
ಜಾತಿ ಜನಗಣತಿ ವರದಿ ಕಾಗಕ್ಕ ಗೂಬಕ್ಕ ಕತೆ ತರ ಇದೆ ಅಂತಾ ಕೇಂದ್ರೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ಜಾತಿ ಜನಗಣತಿ ವರದಿ ಸಿದ್ದರಾಮಯ್ಯ ಅಧಿಕಾರಕ್ಕೆ ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ. ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ಅಂತಾನೂ ವಿ ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಈ ವರದಿಯನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಲಿ ಎಂದಿರುವ ಸೋಮಣ್ಣ, ಮತ್ತೊಂದು ಸಮೀಕ್ಷೆಯನ್ನು ಮಾಡಿ, ಇನ್ನೂ ಮೂರು ವರ್ಷ ಸಮಯ ಸಿದ್ದರಾಮಯ್ಯಗೆ ಇದೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕ ಆಗಿಲ್ಲ. ಇದೊಂದು ಜೇನಿಗೂಡಿಗೆ ಕೈ ಹಾಕಿದಂತೆ. ನಿಮ್ಮ ಪಕ್ಷದವರೇ ಏನೇನೋ ಹಿಡಿದು ತಿವೀತಿದ್ದಾರೆ. ಈ ವರದಿ ಜಾರಿ ಆದರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ವರದಿ ಜಾರಿಯಾದರೆ ಸಿದ್ದರಾಮಯ್ಯ ಒಂಟಿಯಾಗಿ ಹೋಗ್ತಾರೆ. ಈ ವರದಿ ತಿರಸ್ಕರಿಸುವಂತೆ ಕೇಂದ್ರ ಸಚಿವ ವಿ ಸೋಮಣ್ಣ ಆಗ್ರಹ ಮಾಡಿದ್ದಾರೆ.

ರಾಜ್ಯ ಸರ್ಕಾರ ದರ ಏರಿಕೆ ಎಲ್ಲ ಪದಾರ್ಥಗಳಿಗೂ ಮಾಡಿದೆ. ಕಾಂಗ್ರೆಸ್ನ ದರ ಏರಿಕೆ ದಾಹ ಇನ್ನೂ ಇಂಗಿಲ್ಲ. ಇದಲ್ಲದೇ ಬೆಂಗಳೂರಿನಲ್ಲಿ ಅಡಿಗೆ ನೂರು ರೂಪಾಯಿ ವಸೂಲಿ ಮಾಡ್ತಿದ್ದಾರೆ. ಕಸಕ್ಕೂ ಶುಲ್ಕ ಹಾಕಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ರಿ, ಜನರ ಮೇಲೆ ಅನಾವಶ್ಯಕ ಟ್ಯಾಕ್ಸ್ ಹಾಕ್ತಿದ್ದೀರಿ. ಸಿದ್ದರಾಮಯ್ಯ ಏನು ಭರವಸೆ ಕೊಟ್ಟಿದ್ದಾರೋ ಅದರಲ್ಲಿ ಒಂದು ಪರ್ಸೆಂಟ್ ಆದ್ರೂ ಈಡೇರಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.

ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಸವರಾಜ್ ರಾಯರೆಡ್ಡಿ ಮಾತನಾಡಿರುವ ವಿಚಾರದ ಬಗ್ಗೆ ಮಾತನಾಡಿದ ವಿ. ಸೋಮಣ್ಣ, ನಾನು ಅವರು ಹೋಗೋ ಬಾರೋ ಫ್ರೆಂಡ್ಸ್. ನಾವೆಲ್ಲರೂ ಜೊತೆಗೆ ಇದ್ದವರು. ಅವನಿಗೆ ಏನ್ ಅನ್ಸಿದ್ದೆಯೋ ಅದನ್ನು ಹೇಳಿದ್ದಾನೆ. ಅವನಿಗೆ ಮುಳ್ಳು ಆಗಿದೆ. ರಾಯರೆಡ್ಡಿ ಹೇಳಿದ್ದು ನೂರಕ್ಕೆ ನೂರು ಸತ್ಯ ಇದೆ. ಸತ್ಯ ಹೇಳುವವರು ಎಲ್ಲಾ ಕಡೆ ಇರಬೇಕು. ಕಾಂಗ್ರೆಸ್ ಅವರು ರಾಯರೆಡ್ಡಿಗೆ ಎನ್ ಮಾಡ್ತಾರೊ ಗೊತ್ತಿಲ್ಲ. ಸತ್ಯ ಮಾತಾಡಿದ್ದಾನೆ, ಸಿದ್ದರಾಮಯ್ಯಗೂ ರಾಯರೆಡ್ಡಿ ಮಾತಾಡಿದ್ದು ಅರಿವಾಗಿದೆ. ರಾಯರೆಡ್ಡಿ ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದಿದ್ದಾರೆ.

ಲಿಂಗಾಯತ, ಒಕ್ಕಲಿಗ ಸಮುದಾಯದೊಳಗಿನ ಜಾತಿಯೊಳಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ತಕ್ಷಣ ವರದಿ ವಾಪಸ್ ಪಡೆಯಬೇಕು. ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ, ವರದಿ ಕೊಡಬೇಕು. 150 ಕೋಟಿ ರೂಪಾಯಿ ಯಾರು ತಿಂದರು..? ಯಾರ ಮನೆಗೂ ಸರ್ವೆಗೆ ಹೋಗಿಲ್ಲ, ಹೇಗೆ ಹಣ ಖರ್ಚಾಯಿತು..? ಈ ಬಗ್ಗೆ ತನಿಖೆ ಆಗಬೇಕು. ಕಾಂತರಾಜು, ವರದಿಗೆ ಸಹಿ ಮಾಡದೆ ತಪ್ಪಿಸಿಕೊಂಡು ಓಡಿದ್ದು ಯಾಕೆ..? ಮುಸ್ಲಿಮರನ್ನ ಓಲೈಕೆ ಮಾಡಿ ಪರ್ಮನೆಂಟ್ ಓಟ್ ಬ್ಯಾಂಕ್ ಮಾಡಿಕೊಳ್ಳುವ ಸಂಚಿನ ವರದಿ ಇದು. ಡಿಕ್ಟೆಟೆಡ್, ಪ್ರೂಪ್ ರೀಡ್, ಪ್ರಿಂಟ್, ಡಿಸ್ಟ್ರಿಬ್ಯೂಟ್, ಕ್ಯಾಬಿನೆಟ್ಗೆ ತಂದಿದ್ದು ಎಲ್ಲವೂ ಸಿದ್ದರಾಮಯ್ಯ. ಎಲ್ಲರ ಮನೆಗೆ ಹೋಗಿ ಸಹಿ ಪಡೆದು, ವೈಜ್ಞಾನಿಕ ವಾಗಿ ವರದಿ ಸಿದ್ದಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.