ಕಳೆದ ಹಲವು ತಿಂಗಳುಗಳಿದ ರಷ್ಯಾ ಮತ್ತು ಉಕ್ರೇನ್ (Russia & Ukraine) ನಡುವೆ ಯುದ್ಧ ನಡೆಯುತ್ತಿದ್ದು ಇಡೀ ಜಗತ್ತು ಮೂರನೇ ಮಹಾ ಯುದ್ಧದ (3rd world war) ಆತಂಕದಲ್ಲಿತ್ತು. ಈ ಮಧ್ಯೆ ಇತ್ತೀಚೆಗೆ ಉಭಯ ದೇಶಗಳು ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಿ ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದವು. ಆದ್ರೆ ಈ ನಿರೀಕ್ಷೆ ಸುಳ್ಳಾಗಿದೆ.

ಇಂದು (ಮಾ.೧೧) ರಷ್ಯಾದ ರಾಜಧಾನಿ ಮಾಸ್ಕೋದಲ್ಲಿನ (Mosco) ಕಟ್ಟಡ ಒಂದರ ಮೇಲೆ ಉಕ್ರೇನ್ (Ukraine) ಏಕಾಏಕಿ ದಾಳಿ ನಡೆಸಿದ್ದು,ಈ ಅನಿರೀಕ್ಷಿತ ದಾಳಿಯಿಂದ ರಷ್ಯಾ ಕಕ್ಕಾಬಿಕ್ಕಿಯಾಗಿದೆ. ಉಕ್ರೇನ್ ನಿಂದ ಡ್ರೋಣ್ ಬಳಸಿ (Drine attack) ಮಾಸ್ಕೋ ಕಟ್ಟಡದ ಮೇಲೆ ದಾಳಿ ನಡೆಸಲಾಗಿದೆ.

ಒಂದೆಡೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ, ಮತ್ತೊಂದೆಡೆ ಯುದ್ಧ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಉಕ್ರೇನ್ ನೆರವಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ಡ್ರೋಣ್ ನುಗ್ಗಿಸಿ ದಾಳಿ ನಡೆಸಿದ್ದು, ತಾನಿನ್ನೂ ಯುದ್ಧಕ್ಕೆ ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ಉಕ್ರೇನ್ ಸೇನೆ ರವಾನೆ ಮಾಡಿದಂತಿದೆ.