ಲೋಕಸಭೆ ಸದಸ್ಯತ್ವ ಮರುಸ್ಥಾಪನೆಯಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ (ಆಗಸ್ಟ್ 9) ಮೊದಲ ಬಾರಿಗೆ ಲೋಕಸಭೆ ಕಲಾಪದಲ್ಲಿ ಭಾಗವಹಿಸಿ ಮಣಿಪುರ ವಿಚಾರ ಪ್ರಸ್ತಾಪಿಸಿದರು. ಭಾಷಣದ ನಂತರ ನಿರ್ಗಮನದ ವೇಳೆ ಬಿಜೆಪಿ ನಾಯಕರಿಗೆ ಕೈಯಿಂದ ಮುತ್ತು ನೀಡಿದರು. ಇದನ್ನು ಬಿಜೆಪಿ ಖಂಡಿಸಿದೆ.
ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಮಣಿಪುರ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಂತರ ರಾಹುಲ್ ಅವರು ಅಲ್ಲಿಂದ ನಿರ್ಗಮಿಸಿದರು. ಈ ವೇಳೆ ಬಿಜೆಪಿ ನಾಯಕರತ್ತ ನಗು ಬೀರುತ್ತ ಕೈಯಿಂದ ಮುತ್ತು ನೀಡಿದರು. ಇದರಿಂದ ಕೆಲವು ಬಿಜೆಪಿ ನಾಯಕರು ರಾಹುಲ್ ಅವರ ವರ್ತನೆಗೆ ನಗು ಬೀರಿದರು.
ರಾಹುಲ್ ಗಾಂಧಿ ಅವರ ವರ್ತನೆಯನ್ನು ಬಿಜೆಪಿ ನಾಯಕರು ಖಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಕೇವಲ ಸ್ತ್ರೀದ್ವೇಷದ ವ್ಯಕ್ತಿ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದೆಯರಿಗೆ ಕೈಯಿಂದ ಮುತ್ತು ನೀಡಲು ಸಾಧ್ಯ. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಮಹಿಳೆಯರ ಬಗ್ಗೆ ರಾಹುಲ್ ಅವರು ಏನು ಯೋಚಿಸುತ್ತಾರೆ ಎಂಬುದನ್ನು ಇದು ಬಿಂಬಿಸುತ್ತದೆ. ಇದು ಅಶ್ಲೀಲ ನಡೆ” ಎಂದು ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಕುಟುಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಚ್ಚರಿ ಆದರೂ ಸತ್ಯ ! ಕಳವಾದ ಮೊಬೈಲ್‌ಗಳ ಪತ್ತೆಯಲ್ಲಿ ದೇಶದಲ್ಲೇ ಕರ್ನಾಟಕವೇ ಮೊದಲು
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಹುಲ್ ಗಾಂಧಿ ಅವರ ನಡೆಯನ್ನು ಖಂಡಿಸಿದ್ದಾರೆ. ರಾಹುಲ್ ಅವರ ಡೆ ಅನುಚಿತವಾಗಿದೆ ಎಂದು ಸಭಾಧ್ಯಕ್ಷ ಓಂ ಬರ್ಲಾ ಅವರಿಗೆ ದೂರು ನೀಡಿದ್ದಾರೆ. ಈ ದೂರು ಪತ್ರಕ್ಕೆ ಅನೇಕ ಮಹಿಳಾ ಸಂಸದೆಯರು ಸಹಿ ಹಾಕಿದ್ದಾರೆ.
ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಕಲಾಪ ಮತ್ತೆ ಆರಂಭವಾದ ನಂತರ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ್ದ ರಾಹುಲ್ ಗಾಂಧಿ, “ಭಾರತದಲ್ಲಿ ಮಣಿಪುರವನ್ನು ಹತ್ಯೆ ಮಾಡಲಾಗಿದೆ. ಆದ್ದರಿಂದಲೇ ಪ್ರಧಾನಿ ಮೋದಿ ಮಣಿಪುರಕ್ಕೆ ಆಗಮಿಸುತ್ತಿಲ್ಲ” ಎಂದು ಕುಹಕವಾಡಿದ್ದರು.
“ಇಂದು ನಾನು ಹೃದಯದಿಂದ ಮಾತನಾಡುತ್ತೇನೆ. ಯಾವುದೇ ಟೀಕೆ ಮಾಡುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದರು.