ರಾಜ್ಯದಲ್ಲಿ ಚುನಾವಣಾ ಗಾಳಿ ಜೋರಾಗಿ ಬೀಸುತ್ತಿದೆ. ಅದರ ನಡುವೆ ಯುಗಾದಿ ಹಬ್ಬದ ಸಂಭ್ರಮ ಸಡಗರ. ಇವತ್ತು ಹಬ್ಬ ಮುಕ್ತಾಯವಾಗಿದ್ದು, ನಾಳೆ ಹೊಸ ತೊಡಕು ಆಚರಣೆ ಮಾಡಲಾಗುತ್ತದೆ. ಈ ನಡುವೆ ಪಿಯು ಬೋರ್ಡ್ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡಲು ನಿರ್ಧಾರ ಮಾಡಿದೆ. ಈ ಬಾರಿ ಫಲಿತಾಂಶದಲ್ಲಿ ಏರುಪೇರಾದರೂ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳುವಂತಿಲ್ಲ.

ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಬೆಳಗ್ಗೆ 11 ಗಂಟೆಯ ನಂತರ https://karresults.nic.in ವೀಕ್ಷಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶದ ಪ್ರಮುಖಾಂಶಗಳನ್ನು ಬೆಳಗ್ಗೆ 10 ಕ್ಕೆ ಸುದ್ದಿಗೋಷ್ಠಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಮಾರ್ಚ್ 1 ರಿಂದ ಆರಂಭವಾಗಿದ್ದ ಪರೀಕ್ಷೆ ಮಾರ್ಚ್ 22ರ ತನಕ ನಡೆದಿತ್ತು. ಇದೀಗ ಅತೀ ವೇಗದಲ್ಲಿ ಫಲಿತಾಂಶ ಪ್ರಕಟ ಮಾಡಲಾಗ್ತಿದೆ.
ಈ ಬಾರಿ ಇದು ಅಂತಿಮ ಫಲಿತಾಂಶ ಆಗಿರುವುದಿಲ್ಲ. ಯಾಕಂದ್ರೆ ಪರೀಕ್ಷೆಯಲ್ಲಿ ಫೇಲ್ ಆದವರು ಮುಂದಿನ ತಿಂಗಳು ಮತ್ತೆ ಪರೀಕ್ಷೆ ಬರೆಯಬಹುದು. ಇನ್ನು ಪರೀಕ್ಷೆ ಬರೆದು ಕಡಿಮೆ ಅಂಕ ಬಂದಿದ್ದರೂ ಇನ್ನೊಮ್ಮೆ ಪಾಸ್ ಆಗಿರುವ ವಿಷಯವನ್ನೇ ಮರು ಪರೀಕ್ಷೆ ಬರೆಯಬಹುದು. ಇದೇ ರೀತಿ ಎರಡು ಅವಕಾಶಗಳಿವೆ. ಫೇಲ್ ಆದವರೂ ಕೂಡ ಮತ್ತೆ ಎರಡು ಬಾರಿ ಅವಕಾಶದಲ್ಲಿ ಪಾಸ್ ಆಗಿ ಮುಂದುವರಿಯಲು ಯಾವುದೇ ಅಡ್ಡಿಯಿಲ್ಲ.

ಕೃಷ್ಣಮಣಿ