲ್ಲಿ ಜೈಲಿನೊಳಗೆ ಪ್ರವೇಶಿಸಿದರೆ, ಮತ್ತಿಬ್ಬರು ಇನ್‌ಸ್ಪೆಕ್ಟರ್‌ಗಳು ಕಂಟ್ರೋಲ್‌ ರೂಮ್‌ನಲ್ಲಿ ಮೊಕ್ಕಾಂ ಹೂಡಿದ್ದರು. ಬ್ಯಾರಕ್‌ಗಳಿಗೆ ವಾಕಿಟಾಕಿ ಮೂಲಕ ಯಾವುದೇ ಮಾಹಿತಿ ರವಾನೆಯಾಗದಂತೆ ನಿಗಾ ವಹಿಸಲಾಗಿತ್ತು.

ಇದೇ ವೇಳೆ ಸಿಸಿಬಿಯ ಸುಮಾರು 120 ಪೊಲೀಸ್‌ ಸಿಬ್ಬಂದಿ ಜೈಲಿನ ಹೊರಭಾಗದಲ್ಲಿ ಸಿದ್ಧರಾಗಿದ್ದರು. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದಾಗ ಪ್ರಜ್ವಲ್‌ ಇದ್ದ ಬ್ಯಾರಕ್‌ನಿಂದ ಮೊಬೈಲ್‌ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

B. Z. Zameer Ahmed Khan : ಮೂರು ವರ್ಷದಿಂದ ನಾನು ಧ್ವಜಾರೋಹಣ ಮಾಡಿದ್ದೀನಿ..! #zameerahmedkhan #congress

ಹಿಂದೆ ಸಿಸಿಬಿ ಪೊಲೀಸರು ಜೈಲಿಗೆ ದಾಳಿ ನಡೆಸಲು ತೆರಳಿದಾಗ ಪ್ರವೇಶ ದ್ವಾರದಲ್ಲೇ ಜೈಲು ಸಿಬ್ಬಂದಿ ಅವರನ್ನು ತಡೆದು ಗುರುತಿನ ಚೀಟಿ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ವಿಳಂಬ ಮಾಡುತ್ತಿದ್ದರು ಎನ್ನಲಾಗಿದೆ.ಈ ಸಮಯದಲ್ಲಿ ಕೆಲ ಜೈಲು ಸಿಬ್ಬಂದಿ ಕೋಡ್‌ ವರ್ಡ್‌ ಅಥವಾ ಸನ್ನೆಗಳ ಮೂಲಕ ಕೈದಿಗಳಿಗೆ ಮಾಹಿತಿ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಎಚ್ಚೆತ್ತುಕೊಳ್ಳುತ್ತಿದ್ದ ಕೈದಿಗಳು ತಮ್ಮ ಬ್ಯಾರಕ್‌ಗಳಲ್ಲಿದ್ದ ನಿಷೇಧಿತ ವಸ್ತುಗಳನ್ನು ಬಚ್ಚಿಡುತ್ತಿದ್ದರು ಎನ್ನಲಾಗಿದೆ.

ಜೈಲಿನೊಳಗೆ ಪ್ರಜ್ವಲ್‌ ರೇವಣ್ಣ ಮೊಬೈಲ್‌ ಬಳಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು 2024ರಲ್ಲೇ ಚಿತ್ರೀಕರಿಸಲಾಗಿತ್ತು ಎನ್ನಲಾಗಿದ್ದು, ಅದೇ ಬ್ಯಾರಕ್‌ನಲ್ಲಿದ್ದ ಮತ್ತೊಬ್ಬ ವಿಚಾರಣಾಧೀನ ಕೈದಿ ವಿಡಿಯೋ ಮಾಡಿದ್ದ ಎನ್ನಲಾಗಿದೆ.ಇದರಿಂದ ಪ್ರಜ್ವಲ್‌ ಜೈಲಿಗೆ ಬಂದ ಆರಂಭಿಕ ದಿನಗಳಿಂದಲೇ ಮೊಬೈಲ್‌ ಬಳಸುತ್ತಿದ್ದರೇ ಎಂಬ ಅನುಮಾನ ಮೂಡಿದೆ. ಈ ಕುರಿತು ತನಿಖೆ ಮುಂದುವರಿದಿದೆ.

Energy  Minister K. J. George : ಮಲೆನಾಡಿನಲ್ಲಿ ಮಳೆಯ ಕಾರಣಕ್ಕೆ ಅಭಿವೃದ್ದಿ ಕೆಲಸಗಳು ನಿಧಾನವಾಗುತ್ತಿವೆ..!

 

ಪ್ರಜ್ವಲ್‌ ಬಳಿ ಪತ್ತೆಯಾದ ಮೊಬೈಲ್‌ನಲ್ಲಿದ್ದ ಸಿಮ್‌ ಕಾರ್ಡ್‌ ಆಂಧ್ರಪ್ರದೇಶ ಮೂಲದ್ದು ಎನ್ನಲಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಈ ಹಿಂದೆ ಪತ್ತೆಯಾದ ಕೆಲವು ಮೊಬೈಲ್‌ಗಳಲ್ಲೂ ಆಂಧ್ರಪ್ರದೇಶದ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಹೀಗಾಗಿ ಜೈಲಿನೊಳಗೆ ಮೊಬೈಲ್‌ ಸೇರಿದಂತೆ ನಿಷೇಧಿತ ವಸ್ತುಗಳ ಪ್ರವೇಶಕ್ಕೆ ಆಂಧ್ರಪ್ರದೇಶದ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ.ಮೊಬೈಲ್‌ ಪತ್ತೆಯಾದ ಬೆನ್ನಲ್ಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಶುಕ್ರವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೈಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬ್ಯಾರಕ್‌ಗೆ ಮೊಬೈಲ್‌, ಸಿಮ್‌ ಕಾರ್ಡ್‌, ಚಾರ್ಜರ್‌ ಹಾಗೂ ಪೆನ್‌ಡ್ರೈವ್‌ನಂತಹ ನಿಷೇಧಿತ ವಸ್ತುಗಳು ಹೇಗೆ ತಲುಪಿದವು ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

 

ಜೈಲಿನ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ನಿಷೇಧಿತ ವಸ್ತುಗಳ ಪ್ರವೇಶ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಿಸಿಬಿಯ ಹಿಂದಿನ ದಾಳಿಗಳ ವೇಳೆ ಕೈಗೆ ಸಿಗದಿದ್ದ ಮೊಬೈಲ್‌ ಈ ಬಾರಿ ಹೇಗೆ ಪತ್ತೆಯಾಯಿತು? ಜೈಲಿನೊಳಗೆ ಮೊಬೈಲ್‌ ತಲುಪಿಸಿದವರು ಯಾರು? ಆಂಧ್ರಪ್ರದೇಶದ ಸಿಮ್‌ಕಾರ್ಡ್‌ ಬಳಕೆಯ ಹಿಂದಿನ ಜಾಲವೇನು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

Tags: ### SEO Tags: Prajwal Revannabengaluru central jailbengaluru newsBreaking News KarnatakaCCB InvestigationCCB RaidJail Mobile Phone CaseKarnataka Crime Newskarnataka newsKarnataka PoliceMobile Phone In JailParappana agraharaParappana Agrahara Jail.prajwal revanna caseprajwal revanna jailPrajwal Revanna Jail Newsprajwal revanna latest newsPrajwal Revanna Mobile PhonePrison SecurityPrison Security Lapse
Previous Post

ವಂದೇ ಮಾತರಂ ವಿವಾದಕ್ಕೆ ಹೊಸ ತಿರುವು: ಖರ್ಗೆ, ಸೋನಿಯಾ, ರಾಹುಲ್ ಸನ್ನೆ ವೈರಲ್; ಕಾಂಗ್ರೆಸ್‌ ಸ್ಪಷ್ಟನೆ

Next Post

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ

Related Posts

Uncategorized

ಮೋದಿ ಭೇಟಿ ಮಾಡಿದ ಮಹಾ ಸಿಎಂ

by ಪ್ರತಿಧ್ವನಿ
August 17, 2026
0

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮಹಾ ಸಿಎಂ ಫಡ್ನವೀಸ್ ತಮ್ಮ ಎಕ್ಸ್...

Read moreDetails
ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

August 17, 2026
ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

August 16, 2026
ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ!

ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ!

August 15, 2026
ವಿಜಯ್ ಮಲ್ಯ ವಿರುದ್ಧದ ದಶಕದ ಕಾನೂನು ಸಮರಕ್ಕೆ ಬ್ರೇಕ್?

ವಿಜಯ್ ಮಲ್ಯ ವಿರುದ್ಧದ ದಶಕದ ಕಾನೂನು ಸಮರಕ್ಕೆ ಬ್ರೇಕ್?

August 13, 2026
Next Post
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada