• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಒಳಮೀಸಲಾತಿ ಪುಕಪುಕ.. ಮಿಡ್​ ನೈಟ್​ ಮೀಟಿಂಗ್​ ರಹಸ್ಯ ಏನು..?

ಕೃಷ್ಣ ಮಣಿ by ಕೃಷ್ಣ ಮಣಿ
March 18, 2025
in ಕರ್ನಾಟಕ, ರಾಜಕೀಯ
0
ಒಳಮೀಸಲಾತಿ ಪುಕಪುಕ.. ಮಿಡ್​ ನೈಟ್​ ಮೀಟಿಂಗ್​ ರಹಸ್ಯ ಏನು..?
Share on WhatsAppShare on FacebookShare on Telegram

ರಾಜ್ಯದಲ್ಲಿ ಒಳಮೀಸಲಾತಿಗಾಗಿ ಹೋರಾಟ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ ಪರಿಶಿಷ್ಟ ಸಚಿವರು, ಶಾಸಕರು ಒಳಮೀಸಲಾತಿ ವಿಚಾರವಾಗಿ ಮಹತ್ವದ ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಸಚಿವರಾದ ಡಾ. ಜಿ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಹೆಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಆರ್.ಬಿ ತಿಮ್ಮಾಪೂರ್ ಸೇರಿದಂತೆ ಸಮುದಾಯದ ಸಚಿವರು, ಶಾಸಕರು ಉಪಸ್ಥಿತರಿದ್ದು, ಒಳಮೀಸಲಾತಿ ಇಕ್ಕಟ್ಟು ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಒಳಮೀಸಲಾತಿ ಪಟ್ಟಿನ ಆತಂಕ ವ್ಯಕ್ತವಾಗಿದೆ. ಒಳಮೀಸಲಾತಿ ಜಾರಿ ಸಾಧಕ- ಬಾಧಕಗಳು ಹಾಗು ಮುಂದಿನ ನಡೆ ಬಗ್ಗೆ ಸಮಾಲೋಚನೆ ಮಾಡಲಾಗಿದೆ.

ADVERTISEMENT
Suresh gowda : ಪಂಚ ಗ್ಯಾರಂಟಿ ಗೆ ಜೋತು ಬಿದ್ದು ಸಿದ್ದರಾಮಯ್ಯ ಹೇಗಾಗಿದ್ದಾರೆ ಗೊತ್ತಾ? #pratidhvani

ಬೆಂಗಳೂರಿನಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ಬಗ್ಗೆ 30 ವರ್ಷದಿಂದ ಹೋರಾಟ ನಡೆಯುತ್ತಿದೆ. ಸರ್ಕಾರಿ ಕೆಲಸ ಸೇರಿ ಎಲ್ಲಾ ವಿಭಾಗದಲ್ಲಿಯೂ ನಾವು ಬಹಳ ಹಿಂದಿದ್ದೇವೆ. ಸುಪ್ರಿಕೋರ್ಟ್ ತಿರ್ಮಾನ ಕೊಟ್ಟಿದೆ. ರಾಜ್ಯಗಳಿಗೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ಇದೆ ಎಂದಿದೆ. ಸುಪ್ರಿಕೋರ್ಟ್ ತಿರ್ಮಾನದ ಬಂದ ದಿನವೇ ನಾವು ಸಿಎಂ ಬಳಿ‌ ಮಾತಾಡಿದ್ದೆವು. ಸಿಎಂ‌ ಖಂಡಿತ ಮಾಡೋಣ ಆದಷ್ಟು ಬೇಗ ಮಾಡೋಣ ಎಂದರು. ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿದಾಗಲೂ ಅವರು‌ ಇದೆ ಮಾತಾಡಿದರು. ಕ್ಯಾಬಿನೆಟ್‌ನಲ್ಲಿಯೂ ನಮ್ಮ ಸ್ನೇಹಿತರು ತಿರ್ಮಾನ ತೆಗೆದು‌ಕೊಂಡರು.

ಒಳಮೀಸಲಾತಿ ಅನುಷ್ಠಾನಕ್ಕಾಗಿಯೇ ನ್ಯಾ. ನಾಗಮೋಹನ್ ದಾಸ್ ಅವರ ಕಮೀಟಿ ಮಾಡಿದರು. 2011ದರ ಜನಗಣತಿ ಆದಾರದ ಮೇಲೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿತ್ತು. ತೆಲಂಗಾಣದಲ್ಲಿ ಸುಪ್ರಿಂಕೋರ್ಟ್ ತೀರ್ಪಿನ ಬಳಿಕ ಬಹಳ ಬೇಗ ಒಳಮೀಸಲಾತಿ ಜಾರಿ ಮಾಡಿದ್ರು. ಮಹದೇವಪ್ಪನವರು ಮೀಟಿಂಗ್ ಕರೆದು ಈ ಚಾರ ಮಾತಾಡಿದಾಗ, ಒಳಮೀಸಲಾತಿ ವಿಚಾರದಲ್ಲಿ ನಮ್ಮ ನೂರೇಂಟು ಜಾತಿಗಳು ಒಟ್ಟಾಗಿದೆ. ಆದರೆ ಕೆಲ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡ್ತಿವೆ. ಇದು ಸರಿಯಲ್ಲ, ಕಳೆದ 30 ವರ್ಷದಿಂದ ಹೋರಾಟ ಮಾಡಿರುವ ನಿಮ್ಮ ನೋವು ನಮಗೂ ಗೊತ್ತಿದೆ. ಆದರೆ ಒಂದು ಸಣ್ಣ ತಪ್ಪಾದ್ರೆ ನಾವು ನ್ಯಾಯಾಲಯಕ್ಕೆ ಅಲೆದಾಡ ಬೇಕಾಗುತ್ತದೆ. ಅದಕ್ಕಾಗಿ ತಡ ಆಗ್ತಿದೆ ಎಂದಿದ್ದಾರೆ.

ಇನ್ನು ಒಳ ಮೀಸಲಾತಿ ಜಾರಿಗೆ ಯಾರೂ ಕೂಡ ವಿರೋಧ ಮಾಡ್ತಿಲ್ಲ. ಸಿಎಂ ಸಿದ್ದರಾಮಯ್ಯ ಕೂಡ ಆದಷ್ಟು ಬೇಗ ಒಳ ಮೀಸಲಾತಿ ಜಾರಿ ಮಾಡೋಣ ಎಂದಿದ್ದಾರೆ. ನಾವು ಮಾಡಲ್ಲ ಎಂದಿಲ್ಲ, ಮಾಡೋದಕ್ಕೆ ಏನೂ ಮಾಡಬೇಕು ಮಾಡ್ತೇವೆ.. ಬೇರೆ ಬೇರೆ ಪಕ್ಷ ಎತ್ತಿ ಕಟ್ಟಿದ್ರೆ ಅದಕ್ಕೆ ನೀವು ಒಗ್ಗಬಾರದು. ತಾವೆಲ್ಲ ಸಹಕರಿಸಿ ಟೀಕೆ ಟಿಪ್ಪಣಿ ಬಿಟ್ಟುಬಿಡಿ. ಸಮಾಧಾನ ಆಗಿರಿ, ಆದಷ್ಟು ಬೇಗ ಆಗುತ್ತೆ ಎಂದಿದ್ದಾರೆ. ಮಾಜಿ ಸಚಿವ ಆಂಜನೇಯ ಮಾತನಾಡಿ, ನಾವು 30-35ವರ್ಷದಿಂದ‌ ಹೋರಾಟ ಮಾಡಿದ್ದೆವು. ಸುಪ್ರೀಂಕೋರ್ಟ್ ನಮ್ಮ ಪರವಾದ ತೀರ್ಪು ಕೊಟ್ಟಿದೆ. ನಮ್ಮ ಸಿಎಂ ಜಸ್ಟೀಸ್ ನಾಗಮೋಹನ್ ದಾಸ್ ಅವರ ಕಮೀಟಿ ರಚಿಸಿದ್ದಾರೆ. ವರದಿ ಬಂದ ಮೇಲೆ ಆಗೆ ಆಗುತ್ತೆ. ನಾವು ಸರ್ಕಾರಕ್ಕೆ ಈಗಾಗಲೇ ಹೇಳಿದ್ದೇವೆ. ಒಳ ಮೀಸಲಾತಿ ಜಾರಿ ಆಗೋವರೆಗೂ ಬ್ಯಾಕ್ ಲಾಗ್ ಹುದ್ದೆ ತುಂಬಬಾರದು ಎಂದಿದ್ದೇವೆ. ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಈ ವಿಚಾರದಲ್ಲಿ ಅಪ ಪ್ರಚಾರ ನಡೆದಿದೆ. ಸರ್ಕಾರ ಟೀಕೆ ಮಾಡಬಾರದು ಎಂದಿದ್ದಾರೆ.

ಸಮಿತಿ ವರದಿ ಬಂದ ಮೇಲೆ ಅನುಷ್ಠಾನ ಮಾಡೇ ಮಾಡ್ತಾರೆ. ಏನೂ ಆಗಲ್ಲ ಆಗೇ ಆಗುತ್ತೆ. ಹೋರಾಟಗಾರರು ತಾಳ್ಮೆ ಇಂದಿರಬೇಕು. ಆರೋಗ್ಯಕರವಾಗಿ ಟೀಕೆ ಸರಿ. ಆದರೆ ಇಲ್ಲ ಸಲ್ಲದ ಮಾತಾಡಬಾರದು. ಮಾದಿಗ ಸಮುದಾಯ ಸಂಸ್ಕೃತಿಕವಾಗಿರುವ ಸಮುದಾಯ.. ನಮ್ಮ ಸಮುದಾಯದವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಸಂವಿಧಾನಿಕವಾಗಿ ಟೀಕೆ ಮಾಡಬಾರದು. ನೇಮಕಾತಿ, ಬಡ್ತಿ ಯಾವುದನ್ನೂ ಮಾಡಬಾರದು. ವಯೋಮಿತಿಯ ಅನಾನುಕೂಲ ಆಗದಂತೆಯೂ ‌ನಾವು ನೋಡಿಕೊಳ್ತೇವೆ. ವಯಸ್ಸಿನ ಸಮಸ್ಯೆ ನೇಮಕಾತಿಗೆ ಆದಲ್ಲಿ ವಯೋಮಿತಿ ಸಡಿಲಿಕೆ ಮಾಡ್ತೇವೆ. ಸಿಎಂ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ, ಒಂದು ವೇಳೆ ಶ್ರೀಘ್ರದಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ರೆ ಬೀದಿಗಿಳಿದು ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಗಳು ಚಿನ್ನದ ಕಳ್ಳಿ.. ಪೊಲೀಸ್​ ಅಪ್ಪನಿಗೆ ತನಿಖೆ ಬಿಸಿ..

Next Post

ಅಧಿವೇಶನದ ನಡುವೆ ದಿಲ್ಲಿಗೆ ಓಡಿದ್ಯಾಕೆ ಡಿ.ಕೆ ಸಾಹೇಬ್ರು..?

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಅಧಿವೇಶನದ ನಡುವೆ ದಿಲ್ಲಿಗೆ ಓಡಿದ್ಯಾಕೆ ಡಿ.ಕೆ ಸಾಹೇಬ್ರು..?

ಅಧಿವೇಶನದ ನಡುವೆ ದಿಲ್ಲಿಗೆ ಓಡಿದ್ಯಾಕೆ ಡಿ.ಕೆ ಸಾಹೇಬ್ರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada