ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ UI ಶುಕ್ರವಾರ ನಗರದ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತವನ್ನ ಆಚರಿಸಿಕೊಂಡಿದೆ.
ಇನ್ನು ಚಿತ್ರ ಸೆಟೇರುವುದಕ್ಕು ಮುನ್ನ ಸಾಕಷ್ಟು ಸದ್ದು ಮಾಡುತ್ತಿದ್ದು ಪ್ರೇಕ್ಷಕರ ಹಾಗು ಅಭಿಮಾನಿಗಳನಿರೀಕ್ಷೆಗಳು ಗರಿಗೆದರಿವೆ. ಇನ್ನು ಚಿತ್ರದ ಮುಹೂರ್ತ ಸಮಾರಂಭಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ದಂಪತಿ, ಕಿಚ್ಚ ಸುದೀಪ, ಡಾಲಿ ಧನಂಜಯ್ ಹಾಗು ವಸಿಷ್ಠ ಸಿಂಹ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇನ್ನು ಈ ಹಿಂದೆ ಸುದ್ದಿಯಾದಂತೆ ನಿರ್ದೇಶಕ ಉಪೇಂದ್ರ ಮುಹೂರ್ತ ಸಮಾರಂಭಕ್ಕೆ ಡಿಫರೆಂಟ್ ಗೆಟಪ್ನಲ್ಲಿ ಬರುವುದಾಗಿ ತಿಳಿಸಿದ್ದರು. ಅದರಂತೆ ಉಪೇಂದ್ರ , ನಿರ್ಮಾಪಕರಾದ ಶ್ರೀಕಾಂತ್ ಹಾಗು ಮನೋಹರನ್ ಶಲ್ಯ ಧರಿಸಿ ನಾಮ ಹಾಕಿಕೊಂಡು ವಿಶೇಷವಾಗಿ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.