ರಾಜ್ಯದಲ್ಲಿ ಕರೋನಾ ಮೂರನೆಯ ಅಲೆಯ ಕುರಿತು ಆತಂಕಗಳು ಎದ್ದಿವೆ. ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಮೂರನೆಯ ಅಲೆಯ ಮುನ್ಸೂಚನೆಯನ್ನು ನೀಡುತ್ತಿದೆ.
ಈ ನಡುವೆ ಕೋವಿಡ್ ಮೂರನೆಯ ಅಲೆಯನ್ನು ತಡೆಗಟ್ಟಲು ಚಿಂತಾಮಣಿ ತಾಲೂಕು ಆಡಳಿತ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ತಾಲೂಕಿನಲ್ಲಿ ಉತ್ತೇಜಿಸಲು ಚಿಂತಾಮಣಿ ತಾಲೂಕು ಆಡಳಿತ ಹೊರಟಿದೆ. ಅದರಂತೆ, ವ್ಯಾಕ್ಸಿನ್ ಪಡೆಯದೇ ಇರುವವರಿಗೆ ತಿಂಗಳ ಪಡಿತರವನ್ನು ವಿತರಿಸಲಾಗುವುದಿಲ್ಲ ಎಂದು ತಾಲೂಕ್ ಆಡಳಿತ ನಿರ್ಣಯ ಕೈಗೊಂಡಿದೆ.
18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ನೋಡಿ ಪಡಿತರ ವಿತರಿಸಲಾಗುವುದು ಎಂದು ತಹಶಿಲ್ದಾರ್ ಹೇಳಿದ್ದಾರೆ.
ಎರಡನೇ ಲಸಿಕೆ ಪಡೆಯಲು ಕಾಲಾವಕಾಶ ಇದ್ದವರಿಗೆ ಪಡಿತರ ವಿತರಿಸಲಾಗುವುದು, ಕಾಲಾವಕಾಶ ಮೀರಿದವರಿಗೆ ಲಸಿಕೆ ಪಡೆದ ಬಳಿಕವಷ್ಟೇ ಪಡಿತರ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.