• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಪುನೀತ್‌ ಲಕ್ಕಿಮ್ಯಾನ್‌, ಪ್ರಾರಂಭ, ೨೧ ಅವರ್ಸ್‌ ಫೈಟ್: ಒಂದೇ ದಿನ 6 ಕನ್ನಡ ಚಿತ್ರ ಬಿಡುಗಡೆ!

ಪ್ರತಿಧ್ವನಿ by ಪ್ರತಿಧ್ವನಿ
May 19, 2022
in ಸಿನಿಮಾ
0
ಪುನೀತ್‌ ಲಕ್ಕಿಮ್ಯಾನ್‌, ಪ್ರಾರಂಭ, ೨೧ ಅವರ್ಸ್‌ ಫೈಟ್: ಒಂದೇ ದಿನ 6 ಕನ್ನಡ ಚಿತ್ರ ಬಿಡುಗಡೆ!
Share on WhatsAppShare on FacebookShare on Telegram

ಕೊರೊನಾ ವೈರಸ್‌ ಮತ್ತು ಕೆಜಿಎಫ್‌-2 ಅಬ್ಬರಕ್ಕೆ ಬೆದರಿ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದ ನಿರ್ಮಾಪಕರು ಈಗ ತಾ ಮುಂದು ನಾ ಮುಂದು ಎಂಬಂತೆ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಗಿಬಿದಿದ್ದಾರೆ.

ADVERTISEMENT

ಹೌದು, ಕೆಜಿಎಫ್-‌2 ಬಿಡುಗಡೆ ಆಗಿ ಬರೋಬ್ಬರಿ ಒಂದು ತಿಂಗಳು ಆಗುತ್ತಿದ್ದಂತೆ ವರ್ಷಗಳಿಂದ ಕಾದು ಕುಳಿತಿದ್ದ ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಶುಕ್ರವಾರ ಅಂದರೆ ಮೇ ೨೦ರಂದು ಒಂದೇ ದಿನ ೬ ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿವೆ.

ಒಂದೇ ದಿನ ಇಷ್ಟೊಂದು ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿರುವುದು ತುಂಬಾ ಅಪರೂಪ ಎಂದೇ ಹೇಳಬಹುದು. ಏಕೆಂದರೆ ಮೂರರಿಂದ ನಾಲ್ಕು ಚಿತ್ರಗಳು ಬಿಡುಗಡೆ ಆದರೆ ಪೈಪೋಟಿ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ನಾಳೆ ಒಂದೇ ದಿನ 6 ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಯಾವ ಚಿತ್ರ ಯಶಸ್ಸು ಕಾಣುತ್ತದೆ. ಯಾವುದು ಸೋಲುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಪರಭಾಷೆ ಚಿತ್ರಗಳ ನಡುವೆ ಕನ್ನಡ ಚಿತ್ರಗಳು ಪರಸ್ಪರ ಪೈಪೋಟಿಗೆ ಇಳಿದಿರುವುದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ. ಆದರೆ ಸಿನಿಮಾ ಬಿಡುಗಡೆಗೆ ಅವಕಾಶವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಇದೀಗ ಎಲ್ಲರೂ ಚಿತ್ರ ಬಿಡುಗಡೆಗೆ ಮುಗಿಬಿದ್ದಿದ್ದಾರೆ.

ಅಷ್ಟಕ್ಕೂ ಮೇ 20ರಂದು ಬಿಡುಗಡೆ ಆಗಲಿರುವ 6 ಕನ್ನಡ ಚಿತ್ರಗಳು ಯಾವುವು ಅಂತಿರಾ? ಇಲ್ಲಿದೆ ನೋಡಿ ಅದರ ವಿವರ.

ರವಿಚಂದ್ರನ್‌ ಪುತ್ರ ಮನೋರಂಜನ್‌ ಮತ್ತು ಕೀರ್ತಿ ಕಲ್ಕೇರಿ ನಟಿಸಿ ಮನು ಕಲ್ಯಾಡಿ ನಿರ್ದೇಶಿಸಿರುವ ʻಪ್ರಾರಂಭʼ, ಡಾಲಿ ಧನಂಜಯ್‌ ನಟಿಸಿರುವ ʻ21 ಅವರ್ಸ್‌ʼ, ಸಿದ್ಧಾರ್ಥ್‌ ಮಹೇಶ್ ಶ್ರೀನಗರ ಕಿಟ್ಟಿ ಮತುತ ಆಶಿಕಾ ರಂಗನಾಥ್‌, ಐಂದ್ರಿತಾ ರೈ ನಟಿಸಿ ಧನಕುಮಾರ್‌ ನಿರ್ದೇಶಿಸಿರುವ ಗರುಡ ಬಿಡುಗಡೆ ಆಗುತ್ತಿರುವ ಪ್ರಮುಖ ಚಿತ್ರಗಳು.ʼ

ಇದಲ್ಲದೇ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಕೊನೆಯ ಚಿತ್ರವಾಗಿದ್ದು, ಡಾರ್ಲಿಂಗ್‌ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿ ನಾಗೇಂದ್ರ ಪ್ರಸಾದ್‌ ಚೊಚ್ಚಲ ನಿರ್ದೇಶನದ ಲಕ್ಕಿ ಮ್ಯಾನ್‌ ಹಾಗೂ ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರಗಳು ಕೂಡ ಬಿಡುಗಡೆ ಆಗುತ್ತಿವೆ.

Tags: dolly dhananjaypratidvanipuneeth rajkumar
Previous Post

ಮಳೆಯಿಂದ ನಗರ ಜನ ಸಂಕಷ್ಟ ; ಈ ರಿಯಲ್ ಎಸ್ಟೇಟ್ ಸರ್ಕಾರ ಜನಜೀವನವನ್ನು ಧ್ವಂಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಕಿಡಿ

Next Post

ಹಳ್ಳಿ ಜನರನ್ನು ತಲುಪಲು AAPಯಿಂದ ಗ್ರಾಮಸಂಪರ್ಕ ಅಭಿಯಾನ

Related Posts

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?
Top Story

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

by ಪ್ರತಿಧ್ವನಿ
May 20, 2026
0

ಬೆಂಗಳೂರು : ಜೋಗಿ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾ ಅಬ್ಬರ ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಧ್ರುವ ಸರ್ಜಾ ಕೂಡ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ...

Read moreDetails
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
“ಖಂಡಿತ ನಾಶ ಮಾಡದೆ ಬಿಡುವುದಿಲ್ಲ…” ಪೋಸ್ಟ್ ವೈರಲ್: ದಿಲೀಪ್ ರಾಜ್ ಪತ್ನಿಯ ಸಂದೇಶದ ಹಿಂದೆ ಏನರ್ಥ?

“ಖಂಡಿತ ನಾಶ ಮಾಡದೆ ಬಿಡುವುದಿಲ್ಲ…” ಪೋಸ್ಟ್ ವೈರಲ್: ದಿಲೀಪ್ ರಾಜ್ ಪತ್ನಿಯ ಸಂದೇಶದ ಹಿಂದೆ ಏನರ್ಥ?

May 19, 2026
Next Post
ಹಳ್ಳಿ ಜನರನ್ನು ತಲುಪಲು AAPಯಿಂದ ಗ್ರಾಮಸಂಪರ್ಕ ಅಭಿಯಾನ

ಹಳ್ಳಿ ಜನರನ್ನು ತಲುಪಲು AAPಯಿಂದ ಗ್ರಾಮಸಂಪರ್ಕ ಅಭಿಯಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada