ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಇಂದು ಗುರುವಾರ ಸಿದ್ದರಾಮಯ್ಯ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದ್ದಾರೆ.
ಹೌದು, ಕಳೆದ ಹಲವು ದಿನಗಳಿಂದ ಭಾರಿ ಮಳೆಗೆ ಬೆಂಗಳೂರಿನ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ವಿವಿಧೆಡೆ ರೌಂಡ್ ಹಾಕಿ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾಧ್ಯಮದೊಂಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಬಾರಿ ಮೇ ತಿಂಗಳಲ್ಲಿ ಹೆಚ್ಚು ಮಳೆ ಬಂದಿದೆ. ಸಾಧಾರಣವಾಗಿ ಮುಂಗಾರು ಪೂರ್ವದ ತಿಂಗಳುಗಳಲ್ಲಿ ಹೆಚ್ಚು ಮಳೆ ಬರುತ್ತದೆ ಎನ್ನುವುದು ಸಾಧಾರಣ ಜ್ಞಾನ ಇರುವವರಿಗೆಲ್ಲ ಅರ್ಥಗೊತ್ತಿರುವ ವಿಷಯವೆ. ಇದರ ಜೊತೆಗೆ ಹವಾಮಾನವನ್ನು ವೈಪರೀತ್ಯವನ್ನು ಅಧ್ಯಯನ ಮಾಡಿರುವ ತಜ್ಞರುಗಳು ಮುಂದಿನ ಒಂದು ದಶಕ ಕಾಲ ಅತಿ ಮಳೆಯಿಂದಾಗಿ ಅತಿ ಹೆಚ್ಚು ಸಮಸ್ಯೆಗಳಾಗುತ್ತವೆ ಎಂದು ವರದಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಹವಾಮಾನ ವೈಪರೀತ್ಯದ ಕುರಿತು ಹಾಗೂ ಈ ಕುರಿತು ತಜ್ಞರುಗಳನ್ನು ಒಳಗೊಂಡ ತಂಡವು ನೀಡಿರುವ ವರದಿಯ ಕುರಿತು ನಾನು ಬೆಳಗಾವಿಯ ಅಧಿವೇಶನ ಮತ್ತು ಅದಕ್ಕೂ ಮೊದಲಿನ ಅಧಿವೇಶನದಲ್ಲಿ ವಿವರವಾಗಿ ಮಾತನಾಡಿದ್ದೆ. ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಕ್ಷೇತ್ರವಷ್ಟೆ ಅಲ್ಲ. ನಗರಗಳ ಜನರೂ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ಯಾರು ಹೇಳಿದರೂ ಕೇಳದ ಈ ರಿಯಲ್ ಎಸ್ಟೇಟ್ ಸರ್ಕಾರ ಜನಜೀವನವನ್ನು ಧ್ವಂಸ ಮಾಡುತ್ತಿದೆ.
ಸರ್ಕಾರ ಬೆಂಗಳೂರಿನ ರಸ್ತೆ, ಚರಂಡಿಗಳನ್ನು ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದೆ. ಮಳೆ ನೀರು ಚರಂಡಿಗಳಲ್ಲಿನ ಸಿಲ್ಟ್ ತೆಗೆಯಲು ಮಾಡಲು ಕಳೆದ ಎರಡು ವರ್ಷಗಳಿಂದ ವರ್ಷಕ್ಕೆ ೮೦ ಕೋಟಿಗಳನ್ನು ಖರ್ಚು ಮಾಡುತ್ತಿದೆ. ಆದರೆ ಈ ೮೦ ಕೋಟಿ ಹಣವನ್ನು ನುಂಗುವುದಕ್ಕೆ ಬಳಸಲಾಗುತ್ತಿದೆಯೆ ಹೊರತು ಇದರಿಂದ ಯಾವುದೆ ಪ್ರಯೋಜನವಿಲ್ಲ. ಸಿಲ್ಟ್ ತೆಗೆವ ಗುತ್ತಿಗೆದಾರ ಅದನ್ನು ತೆಗೆದು ಎಲ್ಲಿಗೆ ಸಾಗಿಸಿದ್ದಾನೆ? ಎಲ್ಲಿ ಹಾಕಿದ್ದಾನೆ ಎಂಬ ಲೆಕ್ಕವನ್ನು ಕೊಡಬೇಕಲ್ಲವೆ? ಸರ್ಕಾರದ ಬೊಕ್ಕಸದಿಂದ, ಬಿಬಿಎಂಪಿ ಬಜೆಟ್ ನಿಂದ ಜನರ ತೆರಿಗೆಯ ಹಣವನ್ನು ನೀರಿನಂತೆ ಒದಗಿಸಲಾಗುತ್ತಿದೆ. ಆದರೆ ಆಗಿರುವುದೇನು? ಕೇವಲ ದಾಖಲೆಗಳಲ್ಲಿ ಮಾತ್ರ ಸಿಲ್ಟ್ ತೆಗೆಯಲಾಗಿದೆಯೆಂದು ತೋರಿಸಿ ಹಣ ನುಂಗಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಎಂಟು ವಲಯಗಳೂ ಸೇರಿದಂತೆ ಸುಮಾರು ೭೦೦ ಪಾಯಿಂಟ್‌ಗಳಿವೆ. ಈ ಪಾಯಿಂಟ್ ಗಳಲ್ಲೆ ರಾಜಕಾಲುವೆ? ಮಳೆ ನೀರು ಕಾಲುವೆಗಳ ಸಮಸ್ಯೆ ಇದೆ. ಈ ಸಮಸ್ಯೆಯನ್ನು ನಿಭಾಯಿಸಬೇಕಾದರೆ ಸಂಪೂರ್ಣ ವೈಜ್ಞಾನಿಕವಾದ ತಿಳುವಳಿಕೆ ಇರಬೇಕಾಗುತ್ತದೆ ಎಂದು ಹೇಳಿದ್ಧಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ನಾನು ೧೨೧೭ ಕೋಟಿ ರೂ ಮೊತ್ತದಲ್ಲಿ ೨೧೨ ಕಿಮೀ ಉದ್ದದ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿ ಮಾಡಲು ಪ್ರಾರಂಭಿಸಿದ್ದೆವು. ನಮ್ಮ ಅವಧಿಯಲ್ಲೆ ಶೇ. ೫೦ ರಷ್ಟು ಚರಂಡಿ/ ಕಾಲುವೆಗಳನ್ನು ಅಭಿವೃದ್ಧಿ ಪಡಿಸಿದ್ದೆವು. ಪ್ರಸ್ತುತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಕಳೆದ ವರ್ಷ ಬೆಂಗಳೂರಿನ ಮಳೆ ನೀರು ಕಾಲುವೆ/ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ೧೫೦೦ ಕೋಟಿ ವಿನಿಯೋಗಿಸುವುದಾಗಿ ತಿಳಿಸಿದ್ದರು. ನನಗೆ ತಿಳಿದ ಮಟ್ಟಿಗೆ ಇದುವರೆಗೆಈ ಕುರಿತು ಒಂದು ರೂಪಾಯಿಯನ್ನೂ ಬಿಡುಗಡೆಮಾಡಿಲ್ಲ. ಖರ್ಚು ಮಾಡಿಲ್ಲ ಎಂದು ಆರೋಪಿಸಿದ್ಧಾರೆ.
ರಾಜಕಾಲುವೆಗಳ ಒತ್ತುವರಿಯೂ ಪ್ರಮುಖ ಸÀಮಸ್ಯೆ ಇದೆ. ಅದನ್ನು ಬಗೆಹರಿಸುವ ಅನಿವಾರ್ಯತೆ ಇದೆ. ಈ ಅನಿವಾರ್ಯತೆಯನ್ನು ಮನಗಂಡು ನಮ್ಮ ಸರ್ಕಾರ ಒತ್ತುವರಿಯನ್ನು ತೆರವು ಮಾಡಲು ಪ್ರಾರಂಭಿಸಿತ್ತು. ಈಗ ಅದೂ ಕೂಡ ನೆನೆಗುದಿಗೆ ಬಿದ್ದಿದೆ. ರಾಜಕಾಲುವೆ ಅಭಿವೃದ್ಧಿ ಮಾಡುವುದೆಂದರೆ ಚರಂಡಿಗಳ ಅಗಲ ಕಡಿಮೆ ಮಾಡಿ ಕೇವಲ ಕಾಂಕ್ರೀಟ್ ಗೋಡೆ ಕಟ್ಟಿಕೊಂಡು ಹೋಗುವುದು ಎಂಬಂತಾಗಿದೆ. ಇದರಿಂದ ಯಾವ ಸಮಸ್ಯೆ ಬಗೆಹರಿಸಲು ಸಾಧ್ಯ? ಈ ರಾಜಕಾಲುವೆಗಳು ಎಲ್ಲೆಲ್ಲಿ ಸಮಸ್ಯೆ ಅನುಭವಿಸುತ್ತಿವೆಯೊ ಅಂಥ ಅನೇಕ ಕಡೆ ಜಲಮಂಡಳಿಯವರ ಪೈಪುಗಳೂ ಇವೆ. ಅವುಗಳನ್ನು ಶಿಫ್ಟ್ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಈ ರಾಜಕಾಲುವೆಗಳ ಸಮಸ್ಯೆಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡು ಬಗೆಹರಿಸಲು ಪ್ರಾರಂಭಿಸಿದ್ದೆವು. ಅದಕ್ಕೋಸ್ಕರವೆ ೧೨೧೭ ಕೋಟಿರೂಗಳನ್ನು ಒದಗಿಸಿದ್ದೆವು. ಕೆರೆ ಅಂಗಳಗಳಲ್ಲಿ ಲೇಔಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಿ ನೀರು ಹರಿದು ಹೋಗಲು ಸಮರ್ಪಕವಾಗಿ ವ್ಯವಸ್ಥೆ ಮಾಡಿಲ್ಲ. ಸರ್ಕಾರದ ಬೇಜವಾಬ್ಧಾರಿಯಿಂದಾಗಿ ಈಗ ಸಮಸ್ಯೆ ಉದ್ಭವಿಸಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಜನರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕಾಗಿದೆ. ಸಮಗ್ರ, ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟುಕೊಂಡು ಚರಂಡಿಗಳನ್ನಾಗಲಿ, ರಸ್ತೆಗಳನ್ನಾಗಲಿ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಸೀವೆಜ್ ಟ್ರೀಟ್ಮೆಂಟ್ ಪ್ಲಾಂಟ್ ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನು ಸೂಕ್ತ ತಂತ್ರಜ್ಞಾನದ ಮೂಲಕ ನಿಭಾಯಿಸಬೇಕಾಗಿದೆ. ಅನುದಾನಗಳನ್ನು ಸಮರ್ಪಕವಾಗಿ ಒದಗಿಸಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಚರಂಡಿ ನಿರ್ವಹಣೆಗೆಂದೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರೊಂದಿಗೆ ಅನೇಕ ಸಿಬ್ಬಂದಿಗಳಿದ್ದಾರೆ. ಈ ತಂಡ ಏನು ಮಾಡುತ್ತಿದೆ? ಇವರ ಮೇಲೆ ಯಾರು ನಿಗಾವಹಿಸುತ್ತಿದ್ದಾರೆ? ಹೂಳೆತ್ತಲೆಂದೆ ೮೦ ಕೋಟಿ ಖರ್ಚು ಮಾಡುತ್ತಿದ್ದರೆ, ಈ ಹಣವನ್ನು ಯರ‍್ಯಾರು ನುಂಗಿ ಹಾಕುತ್ತಿದ್ದಾರೆ? ಇದು ಕೇವಲ ೪೦ ಪರ್ಸೆಂಟ್ ವ್ಯವಹಾರವಲ್ಲ. ಇದು ೧೦೦ ಪರ್ಸೆಂಟ್ ವ್ಯವಹಾರ. ಈ ಕುರಿತು ಸೂಕ್ತ ತನಿಖೆ ನಡೆಸಬೇಕಾಗಿದೆ. ಇದರ ಜೊತೆಯಲ್ಲಿ ತುರ್ತಾಗಿ ಪರಿಹಾರ ಕ್ರಮಗಳನ್ನೂ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಕಳೆದೊಂದು ವರ್ಷದಿಂದ ರಸ್ತೆಗಳ ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರು ಕೋಟಿಗಳನ್ನು ನುಂಗಿಹಾಕಿದ್ದಾರೆ. ಇದನ್ನೂ ತನಿಖೆ ಮಾಡಬೇಕು. ಈ ಮಳೆನೀರು ಕಾಲುವೆ ಇಂಜಿನಿಯರುಗಳೂ ಟಿಡಿಆರ್ ದಂಧೆ ಮಾಡುತ್ತಾ ಕೂತಿದ್ದಾರೆ ಮ ಎಂದು ಆಗ್ರಹಿಸಿದ್ದಾರೆ.
ಒತ್ತುವರಿ ತೆರವು ಕೆಲಸ ನಮ್ಮ ಕಾಲದಲ್ಲಿ ಆರಂಭ ಆಗಿದ್ದು, ಅನೇಕ ರಾಜಕಾಲುವೆಗಳ ಒತ್ತುವರಿ ತೆರವು ಇನ್ನೂ ಆಗಬೇಕು. ರಾಜಕಾಲುವೆಗಳ ಮೇಲೆ ಮನೆಯನ್ನೇ ಕಟ್ಟಿದ್ದಾರೆ. ಅದನ್ನು ತೆರವು ಮಾಡಬೇಕು, ನಮ್ಮ ಕಾಲದಲ್ಲಿ ಈ ಕೆಲಸ ಮಾಡಿದ್ದೆವು, ನಾವು ಅಧಿಕಾರದಿಂದ ಹೋದಮೇಲೆ ಈಗ ತೆರವು ಕರ‍್ಯ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.
ಬಿಡಬ್ಲೂಎಸ್ಎಸ್ಬಿ ಮತ್ತು ಮಹಾನಗರ ಪಾಲಿಕೆಯವರ ನಡುವೆ ಸಮನ್ವಯವೇ ಇಲ್ಲ. ಹೀಗಾಗಿ ಸಮಸ್ಯೆಗಳು ಹೆಚ್ಚಾಗಿವೆ. ಇದರಿಂದ ಜನರಿಗೆ ಕಷ್ಟ ಆಗ್ತಿದೆ. ನಾವು ಅಧಿಕಾರದಲ್ಲಿದ್ದಾಗ ಏನೂ ಸಮಸ್ಯೆ ಇರಲಿಲ್ಲ ಅಥವಾ ನಾವೇ ಬೆಸ್ಟ್ ಎಂದು ಹೇಳಲ್ಲ. ಆದರೆ ನಾವು ಸಮಸ್ಯೆಗಳಿಗೆ ಪರಿಹಾರ ಹುಡುಕಿ, ಸರಿಪಡಿಸುತ್ತಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದರೆ ಬೆಂಗಳೂರನ್ನು ಸಿಂಗಾಪುರ್ ಮಾಡ್ತೀವಿ, ಸ್ಮರ‍್ಟ್ ಸಿಟಿ ಮಾಡ್ತೀವಿ ಎನ್ನುತ್ತಿದ್ದರು. ಈಗ ಏನು ಮಾಡಿದ್ದಾರೆ? ಯಡಿಯೂರಪ್ಪ ಅವರು ಎರಡು ರ‍್ಷದಲ್ಲಿ ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸಿ ಬಿಡ್ತೀನಿ ಎಂದಿದ್ದರು. ಬದಲಾಗಿದ್ಯ? ಎಂದು ಪ್ರಶ್ನಿಸಿದ್ದಾರೆ.
ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದವರು, ಹಿರಿಯರು ಅವರು ಬರೆದಿರುವ ಪತ್ರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಕೇವಲ ಬಜೆಟ್ ಪುಸ್ತಕದಲ್ಲಿ ರ‍್ವವ್ಯಾಪಿ, ರ‍್ವಸ್ರ‍್ಷಿ ಎಂದು ಪದ ಬಳಕೆ ಮಾಡಿದ್ರೆ ಸಾಕಾಗಲ್ಲ, ಯೋಜನೆಗಳ ಅನುಷ್ಠಾನ ಆಗಬೇಕು.
ಬಿಬಿಎಂಪಿ ಚುನಾವಣೆ ನಡೆದು ಒಂದು ಒಂಭತ್ತು ತಿಂಗಳು ಆಗಬೇಕಿತ್ತು, ಇಷ್ಟು ಸಮಯ ಯಾಕೆ ಚುನಾವಣೆ ಮಾಡಿಲ್ಲ? ಅವಧಿಗೆ ಸರಿಯಾಗಿ ಚುನಾವಣೆ ನಡೆಸಬೇಕು ಎಂದು ಕಾನೂನು ಹೇಳುತ್ತೆ. ಇದ್ದ ೧೯೫ ವರ‍್ಡ್ ಗಳ ಸಂಖ್ಯೆಯನ್ನು ೨೪೩ ಕ್ಕೆ ಹೆಚ್ಚು ಮಾಡಿದ್ದು ಯಾಕೆ? ಇದನ್ನು ನೆಪ ಮಾಡಿಕೊಂಡು ಚುನಾವಣೆ ವಿಳಂಬ ಮಾಡ್ತಿದ್ದಾರೆ, ಸೋಲುವ ಭಯಕ್ಕೆ ಬೇಕಂತಲೇ ಚುನಾವಣೆ ಮಾಡುತ್ತಿಲ್ಲ. ಆದ್ದರಿಂದ ಈಗ ಅತಂತ್ರ ಪರಿಸ್ಥಿತಿ ನಿರ‍್ಮಾಣವಾಗಿದೆ ಎಂದು ಹೇಳಿದ್ದಾರೆ.