ವೈದ್ಯಕೀಯ ಲೋಕದಲ್ಲಿ ದಿನ ಒಂದಲ್ಲ ಒಂದು ಆವಿಷ್ಕಾರ ನಡೆಯುತ್ತ ಇರುತ್ತದೆ. ಇದೀಗ ಯುಎಸ್ನಲ್ಲಿ ವೈದ್ಯರು ಒಂದು ಸಾಧನೆ ಮಾಡಿದ್ದಾರೆ. ಅದೇನೆಂದರೆ ಜೀವಂತ ಹಂದಿಯ ಹೃದಯವನ್ನ ಮನುಷ್ಯನ ಹೃದಯಕ್ಕೆ ಕಸಿ ಮಾಡಿ ಯಶಸ್ವಿಯಾಗಿದ್ದಾರೆ.
ಮೇರಿಲ್ಯಾಂಡ್ ನಾ ನಿವಾಸಿ ಡೇವಿಡ್ ರವರು ಚಿಕಿತ್ಸೆಗೆ ಒಳಗಾಗಿದ್ದು ಹೃದಯ ಕಸಿ ಮಾಡಿದ ಮೂರು ದಿನ ಕಳೆದರೂ ಅವರ ಆರೋಗ್ಯ ತುಂಬಾ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 8 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಹೃದಯ ಬಡಿತವು ಮಾಮೂಲಿ ಮನುಷ್ಯರಿಗೆ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಕಸಿ ಚಿಕಿತ್ಸೆ ಯಶಸ್ವಿಯಾಗಿ ಮುಗಿದ ನಂತರವೂ ರೋಗಿಗೆ ಹಾರ್ಟ್ ಲಂಗ್ ಬೈಪಾಸ್ ಮಿಷನ್ ಅಳವಡಿಸಿದ ಹೃದಯ ಎಲ್ಲವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಳವಡಿಸಿರುವ ಮಷೀನ್ ಅನ್ನು ಮಂಗಳವಾರ ತೆಗೆಯಲಾಗಿದೆ.
ಪ್ರಪಂಚದಲ್ಲಿ ಈ ರೀತಿ ಹೃದಯ ಕಸಿ ಮಾಡಿರುವುದು ಇದೇ ಮೊದಲು, ಹಾಗಾಗಿ ನಾವು ಈ ಬಗ್ಗೆ ಎಚ್ಚರ ವಹಿಸಿದೆವು. ಈ ಒಂದು ಯಶಸ್ವಿ ಹೃದಯ ಕಸಿ ಭವಿಷ್ಯದ ಆತಂಕವನ್ನು ದೂರ ಮಾಡಿದೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ವಹಿಸಿದ ಬಾರ್ಟ್ಲಿ ಗ್ರಿಫೀತ್ ಹೇಳಿದ್ದಾರೆ.
ಈ ಹಿಂದೆ ಇದೇ ರೀತಿ ಹಂದಿಯ ಅಂಗಾಂಗಗಳನ್ನು ಮನುಷ್ಯನ ದೇಹದಲ್ಲಿ ಕಸಿ ಮಾಡಲಾಗಿತ್ತು ಈ ರೀತಿ ಕಸಿ ಮಾಡುವುದನ್ನು ಜೆನೋಟ್ರಾನ್ಸ್ ಪ್ಲಾಂಟೇಷನ್ ಎಂದು ಕರೆಯಲಾಗುತ್ತದೆ ಎಂದು ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಮೂಲದ ವೈದ್ಯ ಮೊಹಮದ್ ಮೋಹಿಯುದ್ದಿನ್ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ ಬೆನ್ನೆಟ್ ರವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ವ್ಯಕ್ತವಾಗುತ್ತಿದೆ ಈ ರೀತಿಯ ಕಾರ್ಯಗಳನ್ನು ಮಾಡಬೇಕಾದರೆ ಧೈರ್ಯಬೇಕು ಆ ಕೆಲಸವನ್ನು ವೈದ್ಯರು ಮಾಡಿತೋರಿಸಿದ್ದಾರೆ ಇದು ಮುಂದಿನ ಪೀಳಿಗೆಗೂ ಸಹಾಯಮಾಡುತ್ತದೆ ಎಂದು ಅಧ್ಯಕ್ಷರಾದ ಮೋಹನ್ ಸುಂತ ಹೇಳಿದ್ದಾರೆ.