ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್ಡಿಒ) ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ (ಮಾನವ ರಹಿತ ಯುದ್ಧ ವಿಮಾನ) ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಏರೋನಾಟಿಕಲ್ ಟೆಸ್ಟ್ ವಲಯದಲ್ಲಿ ಶುಕ್ರವಾರ ಯಶಸ್ವಿಯಾಗಿ ವಿಮಾನ ಹಾರಾಟ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ.
ಸಂಪೂರ್ಣ ಸ್ವಾಯತ್ತ ಮೋಡ್ನಲ್ಲಿ ಕಾರ್ಯ ನಿರ್ವಹಿಸುವ ವಿಮಾನ ಟೇಕ್ ಆಫ್, ವೇ ಪಾಯಿಂಟ್ ನ್ಯಾವಿಗೇಷನ್, ಮೃದು ಹಾರಾಟ ಒಳಗೊಂಡಂತೆ ಅತ್ಯುತ್ತಮ ಫಲಿತಾಂಶ ನೀಡಿದೆ. ಮಾನವರಹಿತ ವಿಮಾನ ಹಾರಾಟ ಪರೀಕ್ಷೆ ಭವಿಷ್ಯದ ವಿಮಾನ ತಂತ್ರಜ್ಞಾನ ಅಭಿವೃದ್ಧಿಗೆ ಮೈಲಿಗಲ್ಲಾಗಿದೆ. ಅಲ್ಲದೇ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತದ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್(ಎಡಿಇ) ಡಿಆರ್ಡಿಒ ಅಡಿಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿರುವ ಮಾನವ ರಹಿತ ವಿಮಾನ ಸಣ್ಣ ಟರ್ಬೋಫ್ಯಾನ್ ಎಂಜಿನ್ನಿಂದ ಚಾಲಿತವಾಗುತ್ತದೆ. ವಿಮಾನದ ಏರ್ಫ್ರೇಮ್, ಅಂಡರ್ ಕ್ಯಾರೇಜ್, ಪೈಲೆಟ್ ಕಂಟ್ರೋಲ್ಗಳು ಹಾಗೂ ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ.