
ರಾಜ್ಯದಲ್ಲಿ ಒಳಮೀಸಲಾತಿಗಾಗಿ ಹೋರಾಟ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ ಪರಿಶಿಷ್ಟ ಸಚಿವರು, ಶಾಸಕರು ಒಳಮೀಸಲಾತಿ ವಿಚಾರವಾಗಿ ಮಹತ್ವದ ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಸಚಿವರಾದ ಡಾ. ಜಿ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಹೆಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಆರ್.ಬಿ ತಿಮ್ಮಾಪೂರ್ ಸೇರಿದಂತೆ ಸಮುದಾಯದ ಸಚಿವರು, ಶಾಸಕರು ಉಪಸ್ಥಿತರಿದ್ದು, ಒಳಮೀಸಲಾತಿ ಇಕ್ಕಟ್ಟು ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಒಳಮೀಸಲಾತಿ ಪಟ್ಟಿನ ಆತಂಕ ವ್ಯಕ್ತವಾಗಿದೆ. ಒಳಮೀಸಲಾತಿ ಜಾರಿ ಸಾಧಕ- ಬಾಧಕಗಳು ಹಾಗು ಮುಂದಿನ ನಡೆ ಬಗ್ಗೆ ಸಮಾಲೋಚನೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ಬಗ್ಗೆ 30 ವರ್ಷದಿಂದ ಹೋರಾಟ ನಡೆಯುತ್ತಿದೆ. ಸರ್ಕಾರಿ ಕೆಲಸ ಸೇರಿ ಎಲ್ಲಾ ವಿಭಾಗದಲ್ಲಿಯೂ ನಾವು ಬಹಳ ಹಿಂದಿದ್ದೇವೆ. ಸುಪ್ರಿಕೋರ್ಟ್ ತಿರ್ಮಾನ ಕೊಟ್ಟಿದೆ. ರಾಜ್ಯಗಳಿಗೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ಇದೆ ಎಂದಿದೆ. ಸುಪ್ರಿಕೋರ್ಟ್ ತಿರ್ಮಾನದ ಬಂದ ದಿನವೇ ನಾವು ಸಿಎಂ ಬಳಿ ಮಾತಾಡಿದ್ದೆವು. ಸಿಎಂ ಖಂಡಿತ ಮಾಡೋಣ ಆದಷ್ಟು ಬೇಗ ಮಾಡೋಣ ಎಂದರು. ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿದಾಗಲೂ ಅವರು ಇದೆ ಮಾತಾಡಿದರು. ಕ್ಯಾಬಿನೆಟ್‌ನಲ್ಲಿಯೂ ನಮ್ಮ ಸ್ನೇಹಿತರು ತಿರ್ಮಾನ ತೆಗೆದುಕೊಂಡರು.

ಒಳಮೀಸಲಾತಿ ಅನುಷ್ಠಾನಕ್ಕಾಗಿಯೇ ನ್ಯಾ. ನಾಗಮೋಹನ್ ದಾಸ್ ಅವರ ಕಮೀಟಿ ಮಾಡಿದರು. 2011ದರ ಜನಗಣತಿ ಆದಾರದ ಮೇಲೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿತ್ತು. ತೆಲಂಗಾಣದಲ್ಲಿ ಸುಪ್ರಿಂಕೋರ್ಟ್ ತೀರ್ಪಿನ ಬಳಿಕ ಬಹಳ ಬೇಗ ಒಳಮೀಸಲಾತಿ ಜಾರಿ ಮಾಡಿದ್ರು. ಮಹದೇವಪ್ಪನವರು ಮೀಟಿಂಗ್ ಕರೆದು ಈ ಚಾರ ಮಾತಾಡಿದಾಗ, ಒಳಮೀಸಲಾತಿ ವಿಚಾರದಲ್ಲಿ ನಮ್ಮ ನೂರೇಂಟು ಜಾತಿಗಳು ಒಟ್ಟಾಗಿದೆ. ಆದರೆ ಕೆಲ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡ್ತಿವೆ. ಇದು ಸರಿಯಲ್ಲ, ಕಳೆದ 30 ವರ್ಷದಿಂದ ಹೋರಾಟ ಮಾಡಿರುವ ನಿಮ್ಮ ನೋವು ನಮಗೂ ಗೊತ್ತಿದೆ. ಆದರೆ ಒಂದು ಸಣ್ಣ ತಪ್ಪಾದ್ರೆ ನಾವು ನ್ಯಾಯಾಲಯಕ್ಕೆ ಅಲೆದಾಡ ಬೇಕಾಗುತ್ತದೆ. ಅದಕ್ಕಾಗಿ ತಡ ಆಗ್ತಿದೆ ಎಂದಿದ್ದಾರೆ.
ಇನ್ನು ಒಳ ಮೀಸಲಾತಿ ಜಾರಿಗೆ ಯಾರೂ ಕೂಡ ವಿರೋಧ ಮಾಡ್ತಿಲ್ಲ. ಸಿಎಂ ಸಿದ್ದರಾಮಯ್ಯ ಕೂಡ ಆದಷ್ಟು ಬೇಗ ಒಳ ಮೀಸಲಾತಿ ಜಾರಿ ಮಾಡೋಣ ಎಂದಿದ್ದಾರೆ. ನಾವು ಮಾಡಲ್ಲ ಎಂದಿಲ್ಲ, ಮಾಡೋದಕ್ಕೆ ಏನೂ ಮಾಡಬೇಕು ಮಾಡ್ತೇವೆ.. ಬೇರೆ ಬೇರೆ ಪಕ್ಷ ಎತ್ತಿ ಕಟ್ಟಿದ್ರೆ ಅದಕ್ಕೆ ನೀವು ಒಗ್ಗಬಾರದು. ತಾವೆಲ್ಲ ಸಹಕರಿಸಿ ಟೀಕೆ ಟಿಪ್ಪಣಿ ಬಿಟ್ಟುಬಿಡಿ. ಸಮಾಧಾನ ಆಗಿರಿ, ಆದಷ್ಟು ಬೇಗ ಆಗುತ್ತೆ ಎಂದಿದ್ದಾರೆ. ಮಾಜಿ ಸಚಿವ ಆಂಜನೇಯ ಮಾತನಾಡಿ, ನಾವು 30-35ವರ್ಷದಿಂದ ಹೋರಾಟ ಮಾಡಿದ್ದೆವು. ಸುಪ್ರೀಂಕೋರ್ಟ್ ನಮ್ಮ ಪರವಾದ ತೀರ್ಪು ಕೊಟ್ಟಿದೆ. ನಮ್ಮ ಸಿಎಂ ಜಸ್ಟೀಸ್ ನಾಗಮೋಹನ್ ದಾಸ್ ಅವರ ಕಮೀಟಿ ರಚಿಸಿದ್ದಾರೆ. ವರದಿ ಬಂದ ಮೇಲೆ ಆಗೆ ಆಗುತ್ತೆ. ನಾವು ಸರ್ಕಾರಕ್ಕೆ ಈಗಾಗಲೇ ಹೇಳಿದ್ದೇವೆ. ಒಳ ಮೀಸಲಾತಿ ಜಾರಿ ಆಗೋವರೆಗೂ ಬ್ಯಾಕ್ ಲಾಗ್ ಹುದ್ದೆ ತುಂಬಬಾರದು ಎಂದಿದ್ದೇವೆ. ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಈ ವಿಚಾರದಲ್ಲಿ ಅಪ ಪ್ರಚಾರ ನಡೆದಿದೆ. ಸರ್ಕಾರ ಟೀಕೆ ಮಾಡಬಾರದು ಎಂದಿದ್ದಾರೆ.

ಸಮಿತಿ ವರದಿ ಬಂದ ಮೇಲೆ ಅನುಷ್ಠಾನ ಮಾಡೇ ಮಾಡ್ತಾರೆ. ಏನೂ ಆಗಲ್ಲ ಆಗೇ ಆಗುತ್ತೆ. ಹೋರಾಟಗಾರರು ತಾಳ್ಮೆ ಇಂದಿರಬೇಕು. ಆರೋಗ್ಯಕರವಾಗಿ ಟೀಕೆ ಸರಿ. ಆದರೆ ಇಲ್ಲ ಸಲ್ಲದ ಮಾತಾಡಬಾರದು. ಮಾದಿಗ ಸಮುದಾಯ ಸಂಸ್ಕೃತಿಕವಾಗಿರುವ ಸಮುದಾಯ.. ನಮ್ಮ ಸಮುದಾಯದವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಸಂವಿಧಾನಿಕವಾಗಿ ಟೀಕೆ ಮಾಡಬಾರದು. ನೇಮಕಾತಿ, ಬಡ್ತಿ ಯಾವುದನ್ನೂ ಮಾಡಬಾರದು. ವಯೋಮಿತಿಯ ಅನಾನುಕೂಲ ಆಗದಂತೆಯೂ ನಾವು ನೋಡಿಕೊಳ್ತೇವೆ. ವಯಸ್ಸಿನ ಸಮಸ್ಯೆ ನೇಮಕಾತಿಗೆ ಆದಲ್ಲಿ ವಯೋಮಿತಿ ಸಡಿಲಿಕೆ ಮಾಡ್ತೇವೆ. ಸಿಎಂ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ, ಒಂದು ವೇಳೆ ಶ್ರೀಘ್ರದಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ರೆ ಬೀದಿಗಿಳಿದು ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದಾರೆ.