• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

ಪ್ರತಿಧ್ವನಿ by ಪ್ರತಿಧ್ವನಿ
August 17, 2026
in Uncategorized
0
ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ
Share on WhatsAppShare on FacebookShare on Telegram

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕಾವು ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಗೆ ಖುದ್ದಾಗಿ ಹಾಜರಾಗಲು ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದ ದರ್ಶನ್ ಅವರ ಅರ್ಜಿಯನ್ನು ಬೆಂಗಳೂರಿನ 59 ನೇ ಸಿಸಿಹೆಚ್ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಬೇಕು ಎಂದು ಸೂಚಿಸಿದೆ.

ADVERTISEMENT

ಹಿರಿಯ ವಕೀಲ ಹಷ್ಮತ್ ಪಾಷಾ ಅವರು ದರ್ಶನ್‌ ಪರ ವಾದ ಮಂಡಿಸಿದ್ದರು. ಖುದ್ದು ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಸೂಚನೆ ಪಡೆಯಲು ಅನುಕೂಲವಾಗುತ್ತದೆ. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಎಸ್​ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

 

‘ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ. ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಖುದ್ದು ಹಾಜರಿ ಅಗತ್ಯವಿಲ್ಲ’ ಎಂದು ಪ್ರಸನ್ನ ಕುಮಾರ್ ವಾದ ಮಾಡಿದ್ದರು. ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಕಾಯ್ದಿರಿಸಿದ್ದರು. ಇಂದು ಆದೇಶ ಪ್ರಕಟ ಆಗಿದ್ದು, ದರ್ಶನ್ ಅವರಿಗೆ ಹಿನ್ನಡೆಯಾಗಿದೆ.

ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ. ನಿಯಮ 8.3ರ ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸಾಕ್ಷ್ಯ ವಿಚಾರಣೆ ವೇಳೆ ಅಗತ್ಯವಾದಾಗ ಸಂಪರ್ಕದ ಅವಕಾಶ ನೀಡಬೇಕು. ಸಾಕ್ಷ್ಯ ವಿಚಾರಣೆ ಮುನ್ನ ಮತ್ತು ನಡುವೆ, ನಂತರ ಸಂಪರ್ಕ ಮಾಡಬಹುದು. ಸಾಕ್ಷಿಗಳ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಸಿವಿಲ್ ಕೋರ್ಟ್​ನ ತಾಂತ್ರಿಕ ವಿಭಾಗಕ್ಕೆ ಕೋರ್ಟ್ ಸೂಚನೆ ನೀಡಿದೆ.

Previous Post

ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ

Next Post

ಮೋದಿ ಭೇಟಿ ಮಾಡಿದ ಮಹಾ ಸಿಎಂ

Related Posts

Uncategorized

ಮೋದಿ ಭೇಟಿ ಮಾಡಿದ ಮಹಾ ಸಿಎಂ

by ಪ್ರತಿಧ್ವನಿ
August 17, 2026
0

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮಹಾ ಸಿಎಂ ಫಡ್ನವೀಸ್ ತಮ್ಮ ಎಕ್ಸ್...

Read moreDetails
ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

August 16, 2026
ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

August 15, 2026
ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ!

ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ!

August 15, 2026
ವಿಜಯ್ ಮಲ್ಯ ವಿರುದ್ಧದ ದಶಕದ ಕಾನೂನು ಸಮರಕ್ಕೆ ಬ್ರೇಕ್?

ವಿಜಯ್ ಮಲ್ಯ ವಿರುದ್ಧದ ದಶಕದ ಕಾನೂನು ಸಮರಕ್ಕೆ ಬ್ರೇಕ್?

August 13, 2026
Next Post

ಮೋದಿ ಭೇಟಿ ಮಾಡಿದ ಮಹಾ ಸಿಎಂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada