‘ಹಾಸಿಗೆಗಾಗಿ ಲಂಚ’ ಹಗರಣದಿಂದ ಪ್ರಾರಂಭವಾದ ಆರೋಪ ಪ್ರತ್ಯಾರೋಪಗಳು ಈಗ ಕರ್ನಾಟಕದಲ್ಲಿ ರಾಜಕೀಯ ಸ್ಲಗ್‌ಫೆಸ್ಟ್ ಆಗಿ ಹೊರಹೊಮ್ಮಿದೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಜ್ಯದ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷಗಳು ಪರಸ್ಪರರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸುತ್ತಿವೆ.
ಕೋವಿಡ್ -19 ಸಾಂಕ್ರಾಮಿಕ ಉಲ್ಬಣಗೊಂಡಿರುವಂತೆಯೇ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಕೆಸರೆರಚಾಟದಿಂದ ಕರೋನಾ ನಿರಂತರವಾಗಿ ಹೆಚ್ಚುತ್ತಿದ್ದರೂ ರಾಜಕೀಯದ ಕೇಂದ್ರಬಿಂದುವಾಗಿ ಗುರುತುಸಿಕೊಳ್ಳುತ್ತಿದೆ.

ಬಿಜೆಪಿ ಶಾಸಕರೊಬ್ಬರು ಖಾಸಗಿ ಆಸ್ಪತ್ರೆಯಿಂದ ವ್ಯಾಕ್ಸಿನೇಷನ್‌ಗಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಆರೋಪಗಳ ಸರಣಿಯಲ್ಲಿ ಇತ್ತೀಚಿನದು.
ಬೆಂಗಳೂರು ದಕ್ಷಿಣದ ಬಸವನಗುಡಿಯ ಬಿಜೆಪಿಯ ಮೂರು ಬಾರಿ ಶಾಸಕರಾದ ರವಿ ಸುಬ್ರಮಣ್ಯವರು, ಲಸಿಕಾ ತಯಾರಿಕಾ ಕಂಪನಿಯಿಂದ ಅಥವಾ ಇನ್ನೊಂದು ಮೂಲದಿಂದ ಲಸಿಕೆ ಪಡೆಯುವ ಆಸ್ಪತ್ರೆಗಳು ಅದರ ಶುಲ್ಕದೊಂದಿಗೆ ಇತರ ವೆಚ್ಚಗಳನ್ನು ಬೆಲೆಯಲ್ಲಿ ಸೇರಿಸುತ್ತದೆ ಎಂದು ಹೇಳಿದರು. ತನ್ನ ಮೇಲೆ ಇರುವ ಕಮಿಷನ್ ಪಡೆಯುವ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ ಪಾವತಿಸುವ ಶುಲ್ಕಗಳು ಮತ್ತು ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಪ್ರತಿ ಡೋಸ್‌ಗೆ 850 ರಿಂದ ₹ 900 ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳು ₹ 700ನ್ನು ಕಮಿಷನ್ ಆಗಿ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
“ಇದು ರಾಜಕೀಯ ಆಟ. ಇಂತಹ ವಿಷಯಗಳು ಸಾಮಾನ್ಯವಾಗಿ ಚುನಾವಣೆಯ ಸಮಯದಲ್ಲಿ ಸಂಭವಿಸುತ್ತವೆ. ಆದರೆ ಇದು ಬಹಳ ಬೇಗ ಪ್ರಾರಂಭವಾಗಿದೆ ” ಎಂದು ಸುಬ್ರಮಣ್ಯ ಹಿಂದೂಸ್ತಾನ್ ಟೈಮ್ಸ್ಗೆ ಹೇಳಿಕೆ ನೀಡಿದ್ದಾರೆ.

“ಕೆಲವು ದಿನಗಳವರೆಗೆ, ಅವರು ತೇಜಸ್ವಿ ಸೂರ್ಯನನ್ನು ಗುರಿಯಾಗಿಸಿಕೊಂಡರು, ನಂತರ ಅವರು ಸತೀಶ್ ರೆಡ್ಡಿ (ಬೊಮ್ಮನಹಳ್ಳಿಯಿಂದ ಬಿಜೆಪಿ ಶಾಸಕ) ಯ ಬಳಿ ಹೋದರು ಮತ್ತು ನಂತರ ಈಗ ನನ್ನನ್ನು ಗುರಿ ಮಾಡುತ್ತಿದ್ದಾರೆ. ಮುಂದಿನವರು ಯಾರು ಎಂದು ನನಗೆ ತಿಳಿದಿಲ್ಲ ” ಎಂದು ಅವರು ಹೇಳಿದರು.
ಸೂರ್ಯ, ರೆಡ್ಡಿ, ಸುಬ್ರಮಣ್ಯ ಬೆಂಗಳೂರಿನ ದಕ್ಷಿಣ ವಾರ್ ರೂಮ್‌ಗೆ ದಾಳಿ ಮಾಡಿ ಕೆಲವು ವ್ಯಕ್ತಿಗಳು ಕಾನೂನುಬಾಹಿರವಾಗಿ ಹಾಸಿಗೆಗಳನ್ನು ಬುಕ್ ಮಾಡಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಹೊರಿಸಿದ್ದರು. 205 ಮಂದಿ ವಾರ್ ರೂಮಿನಲ್ಲಿ ಕೆಲಸ ಮಾಡುತ್ತಿದ್ದರೂ ಕೇವಲ ಒಂದೇ ಸಮುದಾಯಕ್ಕೆ ಸೇರಿದ ಹದಿನೇಳು ಮಂದಿಯ ಹೆಸರನ್ನು ಮಾತ್ರ ಸುದ್ದಿಗೋಷ್ಠಿಯಲ್ಲಿ ಓದಿದ್ದರು. ಅಲ್ಲದೆ ಇದೇನು ವಾರ್ ರೂಮಾ ಅಥವಾ ಮದರಸವೇ ಎಂದು ಕೇಳಿ ಇಡೀ ಘಟನೆಗೆ ಕೋಮು ಬಣ್ಣ ಹಚ್ಚಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿ ಸೂರ್ಯ ಅವರ ನಡವಳಿಕೆ ತೀವ್ರ ಟೀಕೆಗೂ ಗುರಿಯಾಗಿತ್ತು. ಹತ್ತು ದಿನಗಳ ಕಾಲ ತನಿಖೆ ಮಾಡಿ ಹಗರಣ ಬಯಲಿಗೆಳೆದಿದ್ದೇವೆ ಎಂದ ಸಂಸದ ನಂತರ ಅಧಿಕಾರಿಗಳು ಕೊಟ್ಟ ಪಟ್ಟಿಯನ್ನಷ್ಟೇ ನಾನು ಓದಿದ್ದೇನೆ ಎಂದು ತಿಪ್ಪೆ ಸಾರಿಸಿದ್ದರು. ಆದಾದಮೇಲೆ ಕೆಲಸದಿಂದ ಅಮಾನತ್ತಾದ ಆ ಹದಿನೇಳು ಮಂದಿಯನ್ನು ಬಿಬಿಎಂಪಿ ಮತ್ತೆ ಕೆಲಸಕ್ಕೆ ಕರೆಸಿಕೊಂಡಿತ್ತು.
ಬೆಡ್ ಸ್ಕ್ಯಾಮ್ ಹಗರಣದಲ್ಲಿ ಶಾಸಕರ ಆಪ್ತರೊಬ್ಬರನ್ನು ಆಮೇಲೆ ಪೊಲೀಸರು ಬಂಧಿಸಿದ್ದರೂ ಸಂಸದ ತೇಜಸ್ವಿ ಸೂರ್ಯ ಹಲವು ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನೇಷನ್ ಜಾಹಿರಾತಿನಲ್ಲಿ ಕಾಣಿಸಿಕೊಂಡು ವ್ಯಾಪಕ ಟೀಕೆಗೆ ಒಳಗಾಗಿದ್ದರು.

ಉಲ್ಬಣಗೊಂಡಿರುವ ಕರೋನಾವನ್ನು ನಿಯಂತ್ರಿಸಲು ಈಗಾಗಲೇ ಹೆಣಗಾಡುತ್ತಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಚಿತ್ರಣವನ್ನು ಈ ಆರೋಪಗಳು ಮತ್ತಷ್ಟು ಕೆಡಿಸಿವೆ. ಪಕ್ಷದೊಳಗೆ ನಡೆಯುತ್ತಿರುವ ಅಧಿಕಾರಕ್ಕಾಗಿನ ಕಿತ್ತಾಟ ಬಹಿರಂಗವಾಗಿದೆ. “ಆರೋಪಗಳನ್ನು ಪರಿಶೀಲಿಸಲು ಸರಿಯಾದ ಪ್ರಕ್ರಿಯೆಗಳನ್ನು ಜಾರಿಗೊಳಿಸುವ ಯಾವುದೇ ಕ್ರಮ ಕೈಗೊಳ್ಳದೆ ಆರೋಪ ಮಾಡಿದವರನ್ನು ಗುರಿಯಾಗಿಸುವ ಪ್ರಯತ್ನವಾಗಿ ಮಾರ್ಪಟ್ಟಿದೆ ”ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಶಾಸಕರೊಬ್ಬರು ಹೇಳುವ ಮೂಲಕ ಮೂವರು ಶಾಸಕರನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರವೇ ಗುರಿಯಾಗಿಸಿಕೊಂಡಿದೆ ಎಂದು ಸುಳಿವು ನೀಡಿರುವುದಾಗಿ ‘ದಿ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
1250 ಕೋಟಿ ರೂಗಳ ಅಸಮರ್ಪಕ ಹಣಕಾಸು ಪ್ಯಾಕೇಜ್, ಬಹುತೇಕ ಅಸ್ತಿತ್ವದಲ್ಲಿಲ್ಲದ ಕ್ಯಾಬಿನೆಟ್, ಮತ್ತು ಸರ್ಕಾರದೊಳಗಿನ ಒಳಜಗಳಗಳು ಬಿಜೆಪಿ ಆಡಳಿತದ ಕರ್ನಾಟಕದ ಕಾರ್ಯಕ್ಷಮತೆಯ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.
ಆಡಳಿತಾರೂಢ ಬಿಜೆಪಿಯ ಮೇಲಾಗುತ್ತಿರುವ ಆರೋಪಗಳು ಕಾಂಗ್ರೆಸ್ ಗೆ ತನ್ನ ಇಮೇಜನ್ನು ಮರಳಿ ಬೆಳೆಸುವ ಸಾಧನವಾಗಿ ಕಾಣುತ್ತಿದೆ. ಹಾಗಾಗಿಯೇ ಈ ಪ್ರಕರಣವನ್ನು ಅದು ರಕ್ಷಣಾತ್ಮಕವಾಗಿ ಬಳಸಿಕೊಳ್ಳುತ್ತಿದೆ.
ಬೆಡ್ ಹಗರಣ, ಪಿಎಂ ಕೇರ್ಸ್, ವೈದ್ಯಕೀಯ ಉಪಕರಣಗಳ ಖರೀದಿ, ಆಹಾರ ಕಿಟ್, ಮತ್ತು ಲಸಿಕೆ ಹಗರಣಗಳನ್ನು ಕರ್ನಾಟಕ ಕಾಂಗ್ರೆಸ್ ಬಿಜೆಪಿ ಸರ್ಕಾರದ ಹಗರಣಗಳೆಂದು ಪಟ್ಟಿ ಮಾಡುತ್ತಿದೆ. ಆದರೆ ಜವಾಬ್ದಾರಿಯುತ ಪ್ರತಿಪಕ್ಷವಾಗಿ ತಾವೇನು ಮಾಡಿದೆ ಎಂದು ಹೇಳುತ್ತಿಲ್ಲ.
“492 ಹೊಸ ಸಾವಿನ ಪ್ರಕರಣಗಳೊಂದಿಗೆ ಕರ್ನಾಟಕದ ಸಾವಿನ ಅಂಕಿ ಅಂಶಗಳು ಸರ್ಕಾರದ ಅಸಮರ್ಥತೆಯನ್ನು ಕೂಗಿ ಹೇಳುತ್ತಿವೆ. #BJPVaccineScam ನಿಂದಾಗಿಯೇ ಸರ್ಕಾರ #LetCongressVaccinate ಗೆ ಅನುಮತಿ ಕೊಡಲು ನಿರಾಕರಿಸಿದೆ. ಜನರ ದುಃಖದಿಂದ ಲಾಭ ಗಳಿಸಲು ಅವರು ಬಯಸುತ್ತಾರೆ ”ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ವ್ಯಾಕ್ಸಿನೇಷನ್ ಡ್ರೈವ್ “95% ವೈಫಲ್ಯ” ಮತ್ತು ಅರ್ಹ ವ್ಯಕ್ತಿಗಳಲ್ಲಿ ಕೇವಲ 5% ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ ಎಂದೂ ಅವರು ಹೇಳಿದ್ದಾರೆ.
“ನೀವು ಬಿಜೆಪಿ ಶಾಸಕರು ಅಥವಾ ಸಂಸದರಿಗೆ ಪಾವತಿಸಿದರೆ ಖಾಸಗಿ ಆಸ್ಪತ್ರೆಗಳು ಮತ್ತು ಹೋಟೆಲ್‌ಗಳಲ್ಲಿ ಲಸಿಕೆಗಳು ಲಭ್ಯವಿದೆ, ಆದರೆ ಬಡ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಲಸಿಕರ ಪೂರೈಸುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲ್ಲ. #ModiMadeDisaster” ಎಂದು ಕಲಬುರಗಿ ಜಿಲ್ಲೆಯ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.